Select Your Language

Notifications

webdunia
webdunia
webdunia
webdunia

ಆರ್​ಟಿಓ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡ ಲಕ್ಷ್ಮಿ ಹೆಬ್ಬಾಳ್ಕರ್ ಕಾರಣವೇನು ಗೊತ್ತಾ ??

ಆರ್​ಟಿಓ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡ ಲಕ್ಷ್ಮಿ ಹೆಬ್ಬಾಳ್ಕರ್ ಕಾರಣವೇನು ಗೊತ್ತಾ ??
ಬೆಂಗಳೂರು , ಮಂಗಳವಾರ, 26 ಜುಲೈ 2022 (17:44 IST)
ಆಟೋ, ಟೆಂಪೋ ಚಾಲಕರಿಂದ ಆರ್​ಟಿಓ ಅಧಿಕಾರಿಗಳು ದಂಡ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪ ಹಿನ್ನೆಲೆ ನಗರದ ಸಂಗೋಳ್ಳಿ ರಾಯಣ್ಣ ವೃತ್ತದ ಬಳಿಯಿರುವ ಆರ್​ಟಿಓ‌ ಕಚೇರಿಗೆ ಆಗಮಿಸಿದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಬೆಳಗಾವಿ ಪ್ರಾದೇಶಿಕ ಸಾರಿಗೆ ಆಯುಕ್ತ ಶಿವಾನಂದ ಮಗದುಮ್ಮ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
 
ಹೆಬ್ಬಾಳ್ಕರ್, ಆಟೋ, ಟೆಂಪೋ ಚಾಲಕರಿಂದ ಆರ್​ಟಿಓ ಅಧಿಕಾರಿಗಳು ತಪಾಸಣೆ ಹೆಸರಲ್ಲಿ ದಂಡ ವಸೂಲಿ ಮಾಡುತ್ತಿದ್ದಾರೆ. ಅವರೆಲ್ಲ ಹೊಟ್ಟೆಪಾಡಿಗಾಗಿ ‌ಮಳೆಯಲ್ಲಿ, ಚಳಿಯಲ್ಲಿ, ಬಿಸಿಲಲ್ಲಿ ದುಡಿಯುತ್ತಿದ್ದಾರೆ. ಕಳ್ಳತನ, ಮೋಸ, ಸುಳ್ಳು ಹೇಳದೆ ಬೆವರು ಸುರಿಸಿ ದುಡಿಯವವರ ಮೇಲೆ ಯಾಕೆ ಕೇಸ್ ಹಾಕ್ತುತ್ತಿದ್ದೀರಿ ಎಂದು‌ ಅಧಿಕಾರಿಗಳ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.
 
ಸಾರಿಗೆ ಆಯುಕ್ತರನ್ನ ತರಾಟೆಗೆ ತೆಗೆದುಕೊಂಡ ಲಕ್ಷ್ಮೀ ಹೆಬ್ಬಾಳ್ಕರ್
ಮೇಲಿನವರು ಟಾರ್ಗೆಟ್ ‌ಕೊಟ್ಟಿದ್ದಾರೆ ಎಂದು ಕೇಸ್ ಹಾಕಿದ್ರೆ ಹೇಂಗೆ.? ಅವರು ಎಲ್ಲಿ ಸಾಯಬೇಕು. ಅವರೇನು ಶ್ರೀಮಂತರಲ್ಲ. ಸಾಲ ಕಟ್ಟಿ, ಉಳಿದ ದುಡ್ಡಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ನಿಮಗೆ ಟಾರ್ಗೆಟ್ ‌ಕೊಟ್ಟಿರುವುದಕ್ಕೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಮಾಡ್ತಿರಾ?. ನೀವು ಸರ್ಕಾರಿ ನೌಕರರು. ನಾನು ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದೇನೆ. ಕಾನೂನು ‌ಚೌಕಟ್ಟು ಬಿಟ್ಟು ಏನು ಆಗಲ್ಲ. ಬಡವರಿಗೆ ತೊಂದರೆ ಆಗಬಾರದು ಎಂದು ನಿಮ್ಮ ಬಳಿ ಬಂದಿದ್ದೇನೆ. ಇವತ್ತು ನಿಮ್ಮ ಮುಂದೆ ಕುಳಿತಿದ್ದೇನೆ. ನಾಳೆ, ನಿಮ್ಮ ಕಚೇರಿ ಮುಂದೆ ಬಂದು ಧರಣಿ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪಾಸಾದ ಮೇಲೆ ವಿದ್ಯಾರ್ಥಿಯಿಂದ ಶಿಕ್ಷಕಿಗೆ ಕ್ಲಾಸ್ ವಿಚಿತ್ರ ಎನಿಸಿದ್ರೂ ನಿಜ ...!!!!