Publish Date: Tue, 26 Jul 2022 (17:00 IST)
Updated Date: Tue, 26 Jul 2022 (16:03 IST)
ವಿನಯ್ ಗುರೂಜಿ ಟ್ರೋಲಿಗರ ಮೇಲೆ ದೂರು ದಾಖಲಿಸಿದ್ಧಾರೆ. ಟ್ರೋಲ್ ಪೇಜ್ ಸೇರಿ ಹಲವು ಯೂಟ್ಯೂಬ್ ಚಾನಲ್ಗಳ ಮೇಲೆ ಪ್ರಕರಣ ದಾಖಲು ಮಾಡಿದ್ಧಾರೆ. ಕೆಪಿಸಿಸಿ ಆನೇಕಲ್ ವಿಭಾಗ ಸೋಷಿಯಲ್ ಮೀಡಿಯಾ ವಿಂಗ್ ಸೇರಿ 22 ಟ್ರೋಲ್ ಪೇಜ್ ಗಳ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.
ತಲೆಯ ಮೇಲೆ ಕಾಲಿಡುವ ದೃಶ್ಯ ಪೋಸ್ಟ್ ಮಾಡಿ ಅದರಲ್ಲಿ ಕೆಟ್ಟದಾಗಿ ಕಮೆಂಟ್ ಹಾಕಿದ್ದಾರೆಂಬ ಕಾರಣಕ್ಕೆ ದೂರು ನೀಡಿದ್ಧಾರೆ. ಟ್ರೋಲ್ನಲ್ಲಿ ರಾತ್ರಿ ಕುಡಿದ ಹೆಂಡದ ಅಮಲಿನಲ್ಲಿ ತಲೆಯ ಮೇಲೆ ಕಾಲಿಡುತ್ತಿರುವ ಗುರೂಜಿ , ನಶೆಯಲ್ಲಿ ನಿಲ್ಲೋಕೂ ಆಗುತ್ತಿಲ್ಲ,
ಗಾಂಜಾ ಸಿಗರೇಟು ಸೇದ್ತಾನೆ, ಎಂದೂ ಒಪ್ಪಿಕೊಳ್ಳಬೇಕಾಗುತ್ತೆ. ಗುರೂಜಿ ಎಂದು ಹೇಳಿಕೊಳ್ಳುವ ಎಲ್ಲಾರೂ ಸ್ಟಾರ್ ಹೊಟೇಲ್ ನಲ್ಲಿ ನಡೆಸುವ ರಂಗಿನಾಟ ಇದೆ ಎಂದು ಟ್ರೋಲ್ ಪೇಜ್ ಗಳು ಕಮೆಂಟ್ ಮಾಡಿದೆ. ಇಂತಹ ಟ್ರೋಲ್ ಗಳಿಂದ ಸ್ವಾಮೀಜಿಯವರ ತೇಜೋವಧೆ ಆಗಿದೆ. ಅವರ ಲಕ್ಷಾಂತರ ಭಕ್ತರ ಮನಸ್ಸಿಗೆ ಘಾಸಿಯುಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಸಮಾಜದಲ್ಲಿ ಅಶಾಂತಿಯನ್ನ ಸೃಷ್ಟಿಸಿ ಸಮಾಜದ ಸ್ವಾಸ್ಥ್ಯ ಕದಡುವ ಕೆಲಸ ಮಾಡುತ್ತಿರುವ ಟ್ರೋಲಿಗರ ಮೇಲೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ಧಾರೆ. ಈ ಹಿನ್ನೆಲೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.