Publish Date: Tue, 26 Jul 2022 (08:50 IST)
Updated Date: Tue, 26 Jul 2022 (09:07 IST)
ನವದೆಹಲಿ: ತನ್ನ ಪ್ರೇಯಸಿಯನ್ನು ಮೆಚ್ಚಿಸಲು ಹುಡುಗರು ಏನೆಲ್ಲಾ ಸಾಹಸ ಮಾಡುತ್ತಾರೆ. ಇಲ್ಲೊಬ್ಬ ಯುವಕ ಇದೇ ರೀತಿ ಸಾಹಸ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ. ಅಷ್ಟಕ್ಕೂ ಆತ ಮಾಡಿದ್ದೇನು ಗೊತ್ತಾ?
ಪ್ರೇಯಸಿಯನ್ನು ಮೆಚ್ಚಿಸಲು ಥೇಟ್ ವಾಯುಪಡೆ ಅಧಿಕಾರಿಗಳಂತೆ ನಕಲಿ ಡ್ರೆಸ್ ತೊಟ್ಟು ದೆಹಲಿಯ ವಾಯುಪಡೆ ಕೇಂದ್ರಕ್ಕೆ ನುಗ್ಗಿದ್ದ. ಬಳಿಕ ಅಲ್ಲಿ ಸೆಲ್ಫೀ ತೆಗೆದುಕೊಂಡು ಪ್ರಿಯತಮೆಗೆ ಕಳುಹಿಸಲು ಯೋಜನೆ ಹಾಕಿದ್ದ.
ಆದರೆ ನಕಲಿ ಯೂನಿಫಾರ್ಮ್ ತೊಟ್ಟು ಬಂದಿದ್ದ ಆತನ ಮೇಲೆ ಸಂಶಯಗೊಂಡ ಅಧಿಕಾರಿಗಳು ಪ್ರಶ್ನೆ ಮಾಡಿದ್ದರು. ಆಗ ಆತನ ಉತ್ತರ ಸಂಶಯಾಸ್ಪದವಾಗಿತ್ತು. ಆಗ ಅಧಿಕಾರಿಗಳು ಆತನನ್ನು ಚೆನ್ನಾಗಿಯೇ ವಿಚಾರಿಸಿಕೊಂಡಿದ್ದಾರೆ. ಈ ವೇಳೆ ತನ್ನ ಪ್ರೇಯಸಿಗೆ ತಾನು ವಾಯು ಸೇನೆ ಅಧಿಕಾರಿ ಎಂದು ಹೇಳಿದರೂ ನಂಬುತ್ತಿಲ್ಲ.ಅದಕ್ಕೆ ಆಕೆಯನ್ನು ನಂಬಿಸಲು ಈ ಯೂನಿಫಾರ್ಮ್ ತೊಟ್ಟು ಬಂದಿರುವುದಾಗಿ ಬಾಯ್ಬಿಟ್ಟಿದ್ದ. ಬಳಿಕ ಆತನನ್ನು ಬಂಧಿಸಲಾಯಿತು.