Select Your Language

Notifications

webdunia
webdunia
webdunia
webdunia

ಪ್ರೇಯಸಿಗಾಗಿ ಆಫೀಸರ್ ವೇಷದಲ್ಲಿ ಬಂದ ಪ್ರಿಯಕರ! ಏನ್ ಆಯ್ತು ಗೊತ್ತ?

ಪ್ರೇಯಸಿಗಾಗಿ ಆಫೀಸರ್ ವೇಷದಲ್ಲಿ ಬಂದ ಪ್ರಿಯಕರ! ಏನ್ ಆಯ್ತು ಗೊತ್ತ?
ನವದೆಹಲಿ , ಸೋಮವಾರ, 25 ಜುಲೈ 2022 (15:41 IST)
ನವದೆಹಲಿ : ಪ್ರೇಯಸಿಯನ್ನು ಇಂಪ್ರೆಸ್ ಮಾಡಲು ದೆಹಲಿಯ ವಾಯುಸೇನೆ ನಿಲ್ದಾಣದ ಆವರಣಕ್ಕೆ ಅಧಿಕಾರಿಯಂತೆ ವೇಷ ಧರಿಸಿ ಬಂದ ವ್ಯಕ್ತಿಯನ್ನು ಬಂಧಿಸಲಾಗಿದೆ.

ವ್ಯಕ್ತಿಯನ್ನು ಅಲಿಗಢದ ನಿವಾಸಿ ಗೌರವ್ ಎಂದು ಗುರುತಿಸಲಾಗಿದೆ. ಜುಲೈ 22 ರಂದು ವಾಯುಪಡೆಯ ನಿಲ್ದಾಣಕ್ಕೆ ಎಂಟ್ರಿ ಕೊಟ್ಟ ವ್ಯಕ್ತಿ, ಕಾಂಪೌಂಡ್ಗೆ ಪ್ರವೇಶಿಸಲು ಯತ್ನಿಸಿದಾಗ ಸಿಕ್ಕಿಬಿದ್ದಿದ್ದಾನೆ.

ಐಡಿ ತಪಾಸಣೆಗೆಂದು ಗೌರವ್ ಅನ್ನು ಪ್ರವೇಶ ದ್ವಾರದಲ್ಲಿ ನಿಲ್ಲಿಸಲಾಯಿತು. ನಂತರ ಭದ್ರತಾ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಲು ವ್ಯಕ್ತಿ ತಡಬಡಾಯಿಸಿದಾಗ ಆತನ ಮೇಲೆ ಅನುಮಾನ ಮೂಡಿದೆ.

ಬಳಿಕ ವ್ಯಕ್ತಿಯನ್ನು ವಿಚಾರಣೆ ನಡೆಸಿದಾಗ, ಭದ್ರತಾ ಸಂಸ್ಥೆಯಲ್ಲಿ ಸಮವಸ್ತ್ರದಲ್ಲಿ ಸೆಲ್ಫಿ ತೆಗೆದುಕೊಳ್ಳುವ ಸಲುವಾಗಿ ವಾಯುಪಡೆಯ ನಿಲ್ದಾಣಕ್ಕೆ ಬಂದಿರುವುದಾಗಿ ವ್ಯಕ್ತಿ ಸತ್ಯ ಬಾಯ್ಬಿಟ್ಟಿದ್ದಾನೆ.

ತಾನು ಐಎಎಫ್ನಲ್ಲಿ ಅಧಿಕಾರಿ ಎಂದು ಹೇಳಿದಾಗ ತನ್ನ ಪ್ರಿಯತಮೆ ನಂಬಲಿಲ್ಲ. ಹಾಗಾಗಿ ಅವಳನ್ನು ಮೆಚ್ಚಿಸಲು ಹೀಗೆ ಮಾಡಿದೆ ಎಂದಿದ್ದಾನೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಸಿಇಟಿ ಫಲಿತಾಂಶದ ಡೇಟ್ ಫೀಕ್ಸ್?