Publish Date: Mon, 25 Jul 2022 (09:43 IST)
Updated Date: Mon, 25 Jul 2022 (10:30 IST)
ನವದೆಹಲಿ : ಸುಪ್ರೀಂಕೋರ್ಟ್ನಲ್ಲಿ ಇಂದು ಮೇಕೆದಾಟು ಅಣೆಕಟ್ಟು ವಿಚಾರ ಚರ್ಚೆಗೆ ಬರಲಿದೆ.
ಮೇಕೆದಾಟು ಡ್ಯಾಂಗೆ ವಿರೋಧ ವ್ಯಕ್ತಪಡಿಸಿರುವ ತಮಿಳುನಾಡು, ಡ್ಯಾಂ ನಿರ್ಮಾಣಕ್ಕೆ ಅನುಮತಿ ಕೊಡಲ್ಲ. ಮೇಕೆದಾಟು ಅಣೆಕಟ್ಟು ನಿರ್ಮಾಣ ಬಗ್ಗೆ ನಿರ್ಧರಿಸುವ ಯಾವುದೇ ಅಧಿಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಇಲ್ಲ.
ಪ್ರಾಧಿಕಾರ ಸುಪ್ರೀಂಕೋರ್ಟ್ ಕಾರ್ಯ ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕು. ನೀರು ಹಂಚಿಕೆ ಬಗ್ಗೆ ಪರಿಶೀಲನೆ ಮಾಡಬೇಕೇ ಹೊರತು ಅಣೆಕಟ್ಟು ನಿರ್ಮಾಣ ಮಾಡುವ ಬಗ್ಗೆ ನಿರ್ಧರಿಸುವ ಅಧಿಕಾರ ಇಲ್ಲ. ಹೀಗಾಗಿ, ಸಭೆಯಲ್ಲಿ ಅಣೆಕಟ್ಟು ನಿರ್ಮಾಣದ ಬಗ್ಗೆ ಅಥವಾ ಮೇಕೆದಾಟು ಡಿಪಿಆರ್ ಬಗ್ಗೆ ಚರ್ಚೆ ಮಾಡಬಾರದು ಎಂದು ಹೇಳಿದೆ.
ಕಳೆದ 9 ವರ್ಷದಲ್ಲಿ 5 ವರ್ಷ ಕರ್ನಾಟಕ ಸಮರ್ಪಕ ನೀರು ಹರಿಸದೇ ಮೋಸ ಮಾಡಿದೆ. ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ಕೆಳ ಹಂತದ ರಾಜ್ಯಗಳಿಗೆ ತೊಂದರೆಯಾಗಲಿದೆ ಅಂತ ಅಫಿಡೆವಿಟ್ನಲ್ಲಿ ಉಲ್ಲೇಖಿಸಿದೆ.