Publish Date: Fri, 29 Jul 2022 (08:50 IST)
Updated Date: Fri, 29 Jul 2022 (09:08 IST)
ನವದೆಹಲಿ: ಚಪಾತಿ ಕೊಡಲಿಲ್ಲ ಎಂಬ ಕಾರಣಕ್ಕೆ ರಿಕ್ಷಾವಾಲಾನನ್ನು ಚಿಂದಿ ಆಯುವ ವ್ಯಕ್ತಿಯೊಬ್ಬ ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಇದೀಗ ಆರೋಪಿಯನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆಯಲ್ಲಿ ಬಿದ್ದಿದ್ದ ರಿಕ್ಷಾವಾಲಾನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು. ಆಗ ಆತ ಸಾವನ್ನಪ್ಪಿದ್ದ.
ರಸ್ತೆ ಬದಿ ಕೂತು ಹೋಟೆಲ್ ನಿಂದ ಖರೀದಿಸಿದ್ದ ಚಪಾತಿ ತಿನ್ನುತ್ತಿದ್ದಾಗ ಪಾನಮತ್ತನಾಗಿ ಬಂದ ಆರೋಪಿ ಚಪಾತಿ ಕೇಳಿದ್ದ. ಆಗ ರಿಕ್ಷಾವಾಲ ಒಂದು ಚಪಾತಿ ಕೊಟ್ಟಿದ್ದ. ಆತ ಮತ್ತೊಂದು ಕೇಳಿದಾಗ ರಿಕ್ಷಾವಾಲ ನಿರಾಕರಿಸಿದ್ದ. ಇದರಿಂದ ಸಿಟ್ಟಿಗೆದ್ದ ಆರೋಪಿ ಕೊಲೆ ಮಾಡಿದ್ದಾನೆ.