ಬೆಂಗಳೂರು: ಕಿಚ್ಚ ಸುದೀಪ್ ನಡೆಸಿಕೊಡುವ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಒಟಿಟಿ ಆವೃತ್ತಿ ಆರಂಭಕ್ಕೆ ದಿನಾಂಕ ನಿಗದಿಯಾಗಿದೆ.
ಆಗಸ್ಟ್ 6 ರಿಂದ ಬಿಗ್ ಬಾಸ್ ಶೋ ಪ್ರಸಾರವಾಗಲಿದೆ ಎನ್ನಲಾಗಿದೆ. ಈ ಬಾರಿ ವೂಟ್ ಆಪ್ ನಲ್ಲಿ ಪ್ರಸಾರವಾಗುತ್ತಿರುವುದು ವಿಶೇಷ.
ಹೀಗಾಗಿ ಇದು ಸೀಸನ್ 9 ಅಲ್ಲ, ಸೀಸನ್ ಒಂದು ಎಂದು ಪ್ರೋಮೋದಲ್ಲಿ ಸುದೀಪ್ ಸ್ಪಷ್ಟಪಡಿಸಿದ್ದಾರೆ. ಕಿಚ್ಚ ಸುದೀಪ್ ನಿರೂಪಕರಾಗಿರುವ ಶೋನಲ್ಲಿ ಈ ಬಾರಿಯ ವಿಶೇಷವೇನಿರಬಹುದು, ಸ್ಪರ್ಧಿಗಳು ಯಾರಿರಬಹುದು ಎಂಬ ಕುತೂಹಲ ಕೊನೆಯ ಕ್ಷಣದಲ್ಲಷ್ಟೇ ವೀಕ್ಷಕರಿಗೆ ತಿಳಿದುಬರಲಿದೆ.