Publish Date: Thu, 11 Aug 2022 (08:00 IST)
Updated Date: Thu, 11 Aug 2022 (08:44 IST)
ಮುಂಬೈ: ಇತ್ತೀಚೆಗೆ ಬಾಲಿವುಡ್ ಸಿನಿಮಾಗಳು ಒಂದಲ್ಲಾ ಒಂದು ಕಾರಣಕ್ಕೆ ಬಹಿಷ್ಕಾರದ ಅಭಿಯಾನದ ಭೀತಿ ಎದುರಿಸುತ್ತಿವೆ. ಇದರಿಂದಾಗಿ ಚಿತ್ರದ ಗಳಿಕೆಗೂ ತೊಂದರೆಯಾಗುತ್ತಿದೆ.
ಇದೀಗ ಅಮೀರ್ ಖಾನ್ ಬಹಳ ಸಮಯದ ನಂತರ ತೆರೆಗೆ ಬರುತ್ತಿರುವ ಲಾಲ್ ಸಿಂಗ್ ಛಡ್ಡಾ ಸಿನಿಮಾ ಇಂದು ಬಿಡುಗಡೆಯಾಗುತ್ತಿದ್ದು, ಈ ಸಿನಿಮಾ ವಿರುದ್ಧವೂ ನೆಟ್ಟಿಗರು ಕೆಲವು ದಿನಗಳಿಂದ ಬಹಿಷ್ಕಾರದ ಅಭಿಯಾನ ನಡೆಸುತ್ತಿದ್ದಾರೆ.
ದೇಶದಾದ್ಯಂತ ಸುಮಾರು 3,500 ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಚಿತ್ರ ತೆರೆ ಕಾಣುತ್ತಿದೆ. ಆದರೆ ಬಹಿಷ್ಕಾರದ ಅಭಿಯಾನ ಚಿತ್ರದ ಗಳಿಕೆಗೆ ತೊಂದರೆ ಮಾಡಬಹುದು ಎಂಬ ಭೀತಿಯಲ್ಲಿ ಚಿತ್ರತಂಡವಿದೆ. ಹಾಗಿದ್ದರೂ ಹಾಕಿರುವ ಬಂಡವಾಳಕ್ಕೆ ಮೋಸ ಮಾಡದು ಎಂಬ ಲೆಕ್ಕಾಚಾರವಿದೆ. ಸಿನಿಮಾಗೆ ಯಾವ ರೀತಿಯ ಪ್ರತಿಕ್ರಿಯೆ ಸಿಗಬಹುದು ಎಂದು ಕಾದು ನೋಡಬೇಕಿದೆ.