ಮುಂಬೈ: ಇತ್ತೀಚೆಗೆ ಬಾಲಿವುಡ್ ನಲ್ಲಿ ಯಾವುದೇ ಸಿನಿಮಾ ಬಿಡುಗಡೆಯಾಗಲಿ, ನೆಟ್ಟಿಗರು ಬಹಿಷ್ಕಾರದ ಅಭಿಯಾನ ಶುರು ಮಾಡಿಬಿಡುತ್ತಾರೆ. ಇದು ಇತ್ತೀಚೆಗೆ ಬಿಡುಗಡೆಯಾದ ಲಾಲ್ ಸಿಂಗ್ ಛಡ್ಡಾಗೂ ಎದುರಾಗಿತ್ತು.
ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಛಡ್ಡಾ ಬಳಿಕ ಈಗ ಅಕ್ಷಯ್ ಕುಮಾರ್ ಅಭಿನಯದ ರಕ್ಷಾ ಬಂಧನ್ ಸಿನಿಮಾಗೂ ಬಹಿಷ್ಕಾರದ ಅಭಿನಯಾನ ಶುರುವಾಗಿದೆ. ಈ ಸಿನಿಮಾ ಕತೆಗಾತಿ ಈ ಮೊದಲು ಹಿಂದೂ ವಿರೋಧಿ ಟ್ವೀಟ್ ಮಾಡಿದ್ದರು ಎಂಬ ಕಾರಣಕ್ಕೆ ನೆಟ್ಟಿಗರಲ್ಲಿ ಕೆಲವು ವರ್ಗದವರು ಸಿನಿಮಾ ಬಹಿಷ್ಕರಿಸಲು ಕರೆ ಕೊಟ್ಟಿದ್ದರು.
ಇದರ ಬಗ್ಗೆ ಪ್ರತಿಕ್ರಿಯಿಸಿರುವ ನಟ ಅಕ್ಷಯ್ ಕುಮಾರ್ ಸಿನಿಮಾ ಬಹಿಷ್ಕಾರ ಅಭಿಯಾನ ಮಾಡುವವರು ಯಾರೋ ಕೆಲವು ದುಷ್ಕರ್ಮಿಗಳು. ಭಾರತ ಸ್ವತಂತ್ರ ರಾಷ್ಟ್ರ. ಇಲ್ಲಿ ಏನು ಬೇಕಾದರೂ ಮಾಡಲು ಸ್ವತಂತ್ರರು. ಇದರಿಂದ ಆರ್ಥಿಕತೆಗೆ ಸಹಾಯವಾಗುತ್ತದೆ. ಜನ ಹೀಗೆ ಬಹಿಷ್ಕರಿಸುವುದರಲ್ಲಿ ಅರ್ಥವಿಲ್ಲ. ನಾವು ನಮ್ಮ ದೇಶವನ್ನು ಅತೀ ದೊಡ್ಡ ರಾಷ್ಟ್ರವಾಗಿ ನಿರ್ಮಾಣ ಮಾಡುವ ತಯಾರಿಯಲ್ಲಿದ್ದೇವೆ. ಇಂತಹದ್ದಕ್ಕೆಲ್ಲಾ ನಾವು ಬೆಲೆ ಕೊಡಬಾರದು. ಇದು ನಮ್ಮ ದೇಶಕ್ಕೂ ಒಳ್ಳೆಯದು ಎಂದಿದ್ದಾರೆ ಅಕ್ಷಯ್.