ಬೆಂಗಳೂರು: ಬಿಗ್ ಬಾಸ್ ಕನ್ನಡ ಒಟಿಟಿ ಶೋ ಆರಂಭವಾಗಿ ಎರಡು ದಿನವಾಗಿದೆ. ಇದೀಗ ಒಟಿಟಿ ಶೋ ಬಗ್ಗೆ ಜನ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಒಟಿಟಿ ಫ್ಲ್ಯಾಟ್ ಫಾರಂ ಮೂಲಕ ಶೋ ಪ್ರಸಾರವಾಗುತ್ತಿರುವುದರಿಂದ ಗ್ರಾಮೀಣ ಭಾಗದವರೆಗೂ ಶೋ ತಲುಪುತ್ತಿಲ್ಲ. ಅಲ್ಲದೆ ಸ್ಪರ್ಧಿಗಳೂ ಚಿರಪರಿಚಿತರು ಎನ್ನುವಂತೆ ಯಾರೂ ಇಲ್ಲ ಎಂದು ನೆಟ್ಟಿಗರಿಂದ ಆಕ್ಷೇಪ ಕೇಳಿಬಂದಿದೆ.
ಆದರೆ ಕಿಚ್ಚ ಸುದೀಪ್ ನಿರೂಪಣೆ ಶೈಲಿ ಎಂದಿನಂತೆ ಜನರಿಗೆ ಇಷ್ಟವಾಗುತ್ತಿದೆ. ಅಲ್ಲದೆ ಒಟಿಟಿ ಎಂಬ ಹೊಸ ಪ್ರಯೋಗವಾಗಿರುವುದರಿಂದ ಎಲ್ಲಿ ಯಾವಾಗ ಬೇಕಾದರೂ ಶೋ ವೀಕ್ಷಿಸಬಹುದು ಎಂಬ ಅಭಿಪ್ರಾಯ ಜನರಲ್ಲಿದೆ. ಈ ಬಾರಿಯೂ ಕಿರುತೆರೆ, ಹಿರಿತೆರೆ, ಜ್ಯೋತಿಷ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಸೆಲೆಬ್ರಿಟಿಗಳು ಮನೆಯೊಳಗಿದ್ದಾರೆ. ಹೀಗಾಗಿ ದಿನ ಹೋದಂತೆ ಶೋ ಇಂಟ್ರೆಸ್ಟ್ ಆಗುವ ನಿರೀಕ್ಷೆಯಿದೆ.