Publish Date: Wed, 10 Aug 2022 (21:16 IST)
Updated Date: Wed, 10 Aug 2022 (21:21 IST)
ಆಮೀರ್ ಮತ್ತು ಕರೀನಾ ಕಾಂಬಿನೇಷನ್ ಸಿನಿಮಾ ಇದಾಗಿದ್ದು, ಈ ದೇಶದಲ್ಲಿ ಅಸಹಿಷ್ಣತೆ ಇದೆ. ಹಾಗಾಗಿ ನನ್ನ ಪತ್ನಿ ದೇಶ ತೊರೆಯುವಂತಹ ಮಾತುಗಳನ್ನು ಆಡಿದ್ದಳು ಎಂದು ಅಮೀರ್ ಈ ಹಿಂದೆ ಹೇಳಿದ್ದರು. ಇದೇ ಮಾತನ್ನು ಇಟ್ಟುಕೊಂಡು ಚಿತ್ರವನ್ನ ಬಾಯ್ ಕಾಟ್ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಆಂದೋಲನ ಶುರು ಮಾಡಿದ್ದರು. ಈಗ ರಿಲೀಸ್ ಬೆನ್ನಲ್ಲೇ ಅಮೀರ್ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ರಿಲೀಸ್ ಮುನ್ನ ಮಾತನಾಡಿರುವ ಅಮೀರ್, ನಾನು ಯಾರಿಗಾದರೂ ನೋವುಂಟು ಮಾಡಿದ್ದರೆ, ನಾನು ವಿಷಾದಿಸುತ್ತೇನೆ, ನಾನು ಯಾರನ್ನೂ ನೋಯಿಸಲು ಬಯಸುವುದಿಲ್ಲ, ಯಾರಾದರೂ ಚಲನಚಿತ್ರವನ್ನು ವೀಕ್ಷಿಸಲು ಬಯಸದಿದ್ದರೆ, ನಾನು ಅವರ ಭಾವನೆಯನ್ನು ಗೌರವಿಸುತ್ತೇನೆ ಎಂದು ಮಾತನಾಡಿದ್ದಾರೆ.ಚಿತ್ರದ ಬಗ್ಗೆ ಬಾಯ್ ಕಾಟ್ ಟ್ರೆಂಡ್ ಆಗುತ್ತಿದ್ದರು ಕೂಡ ಈಗಾಗಲೇ ಚಿತ್ರದ ಬುಕ್ಕಿಂಗ್ ವಿಚಾರದಲ್ಲಿ ಕೋಟಿ ಕೋಟಿ ಕಲೆಕ್ಷನ್ ಆಗಿದೆ.