Publish Date: Wed, 10 Aug 2022 (16:34 IST)
Updated Date: Wed, 10 Aug 2022 (16:36 IST)
ಮುಂಬೈ: ಲಾಲ್ ಸಿಂಗ್ ಛಡ್ಡಾ ಸಿನಿಮಾ ಬಿಡುಗಡೆಗೆ ಒಂದು ದಿನ ಮೊದಲು ನಟ ಅಮೀರ್ ಖಾನ್ ದೇಶದ ಕ್ಷಮೆ ಯಾಚಿಸಿದ್ದಾರೆ.
ಅಮೀರ್ ಈ ಮೊದಲು ಪಿ.ಕೆ. ಸಿನಿಮಾದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ದೃಶ್ಯಗಳನ್ನು ತೋರಿಸಿದ್ದರು ಎಂಬ ಕಾರಣಕ್ಕೆ ಈಗ ಲಾಲ್ ಸಿಂಗ್ ಛಡ್ಡಾ ಸಿನಿಮಾ ಬಹಿಷ್ಕರಿಸಲು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನವೇ ನಡೆದಿದೆ.
ಇದರ ಬೆನ್ನಲ್ಲೇ ಅಮೀರ್ ಈಗ ಕ್ಷಮೆ ಯಾಚಿಸಿದ್ದಾರೆ. ನಾನು ಯಾವುದೇ ರೀತಿಯಲ್ಲಿ ಯಾರಿಗಾದರೂ ನೋವುಂಟು ಮಾಡಿದ್ದರೆ ಈ ಮೂಲಕ ಕ್ಷಮೆ ಯಾಚಿಸುತ್ತೇನೆ. ಯಾರ ಭಾವನೆಗಳಿಗೂ ಧಕ್ಕೆ ಉಂಟು ಮಾಡುವುದು ನನ್ನ ಉದ್ದೇಶವಲ್ಲ. ನೀವು ಸಿನಿಮಾ ನೋಡದೇ ಇದ್ದರೂ ಸರಿಯೇ, ಯಾರಿಗೂ ನೋವುಂಟು ಮಾಡಲಾರೆ. ಮಾಡಿದ್ದರೆ ಅದಕ್ಕೆ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.