Publish Date: Thu, 04 Aug 2022 (11:03 IST)
Updated Date: Thu, 04 Aug 2022 (09:27 IST)
ಮುಂಬೈ: ದಕ್ಷಿಣ ಭಾರತದ ಸಿನಿಮಾಗಳ ಮುಂದೆ ಇದೀಗ ಬಾಲಿವುಡ್ ಸಿನಿಮಾಗಳು ತಲೆ ಎತ್ತಿ ನಿಲ್ಲದೇ ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸುತ್ತಿವೆ.
ಅಕ್ಷಯ್ ಕುಮಾರ್ ರಂತಹ ಘಟಾನುಘಟಿ ನಟರ ಸಿನಿಮಾಗಳೇ ಬಾಕ್ಸ್ ಆಫೀಸ್ ನಲ್ಲಿ ಸೋಲು ಕಾಣುತ್ತಿರುವುದು ಬಾಲಿವುಡ್ಡಿಗರ ಚಿಂತೆಗೆ ಕಾರಣವಾಗಿದೆ.
ಅಕ್ಷಯ್ ಕುಮಾರ್ ಒಂದು ಸಿನಿಮಾಗೆ 100 ಕೋಟಿ ಸಂಭಾವನೆ ಪಡೆಯುತ್ತಿದ್ದ ನಟ. ಆದರೆ ಇದೀಗ ಪೃಥ್ವಿರಾಜ್ ಸೋಲಿನ ಬಳಿಕ ನಟ ಸಂಭಾವನೆ ಕಡಿಮೆ ಮಾಡಲು ಮುಂದಾಗಿದ್ದಾರಂತೆ. ಅವರು ಮಾತ್ರವಲ್ಲ, ನಟ ಟೈಗರ್ ಶ್ರಾಫ್ ಕೂಡಾ ಸಂಭಾವನೆ ವಿಚಾರದಲ್ಲಿ ರಾಜಿಯಾಗಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.