ಬೆಂಗಳೂರು: ನಟಿ ರಮ್ಯಾ ಚಿತ್ರರಂಗದಿಂದ ದೂರವಿದ್ದರೂ ಈಗಲೂ ಅಭಿಮಾನಿಗಳ ಪಾಲಿಗೆ ಸ್ಯಾಂಡಲ್ ವುಡ್ ಕ್ವೀನ್ ಆಗಿಯೇ ಉಳಿದಿದ್ದಾರೆ.
ಇದೀಗ ರಮ್ಯಾ ತಮ್ಮ 18 ನೇ ವರ್ಷದ ಹಳೆಯ ಫೋಟೋ ಐಡಿ ಕಾರ್ಡ್ ಒಂದನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಐಡಿ ಕಾರ್ಡ್ ನಲ್ಲಿ ರಮ್ಯಾ ಫೋಟೋ ಜೊತೆಗೆ ಆ ಐಡಿ ಕಾರ್ಡ್ 2000 ನೇ ಇಸವಿಯದ್ದು ಎಂದೂ ನಮೂದಾಗಿದೆ.
ಅಂದರೆ ಇಂದಿಗೆ ಬರೋಬ್ಬರಿ 22 ವರ್ಷದ ಗಳ ಹಿಂದಿನ ಐಡಿ ಕಾರ್ಡ್ ಪ್ರಕಟಿಸಿರುವ ರಮ್ಯಾ ಆ ಮೂಲಕ ತಮ್ಮ ಇಂದಿನ ನಿಜ ವಯಸ್ಸನ್ನೂ ಬಹಿರಂಗಪಡಿಸಿದ್ದಾರೆ. ಈ ಐಡಿ ಕಾರ್ಡ್ ಪ್ರಕಾರ ರಮ್ಯಾಗೆ ಈಗ 42 ವರ್ಷ! ಸಾಮಾನ್ಯವಾಗಿ ನಟಿಮಣಿಯರು ತಮ್ಮ ನಿಜ ವಯಸ್ಸನ್ನೂ ಎಲ್ಲೂ ಬಿಟ್ಟುಕೊಡುವುದಿಲ್ಲ. ಆದರೆ ರಮ್ಯಾ ಯಾವುದೇ ಸಂಕೋಚವಿಲ್ಲದೇ ತಮ್ಮ ನಿಜ ವಯಸ್ಸನ್ನು ಈ ರೀತಿ ಬಹಿರಂಗಪಡಿಸಿದ್ದಾರೆ.