Select Your Language

Notifications

webdunia
webdunia
webdunia
webdunia

ತೆಲುಗಿನಲ್ಲಿ ನಟ ಚಂದನ್ ಕುಮಾರ್ ಗೆ ನಿಷೇಧ

ಚಂದನ್ ಕುಮಾರ್
ಬೆಂಗಳೂರು: ಇತ್ತೀಚೆಗೆ ತೆಲುಗು ಧಾರವಾಹಿ ಸೆಟ್ ನಲ್ಲಿ ಚಿತ್ರೀಕರಣ ವೇಳೆ ನಡೆದ ಕಿರಿಕ್ ಬಳಿಕ ಕನ್ನಡ ನಟ ಚಂದನ್ ಕುಮಾರ್ ರನ್ನು ತೆಲುಗು ಟಿವಿ ಅಸೋಸಿಯೇಷನ್ ತೆಲುಗು ಕಿರುತೆರೆಯಿಂದ ಚಂದನ್ ಗೆ ನಿಷೇಧ ಹೇರಿದೆ ಎನ್ನಲಾಗಿದೆ.

ಹಲ್ಲೆ ವಿಡಿಯೋಗಳು ವೈರಲ್ ಆದ ಬಳಿಕ ಚಂದನ್ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ನನಗಾದ ಅವಮಾನಕ್ಕೆ ಅವರೇ ಕ್ಷಮೆ ಕೇಳುವವರೆಗೂ ಮತ್ತೆ ತೆಲುಗು ಧಾರವಾಹಿಯಲ್ಲಿ ನಟಿಸಲ್ಲ ಎಂದಿದ್ದರು.

ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ಬೇರೆಯದೇ ಕತೆ ಹೇಳುತ್ತಿದೆ. 3-4 ಬಾರಿ ಶಾಟ್ ಗೆ ಕರೆದಾಗಲೂ ಹೋಗದೇ ಅಸಿಸ್ಟೆಂಟ್ ಮೇಲೆ ದೌರ್ಜನ್ಯವೆಸಗಿದ ಚಂದನ್ ರನ್ನು ತೆಲುಗು ಕಿರುತೆರೆಯಿಂದ ನಿಷೇಧ ಹೇರುವಂತೆ ಆದೇಶಿಸಿ ತೆಲುಗು ಟಿವಿ ಅಸೋಸಿಯೇಷನ್ ಬರೆದಿದ್ದ ಪತ್ರ ವೈರಲ್ ಆಗಿದೆ. ಈ ಆದೇಶ ಚಂದನ್ ಪತ್ರಿಕಾಗೋಷ್ಠಿ ನಡೆಸುವುದಕ್ಕಿಂತಲೂ ಮೊದಲೇ ಹೊರಡಿಸಲಾಗಿದೆ ಎನ್ನಲಾಗಿದೆ. ಹೀಗಾಗಿ ಇಲ್ಲಿ ಚಂದನ್ ಪತ್ರಿಕಾಗೋಷ್ಠಿ ನಡೆಸುವ ಮೊದಲೇ ತೆಲುಗಿನಿಂದ ಅವರಿಗೆ ನಿಷೇಧ ಹೇರಲಾಗಿತ್ತು ಎನ್ನಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಶ್ಮಿಕಾ-ವಿಜಯ್ ದೇವರಕೊಂಡ ಬ್ರೇಕ್ ಅಪ್ ಆಗಿ ಎರಡು ವರ್ಷ ಆಯ್ತು!