Publish Date: Wed, 03 Aug 2022 (16:55 IST)
Updated Date: Wed, 03 Aug 2022 (16:59 IST)
ಮುಂಬೈ: ಇತ್ತೀಚೆಗೆ ಕಾಳಿ ಎಂಬ ಡಾಕ್ಯುಮೆಂಟರಿ ಸಿನಿಮಾದಲ್ಲಿ ಹಿಂದೂ ದೇವತೆ ಕಾಳಿ ಸಿಗರೇಟು ಸೇದುವ ಹಾಗೆ ಚಿತ್ರಿಸಿ ಅವಮಾನ ಮಾಡಲಾಗಿತ್ತು.
ಈಗ ಮತ್ತೊಂದು ಸಿನಿಮಾ ಪೋಸ್ಟರ್ ಹಿಂದೂಗಳ ಭಾವನೆ ಧಕ್ಕೆ ತಂದಿದೆ. ಮಾಸೂಮ್ ಸವಾಲ್ ಎಂಬ ಸಿನಿಮಾ ಆಗಸ್ಟ್ 5 ರಂದು ರಿಲೀಸ್ ಆಗಲಿದ್ದು, ಈ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಪೋಸ್ಟರ್ ನಲ್ಲಿ ಸ್ಯಾನಿಟರಿ ಪ್ಯಾಡ್ ನಲ್ಲಿ ಭಗವಾನ್ ಶ್ರೀಕೃಷ್ಣನ ಚಿತ್ರ ತೋರಿಸಲಾಗಿದೆ. ಇದಕ್ಕೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿವಾದವಾಗುತ್ತಿದ್ದಂತೇ ಚಿತ್ರದ ನಿರ್ದೇಶಕ ಸಂತೋಷ್ ಉಪಾಧ್ಯಾಯ ಪ್ರತಿಕ್ರಿಯಿಸಿದ್ದು, ಇದು ಮುಟ್ಟಿನ ಕುರಿತಾದ ಸಿನಿಮಾವಾಗಿದ್ದರಿಂದ ಪ್ಯಾಡ್ ತೋರಿಸಬೇಕಾಯಿತು. ಕೇವಲ ಟೈಟಲ್ ಗೆ ಪ್ಯಾಡ್ ಬರುವಂತೆ ತೋರಿಸಿದ್ದೇವೆಯೇ ಹೊರತು ಕೃಷ್ಣನಿಗಲ್ಲ ಎಂದಿದ್ದಾರೆ.
Krishnaveni K
Publish Date: Wed, 03 Aug 2022 (16:55 IST)
Updated Date: Wed, 03 Aug 2022 (16:59 IST)