ಮುಂಬೈ: ಆಗಾಗ ತಮ್ಮ ವರ್ತನೆ ಸಲುವಾಗಿ ಕೆಂಗಣ್ಣಿಗೆ ಗುರಿಯಾಗುವ ಬಾಲಿವುಡ್ ಹಿರಿಯ ನಟಿ ಜಯಾಬಚ್ಚನ್ ಅವರು ಇದೀಗ ಮತ್ತೇ ಟೀಕೆಗೆ ಒಳಗಾಗಿದ್ದಾರೆ. ಜಯಾಬಚ್ಚನ್ ಅವರು ಮಹಿಳೆಯೊಂದಿಗೆ ಕೋಪದಿಂದ ನಡೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಿರಿಯ ನಟ, ನಿರ್ಮಾಪಕ ಮನೋಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಆಯೋಜಿಸಲಾದ ಪ್ರಾರ್ಥನಾ ಸಭೆಯಲ್ಲಿ ಜಯಾ ಬಚ್ಚನ್ ಹಿರಿಯ ಅಭಿಮಾನಿಯೊಬ್ಬರ ಮುಂದೆ ತಾಳ್ಮೆ ಕಳೆದುಕೊಂಡು ವರ್ತಿಸಿದ್ದಾರೆ. ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ಭಾನುವಾರ ಅವರ ಸ್ಮರಣಾರ್ಥ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅಮೀರ್ ಖಾನ್, ಪ್ರೇಮ್ ಚೋಪ್ರಾ ಮತ್ತು ಆಶಾ ಪರೇಖ್ ಸೇರಿದಂತೆ ಹಲವಾರು ಹಿಂದಿ ಸಿನಿಮಾ ಗಣ್ಯರು ಮನೋಜ್ ಕುಮಾರ್ ಅವರಿಗೆ ಗೌರವ ಸಲ್ಲಿಸಿದರು.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಹಿರಿಯ ಅಭಿಮಾನಿಯೊಬ್ಬರು ನಿಂತಿದ್ದ ಜಯ ಬಚ್ಚನ್ ಅವರ ಕೈ ಮುಟ್ಟಿ, ಫೋಟೋ ನೀಡುವಂತೆ ಕೇಲಿಕೊಂಡಿದ್ದಾರೆ. ಕೈ ಮುಟ್ಟಿದ್ದಕ್ಕೆ ಅಸಮಾಧಾನಗೊಂಡ ಜಯಾಬಚ್ಚನ್ ಅವರು ಅವರ ಮೇಲೆ ರೇಗಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನಟ್ಟಿಗರು ಜಯಾ ಬಚ್ಚನ್ ಅವರ ನಡವಳಿಕೆ ಇದೇನೂ ಹೊಸತಲ್ಲ ಎಂದು ಗರಂ ಆಗಿದ್ದಾರೆ.