Select Your Language

Notifications

webdunia
webdunia
webdunia
webdunia

ಅಕ್ರಮ ಹಣ ವರ್ಗಾವಣೆ ಕೇಸ್:ವಿಕ್ರಾಂತ್ ರೋಣ ಬೆಡಗಿ ಜಾಕ್ವೆಲಿನ್ ಆರೋಪಿ

webdunia
ಮುಂಬೈ , ಬುಧವಾರ, 17 ಆಗಸ್ಟ್ 2022 (16:12 IST)
ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಕ್ರಾಂತ್ ರೋಣ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಆರೋಪಿಯಾಗಿದ್ದಾರೆ.

ಈ ಬಗ್ಗೆ ಇಡಿ ಅವ್ಯವಹಾರದ ತನಿಖೆ ನಡೆಸಿತ್ತು. ಅದರಂತೆ ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್ ಜೊತೆಗೆ ಸ್ನೇಹ ಸಂಬಂಧ ಹೊಂದಿದ್ದ ಜಾಕ್ವೆಲಿನ್ ಕೂಡಾ ಬರೋಬ್ಬರಿ 200 ಕೋಟಿ ರೂ. ಹಣ ವಸೂಲಿ ಮಾಡಿದ ಆರೋಪಕ್ಕೆ ಸಿಲುಕಿದ್ದಾರೆ.

ಉದ್ಯಮಿಯೊಬ್ಬರಿಂದ ಪ್ರಮುಖ ಆರೋಪಿ ಸುಕೇಶ್ 215 ಕೋಟಿ ರೂ. ವಸೂಲಿ ಮಾಡಿದ್ದ. ಈ ಹಣದಲ್ಲಿ 10 ಕೋಟಿ ರೂ.ಗಳಷ್ಟು ಜಾಕ್ವೆಲಿನ್ ಗೆ ನೀಡಿದ್ದ. ಅಲ್ಲದೆ ಜಾಕ್ವೆಲಿನ್  ಗೆ ದುಬಾರಿ ಉಡುಗೊರೆಗಳನ್ನೂ ನೀಡಿದ್ದ. ಹೀಗಾಗಿ ಈ ಪ್ರಕರಣದಲ್ಲಿ ಜಾಕ್ವೆಲಿನ್ ಸಿಲುಕಿಕೊಂಡಿದ್ದರು. ಹೀಗಾಗಿ ಜಾರಿ ನಿರ್ದೇಶನಾಲಯ ಪ್ರಕರಣದಲ್ಲಿ ಸುಕೇಶ್ ಜೊತೆಗೆ ಜಾಕ್ವೆಲಿನ್ ರನ್ನೂ ಪ್ರಮುಖ ಆರೋಪಿಯಾಗಿಸಿದೆ. ಸುಕೇಶ್ ಕೇವಲ ಜಾಕ್ವೆಲಿನ್ ಗೆ ಮಾತ್ರವಲ್ಲ, ಬಾಲಿವುಡ್ ನಟಿ ಜಾಹ್ನವಿ ಕಪೂರ್, ಸಾರಾ ಆಲಿ ಖಾನ್ ಗೂ ದುಬಾರಿ ಉಡುಗೊರೆ ನೀಡಿದ್ದ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೈಮಾ ಅವಾರ್ಡ್ಸ್: ರಾಬರ್ಟ್, ಯುವರತ್ನ, ಗರುಡಗಮನ ನಡುವೆ ಪೈಪೋಟಿ