Select Your Language

Notifications

webdunia
webdunia
webdunia
webdunia

ಬಾಲಿವುಡ್ ಸ್ಟಾರ್ ಗಳಿಗೆ ತಲೆನೋವಾದ ಮತ್ತೊಂದು ದಕ್ಷಿಣದ ಸಿನಿಮಾ

ಕಾರ್ತಿಕೇಯ 2
ಮುಂಬೈ: ಇತ್ತೀಚೆಗೆ ಬಾಲಿವುಡ್ ನಟರಿಗೆ ಬಹಿಷ್ಕಾರದ ಭೀತಿ ಒಂದೆಡೆಯಾದರೆ, ದಕ್ಷಿಣ ಭಾರತದ ಸಿನಿಮಾಗಳ ಕಾಟ ಇನ್ನೊಂದೆಡೆ.

ಹಿಂದೆ ನೀಡಿದ್ದ ಹಿಂದೂ ವಿರೋಧಿ, ದೇಶ ವಿರೋಧಿ ಹೇಳಿಕೆಗಳು ಬಾಲಿವುಡ್ ಸ್ಟಾರ್ ಗಳಿಗೆ ಈಗ ಮುಳುವಾಗುತ್ತಿದೆ. ಅಂತಹ ನಟರ ಚಿತ್ರಗಳು ಬಿಡುಗಡೆಗೂ ಮುನ್ನವೇ ಬಹಿಷ್ಕಾರದ ಭೀತಿ ಎದುರಿಸುತ್ತಿವೆ. ಇದರಿಂದಾಗಿ ಈಗಾಗಲೇ ಅಮೀರ್ ಖಾನ್, ಅಕ್ಷಯ್ ಕುಮಾರ್, ರಣವೀರ್ ಸಿಂಗ್ ಸೇರಿದಂತೆ ಎಲ್ಲರೂ ಬೆನ್ನು ಬೆನ್ನಿಗೆ ಸೋಲು ಕಂಡಿದ್ದಾರೆ.

ಇದರ ನಡುವೆ ಬಾಲಿವುಡ್ ಸ್ಟಾರ್ ಗಳಿಗೆ ಈಗ ತೆಲುಗು ಮೂಲದ ಕಾರ್ತಿಕೇಯ 2 ಸಿನಿಮಾ ತಲೆನೋವಾಗಿದೆ. ಒಂದೆಡೆ ಲಾಲ್ ಸಿಂಗ್ ಛಡ್ಡಾ, ರಕ್ಷಾ ಬಂಧನ್ ಮಕಾಡೆ ಮಲಗಿದ್ದರೆ, ತೆಲುಗು ಮೂಲದ ಕಾರ್ತಿಕೇಯ 2 ಸಿನಿಮಾ ಹಿಂದಿಯಲ್ಲೂ ಜನರನ್ನು ಸೆಳೆಯುತ್ತಿದೆ. ಹಿಂದೂ ದೇವರಿಗೆ ಸಂಬಂಧಿಸಿದ ಕತೆಯಿರುವ ಕಾರಣಕ್ಕೆ ಜನ ಥಿಯೇಟರ್ ಗೆ ತಾವಾಗಿಯೇ ಬಂದು ಸಿನಿಮಾ ನೋಡುತ್ತಿದ್ದಾರೆ. ಇದರಿಂದಾಗಿ ಹಿಂದಿಯಲ್ಲೂ ಶೋ ಹೆಚ್ಚು ಮಾಡಲಾಗುತ್ತಿದೆ. ಹೀಗಾಗಿ ಇದು ಮತ್ತೊಂದು ಕಾಶ್ಮೀರ್ ಫೈಲ್ಸ್ ಸಿನಿಮಾವಾಗುವುದರಲ್ಲಿ ಅನುಮಾನವಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಬೋಲ್ಡ್ ಫೋಟೋ ಮೂಲಕ ಪ್ರೆಗ್ನೆನ್ಸಿ ಘೋಷಣೆ ಮಾಡಿದ ನಟಿ ಬಿಪಾಶಾ ಬಸು