Publish Date: Tue, 16 Aug 2022 (16:12 IST)
Updated Date: Tue, 16 Aug 2022 (16:14 IST)
ಮುಂಬೈ: ಬಾಲಿವುಡ್ ನಟಿ ಬಿಪಾಶಾ ಬಸು ಮತ್ತು ಪತಿ ಕರಣ್ ಸಿಂಗ್ ಗ್ರೋವರ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಬಿಪಾಶಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬೋಲ್ಡ್ ಫೋಟೋ ಮೂಲಕ ಪ್ರೆಗ್ನೆನ್ಸಿ ಘೋಷಣೆ ಮಾಡಿದ್ದಾರೆ. ತಮ್ಮ ಉಬ್ಬ ಹೊಟ್ಟೆ ದರ್ಶನ ನೀಡಿರುವ ಬಿಪಾಶಾ ಪತಿ ಕರಣ್ ಜೊತೆಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
2016 ರಲ್ಲಿ ಬಿಪಾಶಾ-ಕರಣ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕಳೆದ ಕೆಲವು ದಿನಗಳಿಂದ ಬಿಪಾಶಾ ಗರ್ಭಿಣಿ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಇದೀಗ ದಂಪತಿ ಅಧಿಕೃತವಾಗಿ ದೃಢಪಡಿಸಿದ್ದಾರೆ.