Publish Date: Tue, 16 Aug 2022 (10:15 IST)
Updated Date: Tue, 16 Aug 2022 (10:27 IST)
ಬೆಂಗಳೂರು: ನಿನ್ನೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಕಿಂಗ್ ಸ್ಟಾರ್ ಯಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಧ್ವಜಾರೋಹಣ ಮಾಡಿ ಅದರ ಜೊತೆಗೆ ತಮ್ಮ ಕುಟುಂಬ ಸಮೇತ ನಿಂತು ಪೋಸ್ ಕೊಟ್ಟಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು.
ಇದಕ್ಕೂ ಮೊದಲು ನಟ ಶಾರುಖ್ ಖಾನ್ ಕೂಡಾ ತಮ್ಮ ಮನೆಯಲ್ಲಿ ಧ್ವಜಾರೋಹಣ ಮಾಡಿ ಪತ್ನಿ, ಮಕ್ಕಳೊಂದಿಗೆ ಪೋಸ್ ಕೊಟ್ಟಿದ್ದ ಫೋಟೋ ವೈರಲ್ ಆಗಿತ್ತು.
ಆದರೆ ಇವೆರಡೂ ಫೋಟೋಗಳನ್ನು ಹೋಲಿಕೆ ಮಾಡುತ್ತಿರುವ ನೆಟ್ಟಿಗರು ದಕ್ಷಿಣದ ನಟನಿಗೂ ಬಾಲಿವುಡ್ ನಟನಿಗೂ ಇರುವ ವ್ಯತ್ಯಾಸ ಇದುವೇ ಎನ್ನುತ್ತಿದ್ದಾರೆ. ಯಶ್, ಪತ್ನಿ ರಾಧಿಕಾ ಹಾಗೂ ಮಕ್ಕಳು ಧ್ವಜದ ಮುಂದೆ ಚಪ್ಪಲಿ ತೆಗೆದು ಗೌರವ ಸೂಚಿಸಿದ್ದರು. ಆದರೆ ಶಾರುಖ್ ಮತ್ತು ಕುಟುಂಬಸ್ಥರು ಚಪ್ಪಲಿ ಸಮೇತ ಧ್ವಜದ ಮುಂದೆ ನಿಂತಿದ್ದರು. ಇದನ್ನು ಗಮನಿಸಿ ನೆಟ್ಟಿಗರು ರಾಷ್ಟ್ರಧ್ವಜಕ್ಕೆ ನಿಜವಾಗಿ ಗೌರವ ಕೊಡುವುದಕ್ಕೂ ತೋರಿಕೆಗೆ ಕೊಡುವುದಕ್ಕೂ ಈ ರೀತಿ ವ್ಯತ್ಯಾಸವಿದೆ ಎಂದು ಟ್ರೋಲ್ ಮಾಡುತ್ತಿದ್ದಾರೆ.