ಮುಂಬೈ: ಲಾಲ್ ಸಿಂಗ್ ಛಡ್ಡಾ, ರಕ್ಷಾ ಬಂಧನ್ ಸಿನಿಮಾಗಳು ಬಹಿಷ್ಕಾರದ ಅಭಿಯಾನದ ಬಿಸಿಯಿಂದಾಗಿ ಬಾಕ್ಸ್ ಆಫೀಸ್ ನಲ್ಲಿ ಸೋತು ಹೋಗಿವೆ.
ಇದೀಗ ಹೃತಿಕ್ ರೋಷನ್ ನಾಯಕರಾಗಿರುವ ವಿಕ್ರಮ್ ವೇದಾಗೂ ಬಹಿಷ್ಕಾರದ ಭೀತಿ ಎದುರಾಗಿದೆ. ಹೃತಿಕ್ ಇತ್ತೀಚೆಗೆ ಲಾಲ್ ಸಿಂಗ್ ಛಡ್ಡಾ ಸಿನಿಮಾವನ್ನು ಹೊಗಳಿದ್ದರು. ಇದೇ ಕಾರಣಕ್ಕೆ ಈಗ ಹೃತಿಕ್ ಸಿನಿಮಾವನ್ನು ಬಹಿಷ್ಕರಿಸಲು ನೆಟ್ಟಿಗರು ಕರೆ ಕೊಟ್ಟಿದ್ದಾರೆ.
ಹೀಗೇ ಆದರೆ ಹೃತಿಕ್ ಸಿನಿಮಾ ಗಳಿಕೆ ಮೇಲೂ ಇದು ಪರಿಣಾಮ ಬೀರುವ ಸಾಧ‍್ಯತೆಯಿದೆ. ಹಿಂದೂ ದೇವರಿಗೆ ಅವಮಾನ ಮಾಡಿದ್ದಕ್ಕೆ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಛಡ್ಡಾ, ಅಕ್ಷಯ್ ಕುಮಾರ್ ಅವರ ರಕ್ಷಾ ಬಂಧನ್ ಸಿನಿಮಾ ವಿರುದ್ಧ ಬಹಿಷ್ಕಾರದ ಅಭಿಯಾನ ಮಾಡಲಾಗಿತ್ತು.