Publish Date: Tue, 16 Aug 2022 (20:58 IST)
Updated Date: Tue, 16 Aug 2022 (21:03 IST)
ಬಾಲಿವುಡ್ ಸ್ಟಾರ್ಗಳಾದ ಅಮೀರ್ ಖಾನ್, ಶಾರುಖ್ ಖಾನ್, ಸಲ್ಮಾನ್ ಖಾನ್, ಸೈಫ್ ಅಲಿಖಾನ್ ಪಾಕಿಸ್ತಾನದ ಏಜೆಂಟರಾಗಿದ್ದಾರೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು. ಭಾರತದ ಅನ್ನ ತಿಂದು ಪಾಕಿಸ್ತಾನ ಪರ ವಕಾಲತು ವಹಿಸುತ್ತಾರೆ. ನಮ್ಮ ಸಿನೆಮಾ ಪ್ರಿಯರು ಸಿನೆಮಾ ನೋಡುವುದರಿಂದ ಈಗ ಇವರು ದೊಡ್ಡ ಬಂಗಲೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂದರು. ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಹುತ್ತದ ಮೇಲೆ ಹಾಲು ಸುರಿದರೆ ತಪ್ಪು ಎನ್ನುವರು. ಮೊಹರಂ ಹಬ್ಬದಲ್ಲಿ ಕುರಿ ಕಡಿಯುವದು ತಪ್ಪು ಅಲ್ವಾ? ಎಂದು ಪ್ರಶ್ನಿಸಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಭಾವಚಿತ್ರ ಕೈ ಬಿಟ್ಟಿರುವುದನ್ನು ಸಮರ್ಥಿಸಿಕೊಂಡ ಯತ್ನಾಳ್, ನೆಹರು ಕೊಡುಗೆ ದೇಶಕ್ಕೆ ಏನಾದರು ಇದೆಯಾ? ನಿಜವಾಗಿ ದೇಶದ ಪ್ರಧಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಎಂದರು.