ನರೇಂದ್ರ ಮೋದಿ ಹುಟ್ಟಿರೋದೆ ಹಿಂದೂರಾಷ್ಟ್ರ ನಿರ್ಮಾಣ ಮಾಡಲಿಕ್ಕೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಹಿಂದೂಗಳು ಹೆಚ್ಚಿರುವುದು ಹಿಂದೂ ರಾಷ್ಟ್ರ. ಮುಸ್ಲಿಮರು ಹೆಚ್ಚಿರುವುದು ಪಾಕಿಸ್ತಾನ. ಮಹಾತ್ಮ ಗಾಂಧಿ ಇದೇ ರೀತಿ ದೇಶ ಒಡೆದು ಕೊಟ್ಟಿದ್ದಾರೆ. ಪಾಕಿಸ್ತಾನ ಯಾಕೆ ಒಡೆದು ಕೊಟ್ಟರೋ ಗೊತ್ತಿಲ್ಲ. ಆ ಪುಣ್ಯಾತ್ಮ ಗಾಂಧೀಜಿ ಮಾಡಿದ ತಪ್ಪಿನಿಂದ ಕೋಟ್ಯಂತರ ಹಿಂದೂಗಳ ರಕ್ತಪಾತವಾಯಿತು. ಪಾಕಿಸ್ತಾನಕ್ಕೆ 50 ಕೋಟಿ ನೀಡುವಂತೆ ಗಾಂಧೀಜಿ ಉಪವಾಸ ಕುಳಿತರು. ಇವರು ದೊಡ್ಡವರಾಗಲು ಕೋಟ್ಯಂತರ ಹಿಂದೂಗಳ ಹತ್ಯೆಯಾಯಿತು. ಪಾಕ್ ಆಕ್ರಮಿತ ಕಾಶ್ಮೀರ ಶೀಘ್ರವೇ ಭಾರತದ ವಶವಾಗಲಿದೆ. ಪ್ರಧಾನಿ ಮೋದಿಯಂಥ ನಾಯಕರು ಇರುವಾಗ ಇದು ಸಾಧ್ಯವಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.