Publish Date: Wed, 17 Aug 2022 (09:50 IST)
Updated Date: Wed, 17 Aug 2022 (09:59 IST)
ಮುಂಬೈ: ಬಾಲಿವುಡ್ ಸಿನಿಮಾಗಳು ಇತ್ತೀಚೆಗೆ ಬಹಿಷ್ಕಾರದ ಅಭಿಯಾನದಿಂದ ನೆಲಕಚ್ಚುತ್ತಿದೆ. ಇದಕ್ಕೆ ತಾಜಾ ಉದಾಹರಣೆಗಳು ಲಾಲ್ ಸಿಂಗ್ ಛಡ್ಡಾ ಮತ್ತು ರಕ್ಷಾ ಬಂಧನ್.
ಇದೀಗ ಹೃತಿಕ್ ರೋಷನ್ ಅಭಿನಯದ ವಿಕ್ರಮ್ ವೇದಾ ಸಿನಿಮಾಗೂ ಇದೇ ಭೀತಿ ಶುರುವಾಗಿದೆ. ಇದರ ಜೊತೆಗೆ ಈಗ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ವಿರುದ್ಧವೂ ಬಹಿಷ್ಕಾರದ ಅಭಿಯಾನ ಶುರುವಾಗಿದೆ.
2023 ರಲ್ಲಿ ಬಿಡುಗಡೆಯಾಗಲಿರುವ ಪಠಾಣ್ ಸಿನಿಮಾ ಬಹಿಷ್ಕರಿಸುವಂತೆ ನೆಟ್ಟಿಗರು ಕರೆ ಶುರು ಮಾಡಿದ್ದಾರೆ. ಈ ಹಿಂದೆ ಶಾರುಖ್ ಖಾನ್ ಭಾರತದಲ್ಲಿ ಅಸಹಿಷ್ಣುತೆ ಇದೆ ಎಂದಿದ್ದರು. ಅದೇ ಹೇಳಿಕೆ ಉಲ್ಲೇಖಿಸಿ ಶಾರುಖ್ ಸಿನಿಮಾವನ್ನು ಬಹಿಷ್ಕರಿಸಲು ಕರೆ ನೀಡಲಾಗುತ್ತಿದೆ.