Publish Date: Wed, 17 Aug 2022 (16:02 IST)
Updated Date: Wed, 17 Aug 2022 (16:04 IST)
ಬೆಂಗಳೂರು: ದಕ್ಷಿಣ ಭಾರತದ ಪ್ರತಿಷ್ಠಿತ ಸಿನಿ ಅವಾರ್ಡ್ ಸೈಮಾಗೆ ಕನ್ನಡದ ಮೂರು ಸಿನಿಮಾಗಳು ಪ್ರಮುಖವಾಗಿ ಗರಿಷ್ಠ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿವೆ.
ದರ್ಶನ್ ನಾಯಕರಾಗಿರುವ ರಾಬರ್ಟ್ ಸಿನಿಮಾ 10 ವಿಭಾಗಗಳಲ್ಲಿ, ರಾಜ್ ಬಿ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ ಗರುಡಗಮನ ವೃಷಭ ವಾಹನ 8 ವಿಭಾಗಗಳಲ್ಲಿ ಮತ್ತು ಪುನೀತ್ ರಾಜ್ ಕುಮಾರ್ ನಾಯಕರಾಗಿರುವ ಯುವರತ್ನ ಸಿನಿಮಾ 7 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿವೆ.
ತೆಲುಗು ಸಿನಿಮಾ ರಂಗದಿಂದ ಪುಷ್ಪ 12 ವಿಭಾಗಗಳಲ್ಲಿ ನಾಮ ನಿರ್ದೇಶನಗೊಳ್ಳುವ ಮೂಲಕ ಅತೀ ಹೆಚ್ಚು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡ ದಾಖಲೆ ಮಾಡಿದೆ. ಸೈಮಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಸಿನಿಮಾಗಳಿಗೆ ಸೈಮಾ ವೆಬ್ ಸೈಟ್ ನಲ್ಲಿ ನೀವೂ ವೋಟ್ ಮಾಡಿ ನಿಮ್ಮ ನೆಚ್ಚಿನ ಸಿನಿಮಾವನ್ನು ಗೆಲ್ಲಿಸಬಹುದು.