ಶಾರುಖ್ ಖಾನ್ ವಿರುದ್ಧ ದೂರು ದಾಖಲು

ಬುಧವಾರ, 7 ನವೆಂಬರ್ 2018 (12:47 IST)
ಮುಂಬೈ : ಝೀರೋ ಚಿತ್ರಕ್ಕೆ ಸಂಬಂಧಪಟ್ಟ ವಿಚಾರವೊಂದಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಅವರ ವಿರುದ್ಧ ಸಿಖ್ ಸಮುದಾಯದವವರು ದೂರು ದಾಖಲಿಸಿದ್ದಾರೆ.


ಝೀರೋ ಚಿತ್ರದ ಟ್ರೇಲರ್ ನಲ್ಲಿ ನಟ ಶಾರುಖ್ ಖಾನ್ ಅವರು ‘ಕಿರ್ ಪನ್’ ಧರಿಸಿದ್ದರು. ಇದು ಸಿಖ್ ಸಮುದಾಯದವರ ಕೋಪಕ್ಕೆ ಕಾರಣವಾಗಿದ್ದು, ತಮ್ಮ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ದೆಹಲಿಯ ಸಿಖ್ ಗುರುದ್ವಾರ ಮ್ಯಾನೇಜ್‍ಮೆಂಟ್ ಕಮಿಟಿಯ ಜನರಲ್ ಸೆಕ್ರೆಟರಿ ಮಂಜಿದರ್ ಸಿಂಗ್ ಸಿರಸಾ ಶಾರೂಕ್ ಹಾಗೂ ನಿರ್ದೇಶಕ ಆನಂದ್ ಎಲ್ ರೈ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದಾರೆ.


ಸಿಖ್ ಸಂಪ್ರದಾಯದ ಪ್ರಕಾರ ಗತ್ರ ಕಿರ್ ಪನ್ ಕೇವಲ ಅಮ್ರಿತ್‍ದರಿ ಸಿಖ್ ಜನರು ಮಾತ್ರ ಧರಿಸುವುದು. ಆದಕಾರಣ ದೆಹಲಿಯ ನಾರ್ತ್ ಆವೆನ್ಯೂ ಪೊಲೀಸ್ ಠಾಣೆಯಲ್ಲಿ ಶಾರೂಕ್ ಹಾಗೂ ಆನಂದ್ ವಿರುದ್ಧ ದೂರು ದಾಖಲಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಯಶ್ – ರಾಧಿಕಾ ದಂಪತಿಗಳಿಗೆ ಡಿಸೆಂಬರ್ ನಲ್ಲಿ ಡಬಲ್ ಖುಷಿ. ಯಾಕೆ ಗೊತ್ತಾ?