ಶಾರುಖ್ ಖಾನ್ ಮನೆಮುಂದೆ ಬ್ಲೇಡ್ ನಿಂದ ಕೈಕೊಯ್ದುಕೊಂಡ ಅಭಿಮಾನಿ. ಕಾರಣವೇನು ಗೊತ್ತಾ?

ಸೋಮವಾರ, 5 ನವೆಂಬರ್ 2018 (07:08 IST)
ಮುಂಬೈ : ನಟ ಶಾರುಖ್ ಖಾನ್ ಅವರ  ಮುಂಬೈನ ನಿವಾಸವೊಂದರಲ್ಲಿ ನಡೆದ ಪಾರ್ಟಿಯೊಂದರ ವೇಳೆ ಅಭಿಮಾನಿಯೊಬ್ಬ ಕೈಕೊಯ್ದುಕೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.


ಶಾರುಖ್ ಖಾನ್ ಅವರು ಮುಂಬೈನ ಮನ್ನತ್ ನಿವಾಸದಲ್ಲಿ ದೀಪಾವಳಿ ಪಾರ್ಟಿ ಹಮ್ಮಿಕೊಂಡಿದ್ದರು. ಈ ಪಾರ್ಟಿಯಲ್ಲಿ  ಅನೇಕ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಪಾಲ್ಗೊಂಡಿದ್ದರು. ಆ ವೇಳೆ ಕೋಲ್ಕತಾ ಮೂಲದ ಮೊಹಮ್ಮದ್​ ಸಲೀಂ ಎಂಬಾತ ಶಾರೂಖ್ ಖಾನ್​ ಅವರನ್ನು ಭೇಟಿಯಾಗಲೇ ಬೇಕೆಂಬ ಹುಚ್ಚುತನದಿಂದ ತನ್ನ ಜೇಬಿನಲ್ಲಿದ್ದ ಬ್ಲೇಡ್​ ತೆಗೆದುಕೊಂಡು ಕೈ ಕೊಯ್ದುಕೊಂಡಿದ್ದಾನೆ.


ಈ ಘಟನೆಯಿಂದ ಆತ ನಿತ್ರಾಣನಾಗಿದ್ದು, ತಕ್ಷಣವೇ ಅಲ್ಲಿದ್ದವರು ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ಶಾರುಖ್ ಖಾನ್ ಮನೆಯ ಮುಂದೆ ಇಂತಹ ಘಟನೆಗಳು ಅನೇಕ ಬಾರಿ ನಡೆದಿತ್ತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಟಿ ರವೀನಾ ಟಂಡನ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಕೋರ್ಟ್ ಆದೇಶ. ಕಾರಣವೇನು ಗೊತ್ತಾ?