ನಟಿ ಅಹನಾಗೆ ನಾಯಿ ಜೊತೆಗೆ ಸೆಕ್ಸ್ ಮಾಡೋದಕ್ಕೆ ಹೇಳಿದ ಈ ನಿರ್ದೇಶಕ ಯಾರು ಗೊತ್ತೇ?

ಶನಿವಾರ, 3 ನವೆಂಬರ್ 2018 (15:12 IST)
ಮುಂಬೈ : ಖ್ಯಾತ ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ಈಗಾಗಲೇ ಕೆಲ ನಾಯಕಿಯರು ಹಾಗೂ ಪತ್ರಕರ್ತೆಯರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು, ಆದರೆ ಇದೀಗ ಮತ್ತೊಬ್ಬ ನಟಿ ಮೀಟೂ ಆರೋಪ ಮಾಡಿದ್ದಾರೆ.


ಹೌದು. ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ ಚಿತ್ರದ ನಟಿ ಅಹನಾ ಕುಮ್ರಾ ಮೀಟೂ ಆರೋಪ ಮಾಡಿದ್ದಾರೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಸಾಜಿದ್ ಓರ್ವ ಕಪಟ ವ್ಯಕ್ತಿ ಎಂದು ದೂರಿದ್ದಾರೆ.


ವರ್ಷದ ಹಿಂದ ಸಾಜಿದ್ ಮನೆಗೆ ತೆರಳಿದಾಗ ನನ್ನನ್ನು ಕತ್ತಲೆ ಕೋಣೆಗೆ ಕರೆದುಕೊಂಡು ಹೋಗಿದ್ದರು. ನಾನು ಲೈಟ್ ಹಾಕಿ ಎಂದು ಹೇಳಿದ ಮೇಲೆ ಅವರು ಸ್ವಿಚ್ ಹಾಕಿದ್ದರು. ಅವರು ವರ್ತನೆ ಕೊಂಚ ವಿಚಿತ್ರವಾಗಿತ್ತು ಆತನ ವರ್ತನೆ ನನಗೆ ಇಷ್ಟವಾಗದ ಕಾರಣ ನಾನು ನನ್ನ ತಾಯಿ ಪೊಲೀಸ್ ಅಧಿಕಾರಿ ಎಂಬುದನ್ನು ಆತನಿಗೆ ತಿಳಿಸಿದೆ’ ಎಂದು ಹೇಳಿದ್ದಾರೆ.


ಅಲ್ಲದೇ 'ನಾನು ನಿನಗೆ 100 ಕೋಟಿ ರೂಪಾಯಿ ಕೊಟ್ಟರೆ ನೀನು ನಾಯಿ ಜೊತೆಗೆ ಸೆಕ್ಸ್ ಮಾಡುತ್ತೀಯಾ' ಎಂಬ ಪ್ರಶ್ನೆಯನ್ನು ಸಾಜೀದ್ ಕೇಳಿದರು. ಆದರೆ ಮಾತಿನ ಸಂದರ್ಭ ಆತ ನನ್ನ ದೇಹವನ್ನು ಸ್ಪರ್ಶಿಸಿಲ್ಲ. ಈ ರೀತಿಯ ಪ್ರಶ್ನೆಗೆ ನಾನು ಯಾವ ರೀತಿ ನಗುತ್ತೇನೆ ಅಥವಾ ಪ್ರತಿಕ್ರಿಯೆ ನೀಡುತ್ತೇನೆ ಎಂಬುದು ಆತನ ಲೆಕ್ಕಚಾರವಾಗಿತ್ತು ಅನಿಸುತ್ತದೆ. ಆತನ ಚಿತ್ರದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂದರೆ ನಾನು ಆ ರೀತಿ ಮಾಡಬೇಕಿತ್ತು ಎಂಬುದು ಆವರ ಅಭಿಪ್ರಾಯವಾಗಿತ್ತು ಅನಿಸುತ್ತದೆ. ಆದರೆ ನಾನು ಅದಕ್ಕೆ ಒಪ್ಪಲಿಲ್ಲ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಮಿತಾಭ್ ಬಚ್ಚನ್ ಗೆ ನೋಟಿಸ್ ಜಾರಿ ಮಾಡಿದ ದೆಹಲಿ ಬಾರ್ ಕೌನ್ಸಿಲ್. ಕಾರಣವೇನು ಗೊತ್ತಾ?