Select Your Language

Notifications

webdunia
webdunia
webdunia
webdunia

ನಟಿ ರವೀನಾ ಟಂಡನ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಕೋರ್ಟ್ ಆದೇಶ. ಕಾರಣವೇನು ಗೊತ್ತಾ?

ನಟಿ ರವೀನಾ ಟಂಡನ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಕೋರ್ಟ್ ಆದೇಶ. ಕಾರಣವೇನು ಗೊತ್ತಾ?
ಮುಂಬೈ , ಸೋಮವಾರ, 5 ನವೆಂಬರ್ 2018 (07:01 IST)
ಮುಂಬೈ : ರಸ್ತೆ ಸಂಚಾರಕ್ಕೆ ಅಡ್ಡಿಯುಂಟು ಮಾಡಿದ ಆರೋಪದ ಮೇಲೆ ಬಾಲಿವುಡ್‌ ನಟಿ ರವೀನಾ ಟಂಡನ್‌ ಸೇರಿದಂತೆ ಒಟ್ಟು ಇಬ್ಬರ ವಿರುದ್ದ ಎಫ್‌ಐಆರ್‌ ದಾಖಲಿಸುವಂತೆ ನ್ಯಾಯಾಲಯ ಪೊಲೀಸರಿಗೆ ಆದೇಶ ನೀಡಿದ್ದಾರೆ.


ಅಕ್ಟೋಬರ್‌ 12ರಂದು . ರವೀನ್‌ ಟಂಡನ್‌ ಅವರು ಬಿಹಾರದ ಪಟ್ಟಣಕ್ಕೆ ಉದ್ಘಾಟನೆ ಸಮಾರಂಭಕ್ಕೆ ಹೋಗಿದಾಗ ಆ ಸ್ಥಳದಲ್ಲಿ ಟ್ರಾಫಿಕ್‌ ಜಾಮ್ ಉಂಟಾಗಿತ್ತು. ರವೀನಾ ಟಂಡನ್‌ ಅವರ ಕಾರ್ಯಕ್ರಮದಿಂದಾಗಿ ಟ್ರಾಫಿಕ್‌ ಜಾಮ್‌ ಉಂಟಾಗಿದ್ದರಿಂದ ಅದರಲ್ಲಿ ಸಿಲುಕಿದ ವಕೀಲ ಸುಧೀರ್‌ ಕುಮಾರ್ ಓಜಾ ಎಂಬುವವರು ರವೀನಾ ಟಂಡನ್‌ ಅವರ ವಿರುದ್ಧ ಸೆಕ್ಷನ್‌ 156(3) ರ ಅಡಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಮತ್ತು ಎಫ್‌ಐಆರ್‌ ದಾಖಲಿಸಲು ಪೊಲೀಸರಿಗೆ ದೂರು ನೀಡಿ ಮನವಿ ಮಾಡಿದ್ದಾರೆ.


ಈ ಹಿನ್ನಲೆಯಲ್ಲಿ ಮುಜಾಫರ್‌ನಗರದ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್‌ ದೀಪಕ್‌ ಕುಮಾರ್‌ ಅವರು ನಟಿ ರವೀನಾ ಟಂಡನ್‌ ಸೇರಿ ಇತರೆ ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಮುಜಾಫರ್‌ನಗರದ ಕಾಜಿ ಮೊಹಮ್ಮದ್‌ಪುರ ಪೊಲೀಸರಿಗೆ ಆದೇಶ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮ ಪಿಸ್ತೂಲ್ ಮಾರಾಟ ದಂಧೆ; ಸ್ಯಾಂಡಲ್ ವುಡ್ ನಟ ಸೇರಿದಂತೆ ನಾಲ್ವರು ಅರೆಸ್ಟ್