ಅಕ್ರಮ ಪಿಸ್ತೂಲ್ ಮಾರಾಟ ದಂಧೆ; ಸ್ಯಾಂಡಲ್ ವುಡ್ ನಟ ಸೇರಿದಂತೆ ನಾಲ್ವರು ಅರೆಸ್ಟ್

ಸೋಮವಾರ, 5 ನವೆಂಬರ್ 2018 (06:47 IST)
ಬೆಂಗಳೂರು : ಅಕ್ರಮ ಪಿಸ್ತೂಲ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಆರೋಪದಡಿ ಸ್ಯಾಂಡಲ್ ವುಡ್ ನಟ ಸೇರಿದಂತೆ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.


ನಟ ಜಗದೀಶ್ ಎಸ್.ಹೊಸಮಠ (25), ಮೊಹಮ್ಮದ್ ನಿಜಾಮ್(25), ಬಿ.ಜಿ.ಸತೀಶ್‍ಕುಮಾರ್(44),  ಹಾಗೂ ಸಯ್ಯದ್ ಸಮೀರ್ ಅಹಮ್ಮದ್ ಬಂಧಿತ ಆರೋಪಿಗಳು. ಮೊಹಮ್ಮದ್ ನಿಜಾಮ್ ಮತ್ತು ಜಗದೀಶ್ ಹೊಸಮಠ ಪಿಸ್ತೂಲ್ ಇಟ್ಟುಕೊಂಡಿದ್ದಾರೆ ಎಂಬ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಅವರ ಬಳಿ ಒಂದು ಪಿಸ್ತೂಲ್ ಮತ್ತು 10 ಬುಲೆಟ್ ಗಳು ದೊರೆತ ಹಿನ್ನಲೆಯಲ್ಲಿ ಅವರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.


ನಂತರ ಬಂಧಿತ ಆರೋಪಿಗಳ ನೀಡಿದ ಮಾಹಿತಿಯ ಆಧಾರದ ಮೇಲೆ ಸತೀಶ್ ಮತ್ತು ಸೈಯದ್ ರನ್ನು ಅರೆಸ್ಟ್ ಮಾಡಿ ಮತ್ತೊಂದು ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಹಿಂದೆ ಮತ್ತಷ್ಟು ಮಂದಿ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದ್ದು, ಸಿಸಿಬಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.


ಜಾಗ್ವರ್ ಜಗ್ಗ ಎಂದೇ ಕರೆಯುವ ಹುಬ್ಬಳ್ಳಿಯ ಗಣೇಶ್‍ಪೇಟೆಯ ಶೆಟ್ಟರ ಓಣಿಯಲ್ಲಿ ವಾಸವಾಗಿದ್ದ ನಟ ಜಗದೀಶ್ ಹೊಸಮಠ "ಸರ್ಕಾರ್" ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸ್ಯಾಂಡಲ್ ವುಡ್ ನ ನಿರ್ದೇಶಕನ ಕಾರಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು