Publish Date: Wed, 18 May 2022 (08:50 IST)
Updated Date: Wed, 18 May 2022 (09:28 IST)
ಮುಂಬೈ: ಒಂದು ಕಾಲದಲ್ಲಿ ಥಿಯೇಟರ್ ನಲ್ಲಿ ಕೋಟಿ ಕೋಟಿ ಬಾಚುತ್ತಿದ್ದ ಬಾಲಿವುಡ್ ಸಿನಿಮಾಗಳು ಈಗ ದಕ್ಷಿಣ ಭಾರತದ ಸಿನಿಮಾ ಅಲೆಯಲ್ಲಿ ಕೊಚ್ಚಿ ಹೋಗುತ್ತಿವೆ.
ಹೀಗಾಗಿ ಒಟಿಟಿಯಲ್ಲಿ ರಿಲೀಸ್ ಮಾಡುವತ್ತ ಗಮನಹರಿಸುತ್ತಿದ್ದಾರೆ. ಆರ್ ಆರ್ ಆರ್, ಕೆಜಿಎಫ್ 2 ಸಿನಿಮಾ ಬಿಡುಗಡೆ ಬಳಿಕ ಬಿಡುಗಡೆಯಾದ ರನ್ ವೇ 34, ಹೀರೋಪಂತಿ ಎರಡೂ ಮಕಾಡೆ ಮಲಗಿದ್ದವು. ಜೆರ್ಸಿ ಕೂಡಾ ಗಲ್ಲಾಪೆಟ್ಟಿಗೆಯಲ್ಲಿ ಗಳಿಸಿದ್ದು ಅಷ್ಟರಲ್ಲೇ ಇದೆ.
ಹೀಗಾಗಿ ಈಗ ಅಕ್ಷಯ್ ಕುಮಾರ್ ಅಭಿನಯದ ಪೃಥ್ವೀರಾಜ್ ಸಿನಿಮಾವನ್ನು ನೇರವಾಗಿ ಒಟಿಟಿಯಲ್ಲೇ ಬಿಡುಗಡೆ ಮಾಡಲು ಚಿತ್ರತಂಡ ಚಿಂತನೆ ನಡೆಸಿದೆಯಂತೆ. ಇದರ ಜೊತೆಗೆ ರಣಬೀರ್ ಕಪೂರ್ ಅಭಿನಯದ ಶಂಷೇರಾ ಕೂಡಾ ಒಟಿಟಿಯಲ್ಲಿ ಬಿಡುಗಡೆಯಾಗುವ ಸಾಧ‍್ಯತೆಯಿದೆ ಎನ್ನಲಾಗುತ್ತಿದೆ. ಇನ್ನೂ ಯಾವೆಲ್ಲಾ ಸಿನಿಮಾಗಳು ಒಟಿಟಿ ಕಡೆಗೆ ಮುಖ ಮಾಡುತ್ತವೋ ಕಾದು ನೋಡಬೇಕು.