ಹೈದರಾಬಾದ್: ಇತ್ತೀಚೆಗೆ ನಟರಂತೇ ಸ್ಟಾರ್ ನಿರ್ದೇಶಕರೂ ಹುಟ್ಟಿಕೊಂಡಿದ್ದಾರೆ. ಇಂತಹ ನಿರ್ದೇಶಕರಿಗೆ ಪರಭಾಷೆಗಳಲ್ಲೂ ಬೇಡಿಕೆ ಹೆಚ್ಚಾಗುತ್ತಿದೆ. ಅವರಲ್ಲಿ ಟಾಲಿವುಡ್ ನಿರ್ದೇಶಕ ಅಟ್ಲೀ ಕೂಡಾ ಒಬ್ಬರು.
ಮರ್ಸೆಲ್ ಮುಂತಾದ ಹಿಟ್ ಚಿತ್ರಗಳನ್ನು ನೀಡಿದ ಅಟ್ಲೀಗೆ ಬಾಲಿವುಡ್ ನಲ್ಲೂ ಬೇಡಿಕೆಯಿದೆ. ಈ ನಡುವೆ ಅಲ್ಲು ಅರ್ಜುನ್ ಜೊತೆಗೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಹೊರಟಿದ್ದರು ಎಂಬ ಸುದ್ದಿಯಿತ್ತು.
ಆದರೆ ಅಟ್ಲೀ ಈ ಸಿನಿಮಾಗೆ ಬರೋಬ್ಬರಿ 35 ಕೋಟಿ ರೂ. ಸಂಭಾವನೆ ಕೇಳಿದ್ದಾರಂತೆ. ಅವರ ದುಬಾರಿ ಸಂಭಾವನೆಗೆ ಬೆಚ್ಚಿಬಿದ್ದ ಅಲ್ಲು ಅರ್ಜುನ್, ಅಟ್ಲೀ ಜೊತೆಗೆ ಸಿನಿಮಾ ಮಾಡುವ ಯೋಜನೆಯನ್ನೇ ಕೈಬಿಟ್ಟಿದ್ದಾರಂತೆ.