Publish Date: Tue, 17 May 2022 (09:40 IST)
Updated Date: Tue, 17 May 2022 (09:48 IST)
ಹೈದರಾಬಾದ್: ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ಬಿಗ್ ಬಜೆಟ್ ಸಿನಿಮಾ ಸಲಾರ್ ಇಂದಿನಿಂದ ಮತ್ತೊಂದು ಹಂತದ ಚಿತ್ರೀಕರಣ ಆರಂಭಿಸಲಿದೆ.
ಕೆಜಿಎಫ್ ಬಳಿಕ ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ಮತ್ತೊಂದು ಬಿಗ್ ಬಜೆಟ್ ಸಿನಿಮಾವಿದು. ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಪ್ರಚಾರ ಕಾರ್ಯಕ್ಕಾಗಿ ಕೆಲವು ದಿನ ಸಲಾರ್ ಶೂಟಿಂಗ್ ನಿಂದ ಬ್ರೇಕ್ ತೆಗೆದುಕೊಂಡಿದ್ದರು. ಈಗಾಗಲೇ ಸಿನಿಮಾ ಶೇ.30 ರಷ್ಟು ಚಿತ್ರೀಕರಣ ನಡೆದಿದೆ.
ಉಳಿದ ಭಾಗ ಇಂದಿನಿಂದ ಚಿತ್ರೀಕರಣ ಆರಂಭವಾಗಲಿದೆ. ಸಲಾರ್ ಕೂಡಾ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಕೆಜಿಎಫ್ ಗಿಂತಲೂ ಬೃಹತ್ ಸಿನಿಮಾ ಮಾಡಲು ಚಿತ್ರತಂಡ ನಿರ್ಧರಿಸಿದೆಯಂತೆ.