Publish Date: Thu, 07 May 2020 (09:16 IST)
Updated Date: Thu, 07 May 2020 (09:18 IST)
ಮುಂಬೈ: ಲಾಕ್ ಡೌನ್ ನಡುವೆಯೂ ಹಿಂದಿ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮಕದ ಶೂಟಿಂಗ್ ನಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಶೂಟಿಂಗ್ ಪಾಲ್ಗೊಂಡಿದ್ದಾರೆ.
ಅಮಿತಾಭ್ ಬಚ್ಚನ್ ತಾವು ಶೂಟಿಂಗ್ ನಲ್ಲಿ ಪಾಲ್ಗೊಂಡ ಬಗ್ಗೆ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದು ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು ಎಂದೂ ಬರೆದುಕೊಂಡಿದ್ದಾರೆ.
ಕೌನ್ ಬನೇಗಾ ಕರೋಡ್ ಪತಿ ಸೀಸನ್ 12 ರ ಪ್ರೋಮೋ ಶೂಟ್ ನಲ್ಲಿ ಅಮಿತಾಭ್ ಪಾಲ್ಗೊಂಡಿದ್ದಾರೆ. ಕೇವಲ ಒಂದೇ ದಿನದಲ್ಲಿ ಶೂಟಿಂಗ್ ಮುಗಿಸಿಕೊಟ್ಟಿರುವುದಾಗಿ ಅಮಿತಾಭ್ ಬರೆದುಕೊಂಡಿದ್ದಾರೆ.