Select Your Language

Notifications

webdunia
webdunia
webdunia
webdunia

ಜೂಲಾನ್ ರೀತಿ ಮಾತಾಡಲ್ಲ, ಬಣ್ಣವೂ ಇಲ್ಲ: ಅನುಷ್ಕಾ ಶರ್ಮಾ ಮೇಲೆ ನೆಟ್ಟಿಗರ ಆಕ್ರೋಶ

ಜೂಲಾನ್ ರೀತಿ ಮಾತಾಡಲ್ಲ, ಬಣ್ಣವೂ ಇಲ್ಲ: ಅನುಷ್ಕಾ ಶರ್ಮಾ ಮೇಲೆ ನೆಟ್ಟಿಗರ ಆಕ್ರೋಶ
ಮುಂಬೈ , ಶನಿವಾರ, 8 ಜನವರಿ 2022 (11:53 IST)
ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮಹಿಳಾ ಕ್ರಿಕೆಟ್ ಆಟಗಾರ್ತಿ ಜೂಲಾನ್ ಗೋಸ್ವಾಮಿ ಅವರ ಜೀವನಾಧಾರಿತ ‘ಚಕ್ದಾ ಎಕ್ಸ್ ಪ್ರೆಸ್’ ಎನ್ನುವ ಸಿನಿಮಾ ನಿರ್ಮಿಸಿ, ಅಭಿನಯಿಸಿದ್ದಾರೆ.

ಸ್ವತಃ ಅನುಷ್ಕಾ ಇಲ್ಲಿ ಜೂಲಾನ್ ಪಾತ್ರ ಮಾಡುತ್ತಿದ್ದು, ಈ ಚಿತ್ರದ ಟೀಸರ್ ಲೋಕಾರ್ಪಣೆಯಾಗಿದೆ. ನೆಟ್ ಫ್ಲಿಕ್ಸ್ ನಲ್ಲಿ ಸಿನಿಮಾ ಪ್ರಸಾರವಾಗಲಿದೆ.

ಆದರೆ ಟೀಸರ್ ನೋಡಿದ ನೆಟ್ಟಿಗರು ಅನುಷ್ಕಾ ಬಣ್ಣ, ಭಾಷೆ, ವ್ಯಕ್ತಿತ್ವ  ಯಾವುದರಲ್ಲೂ ಜೂಲಾನ್ ಗೆ ಹೋಲಿಕೆಯೇ ಆಗುತ್ತಿಲ್ಲ ಎಂದು ಟೀಕಿಸಿದ್ದಾರೆ. ಸಾಮಾನ್ಯವಾಗಿ ಜೀವನಾಧಾರಿತ ಕತೆ ಮಾಡುವಾಗ ಮೂಲ ವ್ಯಕ್ತಿಗಳ ಹಾವ-ಭಾವ, ಭಾಷೆಯನ್ನು ಅನುಕರಿಸಬೇಕಾಗುತ್ತದೆ. ಆದರೆ ಅನುಷ್ಕಾ ಇದೆಲ್ಲದರಲ್ಲೂ ಎಡವಿದ್ದಾರೆ. ಜೂಲಾನ್ ಮೂಲತಃ ಬೆಂಗಾಳಿ ಮಾತನಾಡುತ್ತಾರೆ. ಆದರೆ ಆ ಭಾಷೆಯ ಲವಲೇಷವೂ ಟೀಸರ್ ನಲ್ಲಿ ಕಾಣುತ್ತಿಲ್ಲ ಎಂದು ನೆಟ್ಟಿಗರು ಟೀಕಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಗೆ ಇಂದು ಜನ್ಮದಿನದ ಸಂಭ್ರಮ