Select Your Language

Notifications

webdunia
webdunia
webdunia
webdunia

ರಾಕಿಂಗ್ ಸ್ಟಾರ್ ಯಶ್ ಗೆ ಇಂದು ಜನ್ಮದಿನದ ಸಂಭ್ರಮ

ರಾಕಿಂಗ್ ಸ್ಟಾರ್ ಯಶ್ ಗೆ ಇಂದು ಜನ್ಮದಿನದ ಸಂಭ್ರಮ
ಬೆಂಗಳೂರು , ಶನಿವಾರ, 8 ಜನವರಿ 2022 (08:40 IST)
ಬೆಂಗಳೂರು: ಕೆಜಿಎಫ್ ಸಿನಿಮಾ ಮೂಲಕ ಇಡೀ ದೇಶವೇ ಕನ್ನಡ ಚಿತ್ರರಂಗದ ಕಡೆಗೆ ತಿರುಗಿ ನೋಡುವಂತೆ ಮಾಡಿದ ರಾಕಿಂಗ್ ಸ್ಟಾರ್ ಯಶ್ ಗೆ ಇಂದು ಜನ್ಮದಿನದ ಸಂಭ್ರಮ.

ಅಭಿಮಾನಿಗಳ ಮೆಚ್ಚಿನ ರಾಕಿ ಭಾಯಿ ಈ ಬಾರಿಯೂ ಕೊರೋನಾ ಕಾರಣದಿಂದ ಸಾರ್ವಜನಿಕವಾಗಿ ಬರ್ತ್ ಡೇ ಆಚರಿಸಿಕೊಳ್ಳುತ್ತಿಲ್ಲ. ಕುಟುಂಬಸ್ಥರೊಂದಿಗೆ ಈ ದಿನ ಕಾಲ ಕಳೆಯಲಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಕೆಜಿಎಫ್ 2 ಶೈಲಿಯ ಯಶ್ ರ ವಿಶೇಷ ಕೇಕ್ ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಆದರೆ ಯಶ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅವರ ವಿಶೇಷ ಡಿಪಿ, ಟ್ರೆಂಡ್ ಮಾಡುವ ಮೂಲಕ ಮೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ. ಈ ಬಾರಿ ಯಶ್ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಬಗ್ಗೆ ಏನಾದರೂ ಅಪ್ ಡೇಟ್ ಸಿಗಬಹುದಾ ಎಂಬ ನಿರೀಕ್ಷೆಯೂ ಅಭಿಮಾನಿಗಳಲ್ಲಿದೆ. ಅದಲ್ಲದೆ, ಇದೇ ಏಪ್ರಿಲ್ 14 ರಂದು ಕೆಜಿಎಫ್ 2 ಸಿನಿಮಾ ಬಿಡುಗಡೆಯಾಗಲಿದ್ದು, ಯಶ್ ಪಾಲಿಗೆ ಈ ವರ್ಷ ವಿಶೇಷವಾಗಿರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೈಮ್ ವಿಡಿಯೋನಲ್ಲಿ ಇನ್ನೂ ಪುಷ್ಪ ಸಿನಿಮಾ ಬಂದಿಲ್ಲವೇಕೆ? ಸಮಯ ಇಲ್ಲಿದೆ ನೋಡಿ