Select Your Language

Notifications

webdunia
webdunia
webdunia
webdunia

ಕ್ರಿಕೆಟಿಗಳಾಗಿ ಕಮ್ ಬ್ಯಾಕ್ ಮಾಡ್ತಿದ್ದಾರೆ ವಿರಾಟ್ ಪತ್ನಿ ಅನುಷ್ಕಾ ಶರ್ಮಾ

ಕ್ರಿಕೆಟಿಗಳಾಗಿ ಕಮ್ ಬ್ಯಾಕ್ ಮಾಡ್ತಿದ್ದಾರೆ ವಿರಾಟ್ ಪತ್ನಿ ಅನುಷ್ಕಾ ಶರ್ಮಾ
ಮುಂಬೈ , ಗುರುವಾರ, 6 ಜನವರಿ 2022 (10:27 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಈಗ ಕ್ರಿಕೆಟಿಗಳಾಗಿ ಸಿನಿಮಾಗೆ ಕಮ್ ಬ್ಯಾಕ್ ಮಾಡ್ತಿದ್ದಾರೆ.

ವಿರಾಟ್ ಮದುವೆಯಾದ ಮೇಲೆ ಸಿನಿಮಾದಿಂದ ಕೊಂಚ ದೂರವೇ ಉಳಿದಿದ್ದ ಅನುಷ್ಕಾ ಈಗ ಭಾರತ ಮಹಿಳಾ ಕ್ರಿಕೆಟ್ ತಂಡದ ಖ್ಯಾತ ವೇಗಿ ಜೂಲನ್ ಗೋಸ್ವಾಮಿ ಜೀವನಾಧಾರಿತ ಕತೆಯಿರುವ ‘ಚಕ್ದಾ ಎಕ್ಸ್ ಪ್ರೆಸ್’ ಎನ್ನುವ ಸಿನಿಮಾದೊಂದಿಗೆ ಕಮ್ ಬ್ಯಾಕ್ ಮಾಡ್ತಿದ್ದಾರೆ.

ಶಾರುಖ್ ಖಾನ್ ಜೊತೆಗೆ ಜೀರೋ ಸಿನಿಮಾ ಸೋತು ಹೋದ ಬಳಿಕ ಅನುಷ್ಕಾ ಸಿನಿಮಾದಿಂದ ದೂರವೇ ಉಳಿದಿದ್ದರು. ಇದೀಗ ತಮ್ಮದೇ ನಿರ್ಮಾಣ ಸಂಸ್ಥೆಯಲ್ಲಿ ತಯಾರಾದ ಚಕ್ದಾ ಎಕ್ಸ್ ಪ್ರೆಸ್ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ಈ ಸಿನಿಮಾ ಒಟಿಟಿ ಫ್ಲ್ಯಾಟ್ ಫಾರಂ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗಲಿದೆ. ಮಹಿಳೆಯರು ಕ್ರಿಕೆಟ್ ಆಡುವುದೇ ಕಷ್ಟವಾಗಿರುವ ಕಾಲದಲ್ಲಿ ಜೂಲನ್ ಬೆಳೆದು ಬಂದ ರೀತಿ ಎಲ್ಲರಿಗೂ ಸ್ಪೂರ್ತಿ. ಆಕೆಯ ಸ್ಪೂರ್ತಿದಾಯಕ ಕತೆ ಈ ಸಿನಿಮಾದಲ್ಲಿದೆ ಎಂದು ಅನುಷ್ಕಾ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೈಬರ್ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ ಅವಿನಾಶ್