Select Your Language

Notifications

webdunia
webdunia
webdunia
webdunia

ಬಾಲಿವುಡ್ ನ ಮತ್ತೊಬ್ಬ ಸ್ಟಾರ್ ನಟನ ದಾಂಪತ್ಯ ಬದುಕು ಅಂತ್ಯ?!

ಬಾಲಿವುಡ್ ನ ಮತ್ತೊಬ್ಬ ಸ್ಟಾರ್ ನಟನ ದಾಂಪತ್ಯ ಬದುಕು ಅಂತ್ಯ?!
ಮುಂಬೈ , ಬುಧವಾರ, 22 ಮೇ 2019 (08:20 IST)
ಮುಂಬೈ: ಸೆಲೆಬ್ರಿಟಿಗಳಲ್ಲಿ ಮದುವೆ, ಬ್ರೇಕ್ ಅಪ್ ಎನ್ನುವುದೆಲ್ಲಾ ಸಾಮಾನ್ಯ. ಇದೀಗ ಬಾಲಿವುಡ್ ನಲ್ಲಿ ಒಂದು ಕಾಲದಲ್ಲಿ ಹುಡುಗಿಯರ ಫೇವರಿಟ್ ಆಗಿದ್ದ ಇಮ್ರಾನ್ ಖಾನ್ ದಾಂಪತ್ಯ ಬದುಕು ಅಂತ್ಯ ಕಂಡಿದೆ ಎಂದೇ ಸುದ್ದಿ ಹಬ್ಬಿದೆ.


ಇಮ್ರಾನ್ ಖಾನ್ ಎಂದರೆ ಪಕ್ಕನೇ ನೆನಪಾಗದಿದ್ದರೆ ಜಾನೇ ತೂ ಯಾ ಜಾನೇ ಮನ್ ಸಿನಿಮಾ ನೆನಪಿಸಿಕೊಳ್ಳಿ. ಸೂಪರ್ ಹಿಟ್ ಆಗಿದ್ದ ಈ ಸಿನಿಮಾ ಮೂಲಕ ಇಮ್ರಾನ್ ಹುಡುಗಿಯರ ಫೇವರಿಟ್ ಹೀರೋ ಆಗಿದ್ದರು.

ಅದಾದ ಬಳಿಕ ಇಮ್ರಾನ್ ತಮ್ಮ ಬಾಲ್ಯದ ಗೆಳತಿ ಆವಂತಿಕಾ ಜತೆ ಮದುವೆಯಾಗಿ ಇಬ್ಬರಿಗೂ ಇಮರಾ ಎನ್ನುವ ಪುತ್ರಿಯೂ ಜನಿಸಿದ್ದಳು. ಇತ್ತೀಚೆಗೆ ಇಮ್ರಾನ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪವಾಗಿಬಿಟ್ಟಿದೆ.

ಇದೀಗ ಬಂದಿರುವ ಲೇಟೆಸ್ಟ್ ಸುದ್ದಿಯ ಪ್ರಕಾರ ಇಮ್ರಾನ್ ಮತ್ತು ಆವಂತಿಕ ವಿಚ್ಛೇದನದ ಹಾದಿಯಲ್ಲಿದ್ದಾರಂತೆ. ಆವಂತಿಕಾ ಈಗಾಗಲೇ ಮಗಳ ಸಮೇತ ಇಮ್ರಾನ್ ಮನೆ ಬಿಟ್ಟು ತಮ್ಮ ಕುಟುಂಬದವರ ಜತೆಗೆ ವಾಸಿಸುತ್ತಿದ್ದಾರಂತೆ. ಅಸಲಿ ವಿಚಾರ ಸದ್ಯದಲ್ಲೇ ಬಹಿರಂಗವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ಸಂಭ್ರಮ ಬಳಿಕ ಯುವರತ್ನ ಶೂಟಿಂಗ್ ಗೆ ಹಾಜರಾಗಲಿರುವ ಪುನೀತ್ ರಾಜ್ ಕುಮಾರ್