Publish Date: Mon, 18 Jun 2018 (12:07 IST)
Updated Date: Mon, 18 Jun 2018 (12:09 IST)
ಬೆಂಗಳೂರು : ದೇಹದ ತೂಕ ಕಡಿಮೆ ಮಾಡಬೇಕೆಂದರೆ ತಿನ್ನುವ ಆಹಾರದಲ್ಲಿ ನಿಯಂತ್ರಣವಿರಬೇಕು ಅಥವಾ ಮೈ ಬಗ್ಗಿಸಿ ದುಡಿಯಬೇಕು. ಇವೆರಡನ್ನು ಮಾಡಲು ತುಂಬಾ ಕಷ್ಟವಾದವರಿಗೆ ತೂಕ ಇಳಿಸಲು ಸುಲಭ ಉಪಾಯವೆಂದರೆ ಅದು ಓಂ ಕಾಳಿನ ನೀರು ಕುಡಿಯುವುದು.
ಹೌದು. ಏನೇ ಮಾಡಿದರೂ ದೇಹದ ತೂಕ ಕಡಿಮೆಯಾಗಿಲ್ಲ ಎನ್ನವವರು ಒಮ್ಮೆ ಓಮಿನ ಕಾಳಿನ ನೀರು ಕುಡಿಯಿರಿ. ಒಂದು ಟೀ ಸ್ಪೂನ್ ಓಮಿನ ಕಾಳನ್ನು ರಾತ್ರಿ ಇಡೀ ನೀರಿನಲ್ಲಿ ನೆನಸಿಡಿ. ಬೆಳಗ್ಗೆ ಕಾಳಿನೊಂದಿಗೆ ನೀರನ್ನೂ ಕುದಿಸಿ. ಅದನ್ನು ಸೋಸಿ ಈ ನೀರನ್ನು ಊಟಕ್ಕೂ ಒಂದು ಗಂಟೆ ಮುಂಚೆ ಅಥವಾ ಖಾಲಿ ಹೊಟ್ಟೇಲಿ ಕುಡಿಯಿರಿ. ಇದರಿಂದ ಅನೇಕರಿಗೆ ಕಿಬ್ಬೊಟ್ಟೆಯ ಕೊಬ್ಬೂ ಕರಗಿ ದೇಹ ಸುಂದರವಾಗಿರುವ ಉದಾಹರಣೆಗಳಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ