Publish Date: Sun, 17 Jun 2018 (14:38 IST)
Updated Date: Sun, 17 Jun 2018 (14:50 IST)
ಬೆಂಗಳೂರು : ಕನ್ನಡದ ಚಿತ್ರರಂಗದಲ್ಲಿ ಆಗಾಗ ಸುದ್ದಿಯಾಗುತ್ತಿರುವ ಜೋಡಿ ಎಂದರೆ ಅದು ನಟ ರಕ್ಷಿತ್ ಶೆಟ್ಟಿ ಹಾಗೂ ನಟಿ ರಶ್ಮಿಕಾ ಮಂದಣ್ಣ ಜೋಡಿ. ಇದೀಗ ನಟ ರಕ್ಷಿತ್ ಶೆಟ್ಟಿ ಅವರು ತಮ್ಮ ಭಾವಿ ಪತ್ನಿ ರಶ್ಮಿಕಾ ಅವರಿಗೆ ಸವಾಲೊಂದನ್ನು ನೀಡುವುದರ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ಹೌದು. ಆ ಸವಾಲು ಬೇರೆ ಯಾವುದು ಅಲ್ಲ. ಇತ್ತೀಚೆಗೆ ಸುದ್ದಿಯಲ್ಲಿರುವ ಫಿಟ್ನೆಸ್ ಚಾಲೆಂಜ್. ನಟ ರಕ್ಷಿತ್ ಶೆಟ್ಟಿ ಅವರು ಅಪ್ಪು ಹಾಕಿದ್ದ ಈ ಚಾಲೆಂಜ್ ಸ್ವೀಕರಿಸಿ ಸಖತ್ ಸ್ಪೆಷಲ್ ಆಗಿ ವರ್ಕೌಟ್ ಮಾಡಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
ನಂತರ ಈ ಫಿಟ್ನೆಸ್ ಚಾಲೆಂಜ್‌ನ್ನು ರಿಷಭ್ ಶೆಟ್ಟಿ, ನಟಿ ಮೇಘನಾ ಗಾಂವಕರ್ ಹಾಗೂ ರಶ್ಮಿಕಾ ಮಂದಣ್ಣ ಅವರಿಗೆ ವರ್ಗಾಯಿಸಿದ್ದಾರೆ. ಈಗಾಗಲೇ ತಮ್ಮ ಭಾವಿ ಪತಿ ನೀಡಿರುವ ಸವಾಲನ್ನು ಕಿರಿಕ್ ಬೆಡಗಿ ರಶ್ಮಿಕಾ ಅವರು ಸ್ವೀಕರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ