Select Your Language

Notifications

webdunia
webdunia
webdunia
Thursday, 17 April 2025
webdunia

ನಟ ಆದಿತ್ಯ ಕಥೆ ಕೇಳುವುದರ ಬಗ್ಗೆ ಆಸಕ್ತಿ ಕಳೆದುಕೊಂಡಿದ್ಯಾಕೆ?

ಬೆಂಗಳೂರು
ಬೆಂಗಳೂರು , ಭಾನುವಾರ, 17 ಜೂನ್ 2018 (14:12 IST)
ಬೆಂಗಳೂರು : ‘ಆದಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟ ಆದಿತ್ಯ ಅವರಿಗೆ ಇತ್ತೀಚೆಗೆ ಕಥೆ ಕೇಳುವುದರ ಬಗ್ಗೆ ಆಸಕ್ತಿಯೇ ಇಲ್ಲವಂತೆ.


ನಟ ಆದಿತ್ಯ ಅವರು ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದರೂ ಕೂಡ ಅವರು ತುಂಬಾ ಫೇಮಸ್ ಆಗಿದ್ದು ‘ಡೆಡ್ಲಿ ಸೋಮ’ ಚಿತ್ರದ ಮೂಲಕ. ಆದ್ದರಿಂದ ಅವರಿಗೆ ಕಥೆ ಹೇಳಲು ಬಂದವರು ಬರೀ ಅಂಡರ್‌ವರ್ಲ್ಡ್‌‌ ಕಥೆನೇ ಹೇಳುತ್ತಾರಂತೆ. ಇದರಿಂದ ಅವರಿಗೆ ಕಥೆ ಕೇಳುವುದರ ಬಗ್ಗೆ ಆಸಕ್ತಿಯೇ ಇಲ್ಲದಂತಾಗಿದೆಯಂತೆ.


ಈ ಬಗ್ಗೆ  ನಟ ಆದಿತ್ಯ ಅವರು ಇತ್ತೀಚೆಗೆ ‘ಲೈಫ್‌ ಜತೆ ಒಂದು ಸೆಲ್ಫಿ’ ಚಿತ್ರದ ಆಡಿಯೋ ಹಾಗೂ ಟ್ರೈಲರ್ ಲಾಂಚ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ತಿಳಿಸಿದ್ದಾರೆ. ‘ನಾನು ಇತ್ತೀಚಿಗೆ ಕಥೆ ಕೇಳೋದನ್ನೇ ಬಿಟ್ಟಿದ್ದೇನೆ. ಕಥೆ ಹೇಳಲು ಬಂದವರು ಬರೀ ಅಂಡರ್‌ವರ್ಲ್ಡ್‌‌ ಕಥೆನೇ ಹೇಳುತ್ತಾರೆ. ಇದರಿಂದ ಬೇಸತ್ತು ಹೋಗಿದ್ದೇನೆ. ಹೀಗಾಗಿ ಕಥೆ ಕೇಳೋದನ್ನೆ ನಿಲ್ಲಿಸಿಬಿಟ್ಟಿದ್ದೇನೆ. ಕನ್ನಡಕ್ಕೆ ಹೊಸತನವಿರುವ ಚಿತ್ರಗಳು ಬೇಕಾಗಿವೆ’ ಎಂದು ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಮೇರಿಕಾದ ವೇಶ್ಯಾವಾಟಿಕೆ ದಂಧೆಯ ಕುರಿತು ನಟಿ ಶ್ರೀರೆಡ್ಡಿ ಹೇಳಿದ್ದೇನು ಗೊತ್ತಾ…?