Select Your Language

Notifications

webdunia
webdunia
webdunia
webdunia

ಅಯೋಧ್ಯೆಗೆ ಆಗಮಿಸಿದ ಪ್ರಧಾನಿ; ರಾಮನ ಬಂಟ ಹನುಮಂತನ ದರ್ಶನ

ನವದೆಹಲಿ
ನವದೆಹಲಿ , ಬುಧವಾರ, 5 ಆಗಸ್ಟ್ 2020 (12:38 IST)
ನವದೆಹಲಿ : ಇಂದು ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸದ ಹಿನ್ನಲೆಯಲ್ಲಿ ಇಂದು ಪ್ರಧಾನಿ ಮೋದಿ ದೆಹಲಿಯಿಂದ ಅಯೋಧ್ಯೆಗೆ ಆಗಮಿಸಿದ್ದಾರೆ.

ಇಂದು ಬೆಳಿಗ್ಗೆ 11.30ಕ್ಕೆ ಅಯೋಧ್ಯೆಗೆ ಬಂದಿಳಿದ ಪ್ರಧಾನಿ ಮೋದಿಯವರು ಮೊದಲಿಗೆ ರಾಮನ ಬಂಟ ಹನುಮಂತನ ದೇವಾಲಯಕ್ಕೆ ಭೇಟಿ ನೀಡಿ ಆಂಜನೇಯನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ. ನಂತರ ರಾಮಲಲ್ಲಾ ದೇಗುಲದಲ್ಲಿ ದರ್ಶನ ಪಡೆದಿದ್ದಾರೆ. ಹಾಗೇ ರಾಮಮಂದಿರದ ಬಳಿ ಸ್ವರ್ಗಲೋಕದ ವೃಕ್ಷ ಪಾರಿಜಾತ ಗಿಡವನ್ನು ನೆಟ್ಟಿದ್ದಾರೆ.

ಇದೀಗ ರಾಮಮಂದಿರದ ಭೂಮಿ ಪೂಜೆ ನಡೆಯುತ್ತಿರುವ ಸ್ಥಳಕ್ಕೆ ಬಂದ ಪ್ರಧಾನಿ ಮೋದಿ ಅಲ್ಲಿನ ಕಾರ್ಯಗಳನ್ನು ವೀಕ್ಷಣೆ ಮಾಡುತ್ತಿದ್ದಾರೆ. ಸುಮಾರು 12.44ಕ್ಕೆ ಬೆಳ್ಳಿ ಇಟ್ಟಿಗೆ ಇಡುವುದರ ಮೂಲಕ ಶಿಲಾನ್ಯಾಸಕ್ಕೆ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಮಂದಿರ ಭೂಮಿ ಪೂಜೆ ಬಗ್ಗೆ ನಟಿ ರಚಿತಾ ರಾಮ್ ಬರೆದುಕೊಂಡಿದ್ದು ಹೀಗೆ