Select Your Language

Notifications

webdunia
webdunia
webdunia
webdunia

ಆರ್ಟಿಕಲ್ 370 ರದ್ದತಿಗೆ ಒಂದು ವರ್ಷ: ಕಾಶ್ಮೀರ ಈಗ ಹೇಗಿದೆ?

webdunia
ಬುಧವಾರ, 5 ಆಗಸ್ಟ್ 2020 (09:37 IST)
ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ವರ್ಷ ಇದೇ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನ ಮಾನವನ್ನು ರದ್ದುಗೊಳಿಸಿತ್ತು. ಆರ್ಟಿಕಲ್ 370 ರದ್ದು ಮಾಡಿದ್ದ ಆ ಐತಿಹಾಸಿಕ ಕ್ರಮಕ್ಕೆ ಇಂದಿಗೆ ಒಂದು ವರ್ಷ.

 

ಮೋದಿ ಸರ್ಕಾರ ಕೈಗೊಂಡ ತೀವ್ರ ಚರ್ಚಿತ ತೀರ್ಮಾನಗಳಲ್ಲಿ ಇದೂ ಒಂದಾಗಿತ್ತು. ಕಾಂಗ್ರೆಸ್, ಎಡಪಕ್ಷಗಳು ಕೇಂದ್ರದ ತೀರ್ಮಾನವನ್ನು ತೀವ್ರವಾಗಿ ವಿರೋಧಿಸಿದ್ದರು.

ಆದರೆ ಮೋದಿ ಸರ್ಕಾರದ ಈ ಕ್ರಮ ಕಾಶ್ಮೀರದಲ್ಲಿ ಭಯೋತ್ಪಾದಕರ ಮೂಲಕ ಹಿಂಸಾಚಾರ ನಡೆಸುತ್ತಿದ್ದ ಪಾಕಿಸ್ತಾನಕ್ಕೆ ತಕ್ಕ ಪಾಠ ಎಂದು ಹಲವರು ವಿಶ್ಲೇಷಿಸಿದ್ದರು. ಇಂದಿನ ಪರಿಸ್ಥಿತಿ ನೋಡಿದರೆ ಅದು ನಿಜವೂ ಆಗಿದೆ.

ಕಳೆದ ಒಂದು ವರ್ಷದಿಂದ ಕಾಶ್ಮೀರದಲ್ಲಿ ಉಗ್ರರ ಚಟುವಟಿಕೆಗಳು, ಸೈನಿಕರ ಮೇಲಿನ ಕಲ್ಲು ತೂರಾಟ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿದೆ. ಆರ್ಟಿಕಲ್ 370 ರದ್ದು ಮಾಡಿದಾಗ ಕಾಶ್ಮೀರದಲ್ಲಿ ಹಿಂಸಾಚಾರ ನಡೆಯಬಹುದು ಎಂದು ಊಹಿಸಲಾಗಿತ್ತು. ಆದರೆ ಅದು ಸಂಪೂರ್ಣ ಸುಳ್ಳಾಗಿತ್ತು.

ಕಾಶ್ಮೀರದಲ್ಲಿ ಈಗ ಉಗ್ರ ಚಟುವಟಿಕೆಗಳು ಸಂಪೂರ್ಣವಾಗಿ ನಿಂತಿದೆ ಎಂದಲ್ಲ. ಆದರೆ ಕೇಂದ್ರ ಗೃಹ ಸಚಿವಾಲಯದ ವರದಿ ಪ್ರಕಾರ ಶೇ.36 ರಷ್ಟು ಕಡಿಮೆಯಾಗಿದೆ. ಇನ್ನು, ಇದೇ ವಿಚಾರವನ್ನು ಮುಂದಿಟ್ಟುಕೊಂಡು ವಿಶ್ವ ನಾಯಕರ ಗಮನ ಸೆಳೆಯಲು ಪ್ರಯತ್ನಿಸಿದ್ದ ಪಾಕಿಸ್ತಾನ ಏಕಾಂಗಿಯಾಗಿದೆ. ಅಷ್ಟೇ ಅಲ್ಲದೆ, ಅಲ್ಲಿ ಜಾರಿಯಲ್ಲಿದ್ದ ವಿಶೇಷ ಸ್ಥಾನಮಾನವನ್ನೇ ಮುಂದಿಟ್ಟುಕೊಂಡು ತಮ್ಮದೇ ಆಟವಾಡುತ್ತಿದ್ದ ಕಾಶ್ಮೀರೀ ನಾಯಕರ ಆಟಕ್ಕೂ ಬ್ರೇಕ್ ಬಿದ್ದಿದೆ.

Share this Story:

Follow Webdunia Hindi

ಮುಂದಿನ ಸುದ್ದಿ

ಹಿಂದೂಗಳ ಕನಸಾದ ಭವ್ಯ ರಾಮಮಂದಿರ ಹೇಗಿರಲಿದೆ ಗೊತ್ತಾ?