Select Your Language

Notifications

webdunia
webdunia
webdunia
webdunia

ಮತ್ತೆ ರಮ್ಯಾ ರಾಜಕೀಯ: ಪ್ರಧಾನಿ ಮೋದಿಗೆ ಟಾಂಗ್, ರಾಹುಲ್ ಗಾಂಧಿಗೆ ಜೈ

webdunia
ಬೆಂಗಳೂರು , ಬುಧವಾರ, 5 ಆಗಸ್ಟ್ 2020 (09:57 IST)
ಬೆಂಗಳೂರು: ಹಲವು ದಿನಗಳಿಂದ ರಾಜಕೀಯದಿಂದ ದೂರವೇ ಉಳಿದಿದ್ದ ನಟಿ ರಮ್ಯಾ ಈಗ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳುವ ಸೂಚನೆ ನೀಡಿದ್ದಾರೆ.


ತಮ್ಮ ಇನ್ ಸ್ಟಾಗ್ರಾಂನಲ್ಲಿ ಪ್ರಧಾನಿ ಮೋದಿ ಕೊರೋನಾ ನಿರ್ವಹಣೆ ಮಾಡಿದ ಬಗ್ಗೆ ಟೀಕಿಸಿದ ರಮ್ಯಾ ರಾಹುಲ್ ಗಾಂಧಿಯನ್ನು ದೂರದೃಷ್ಟಿಯಿರುವ ನಾಯಕ ಎಂದು ಕೊಂಡಾಡಿದ್ದಾರೆ.

ಫೆಬ್ರವರಿ 12 ರಂದೇ ರಾಹುಲ್ ಕೊರೋನಾ ಬಗ್ಗೆ ಎಚ್ಚರಿಸಿದ್ದರು. ಆದರೆ ಪ್ರಧಾನಿ ಅದೇ ದಿನ ಕಾರ್ಯಕ್ರಮವೊಂದರಲ್ಲಿ ಭಕ್ಷ್ಯ ಭೋಜನ ಸವಿಯುತ್ತಿದ್ದರು. ಅದಕ್ಕೇ ದೇಶ ಇಂದು ಈ ಪರಿಸ್ಥಿತಿಗೆ ಬಂದು ನಿಂತಿದೆ. ರಾಹುಲ್ ದೂರದೃಷ್ಟಿಯುಳ್ಳ ದೇಶದ ಬಗ್ಗೆ ಕಾಳಜಿಯಿರುವ ನಾಯಕ ಎಂದು ಹೊಗಳಿದ್ದಾರೆ. ಈ ಮೂಲಕ ರಮ್ಯಾ ಮತ್ತೆ ರಾಜಕೀಯಕ್ಕೆ ಮರಳುವ ಸೂಚನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಟನ್ ಸೀರೆಯಲ್ಲಿ ನಟಿ ದಿಯಾ ಮಿರ್ಜಾ ಹಾಟ್ ನೋಟ