Publish Date: Fri, 02 Jan 2026 (16:51 IST)
Updated Date: Fri, 02 Jan 2026 (16:55 IST)
ಸಂಜೆಯ ವೇಳೆ ದೀಪ ಹಚ್ಚುವಾಗ ಸ್ತೋತ್ರಗಳನ್ನು ಪಠಿಸುವುದು ಹಾಗೂ ಕೇಳುವುದರಿಂದ ಮನಸ್ಸಿಗೆ ಶಾಂತಿ ಹಾಗೂ ಮನೆಯಲ್ಲಿ ಸಕಾರಾತ್ಮ ಶಕ್ತಿ ನೀಡುತ್ತದೆ. ಇನ್ನೂ ಯಾವಾ ಸ್ತೋತ್ರವನ್ನು ಪಠಿಸುವುದು ಉತ್ತಮ ಎಂದು ಈ ಸುದ್ದಿಯಲ್ಲಿದೆ.
ಸಂಜೆ ದೀಪ ಹಚ್ಚಿದ ತಕ್ಷಣ ಮೊದಲು ಈ ಶ್ಲೋಕವನ್ನು ಹೇಳುವುದು ಸಂಪ್ರದಾಯ:
ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಃ | ಶತ್ರುಬುದ್ಧಿ ವಿನಾಶಾಯ ದೀಪಜ್ಯೋತಿ ನಮೋಽಸ್ತುತೇ ||
ಅರ್ಥ: ಮಂಗಳವನ್ನುಂಟು ಮಾಡುವ, ಆರೋಗ್ಯ ಮತ್ತು ಸಂಪತ್ತನ್ನು ನೀಡುವ, ಶತ್ರು ಬುದ್ಧಿಯನ್ನು ನಾಶಪಡಿಸುವ ದೀಪದ ಜ್ಯೋತಿಗೆ ನಮಸ್ಕಾರಗಳು.
* ವಿಷ್ಣು ಸಹಸ್ರನಾಮ ಅಥವಾ ಅಷ್ಟೋತ್ತರ
ಸಂಜೆಯ ಸಮಯದಲ್ಲಿ ವಿಷ್ಣು ಸಹಸ್ರನಾಮ ಪಠಿಸುವುದು ಅಥವಾ ಕೇಳುವುದು ಅತ್ಯಂತ ಶ್ರೇಷ್ಠ.
3. ಲಲಿತಾ ಪಂಚರತ್ನ ಅಥವಾ ಮಹಾಲಕ್ಷ್ಮಿ ಅಷ್ಟಕ
ಮನೆಯಲ್ಲಿ ಸಮೃದ್ಧಿ ಮತ್ತು ಶಾಂತಿಗಾಗಿ ದೇವಿಯನ್ನು ಸ್ಮರಿಸುವುದು ಉತ್ತಮ.
4. ಹನುಮಾನ್ ಚಾಲೀಸಾ
ಸಂಜೆ ಹನುಮಂತನನ್ನು ಸ್ಮರಿಸುವುದರಿಂದ ಭಯ ನಿವಾರಣೆಯಾಗಿ ಆತ್ಮವಿಶ್ವಾಸ ಹೆಚ್ಚುತ್ತದೆ. ಕನಿಷ್ಠ ಒಂದು ಬಾರಿ ಹನುಮಾನ್ ಚಾಲೀಸಾ ಪಠಿಸುವುದು ಸುಲಭ ಮತ್ತು ಪ್ರಭಾವಶಾಲಿ.
5. ಶಿವ ಪಂಚಾಕ್ಷರಿ ಸ್ತೋತ್ರ
ಸರಳವಾಗಿ ಪಠಿಸಬಹುದಾದ ಸ್ತೋತ್ರವೆಂದರೆ ಶಿವನ ಪಂಚಾಕ್ಷರಿ ಸ್ತೋತ್ರ: