Publish Date: Thu, 01 Jan 2026 (16:21 IST)
Updated Date: Thu, 01 Jan 2026 (16:24 IST)
ಸಂಜೆಯ ಸಮಯ ದೇವರ ಕೈಮುಗಿಯುವಾಗ ದೀಪ ಹಚ್ಚುವ ಸಮಯ ತುಂಬಾನೇ ಮುಖ್ಯವಾಗುತ್ತದೆ. ಶಾಸ್ತ್ರಗಳ ಪ್ರಕಾರ, ಇದನ್ನು 'ಪ್ರದೋಷ ಕಾಲ' ಅಥವಾ 'ಸಂಧ್ಯಾ ಕಾಲ' ಎಂದು ಕರೆಯಲಾಗುತ್ತದೆ.
ಈ ಸುದ್ದಿಯಲ್ಲಿ ದೀಪ ಹಚ್ಚಲು ಸರಿಯಾದ ಸಮಯ ಮತ್ತು ಅದರ ಮಹತ್ವದ ವಿವರ ಇಲ್ಲಿದೆ:
ಸೂರ್ಯಾಸ್ತದ ಸಮಯ: ಸೂರ್ಯ ಮುಳುಗುವ 24 ನಿಮಿಷಗಳ ಮೊದಲು ಮತ್ತು ಸೂರ್ಯ ಮುಳುಗಿದ 24 ನಿಮಿಷಗಳ ನಂತರದ ಸಮಯವದಲ್ಲಿ ದೀಪ ಹಚ್ಚಲು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ.
ಸಾಮಾನ್ಯವಾಗಿ: ಸಂಜೆ 5:45 ರಿಂದ 6:30 ರ ಒಳಗಿನ ಸಮಯ ದೀಪ ಹಚ್ಚಲು ಅತ್ಯಂತ ಪ್ರಶಸ್ತ.
ಗೋದೂಳಿ ಮುಹೂರ್ತದಲ್ಲಿ (ಸೂರ್ಯಾಸ್ತದ ಸಮಯ) ದೀಪ ಹಚ್ಚುವುದು ಮನೆಗೆ ಐಶ್ವರ್ಯ ಮತ್ತು ಶಾಂತಿಯನ್ನು ತರುತ್ತದೆ ಎಂಬ ನಂಬಿಕೆಯಿದೆ.
ಇನ್ನೂ ಮನೆಯಲ್ಲಿ ಪೂರ್ಣ ಕತ್ತಲೆಯಾದ ಮೇಲೆ ದೀಪ ಹಚ್ಚಬಾರದು. ಸೂರ್ಯಾಸ್ತವಾಗುತ್ತಿದ್ದಂತೆಯೇ, ಅಂದರೆ ಮಬ್ಬು ಕತ್ತಲು ಆವರಿಸುವ ಮೊದಲೇ ದೀಪದ ಬೆಳಕು ಮನೆಯಲ್ಲಿರಬೇಕು.
ಬಾಗಿಲುಗಳನ್ನು ಮುಚ್ಚಿ ದೀಪ ಹಚ್ಚಬಾರದು. ದೀಪ ಹಚ್ಚುವಾಗ ಮನೆಯ ಮುಂಭಾಗಿಲನ್ನು ತೆರೆದಿಡಬೇಕು (ಲಕ್ಷ್ಮಿ ದೇವಿಯನ್ನು ಸ್ವಾಗತಿಸಲು).