Select Your Language

Notifications

webdunia
webdunia
webdunia
webdunia

ಮೇಷಾದಿ ದ್ವಾದಶ ರಾಶಿಫಲ 2026: ಖ್ಯಾತ ಜ್ಯೋತಿಷಿ ಶ್ರೀ ವೆಂಕಟೇಶ್ವರ ಭಟ್ ಅವರಿಂದ

Horoscope 2026

Krishnaveni K

ಬೆಂಗಳೂರು , ಗುರುವಾರ, 1 ಜನವರಿ 2026 (08:35 IST)
ಮೇಷಾದಿ ದ್ವಾದಶ ರಾಶಿಗಳಲ್ಲಿ ರವ್ಯಾದಿ ನವಗ್ರಹರ ರಾಶಿ ಬದಲಾವಣೆಯಿಂದ ಆಗುವ  ಗೋಚರಫಲ 01-01-2026 ರಿಂದ 31-12-2026 ರ ವರೆಗೆ : ಖ್ಯಾತ ಜ್ಯೋತಿಷಿ ವೆಂಕಟೇಶ್ವರ ಭಟ್ ಇವರಿಂದ.

ಗುರು ಗ್ರಹವು 01-06-2026 ನೇ ದಿನಾಂಕದಂದು ಕರ್ಕಾಟಕ ರಾಶಿಯ ಪ್ರವೇಶ

ಮೇಷರಾಶಿ:-ಈ ವರ್ಷ ದೈವಬಲ ಕಡಿಮೆ. ವರ್ಷದ ಬಹುಪಾಲು ಗುರುವು ಸುಖಸ್ಥಾನದಲ್ಲಿ ಪ್ರತಿಕೂಲನು, ಶನಿಯು ವರ್ಷಪೂರ್ತಿ ವ್ಯಯಸ್ಥಾನದಲ್ಲಿ ಸಂಚರಿಸುತ್ತಾ ನಷ್ಟ ಕಷ್ಟ, ದುರ್ವ್ಯವಹಾರಗಳು, ಅಪಘಾತಭಯ ಇತ್ಯಾದಿಗಳಿಗೆ ಕಾರಣನೆನಿಸುವನು. ಈ ಕಾಲದಲ್ಲಿ ಸ್ಥಾನಮಾನಗಳಿಗೆ ಅನುಕೂಲವಲ್ಲ. ಕೌಟುಂಬಿಕ ಜೀವನದಲ್ಲಿ ಸುಖವು ಕಡಿಮೆ. ಮನಸ್ಸಿನ ನಮ್ಮದಿ ಕೆಡುವುದು. ಸಮೀಪದ ಬಂಧುಗಳಿಗೆ ತೊಂದರೆಯಿದೆ. ವೃತ್ತಿ-ವ್ಯವಹಾರಕ್ಕೆ ಸಂಬಂಧಿಸಿ ಸಂಚಾರ, ವ್ಯರ್ಥ ವಾದವಿವಾದ, ಕಾರ್ಯವಿಘ್ನ, ಕುಟುಂಬದಲ್ಲಿ ದುಃಖಕರ ಪ್ರಸಂಗಗಳು, ಆನಾರೋಗ್ಯ, ವಾಹನಗಳಿಂದ ತೊಂದರೆಗಳು, ಅಭಿವೃದ್ಧಿಗೆ ಆರ್ಥಿಕ ಅಡಚಣೆ, ಇತರರಿಂದ ವಂಚನೆ. ಅನಗತ್ಯ ಸುಳ್ಳು ಆಪಾದನೆಗೆ ಗುರಿಯಾಗುವ ಸಂದರ್ಭಗಳಿರುತ್ತವೆ. ವಾಹನ ಹಾಗೂ ವಿದ್ಯುತ್ತಿನಿಂದ ಅಪಾಯವಿದೆ. ರಾಹು ನವಂಬರ ವರೆಗೆ, ಗುರುವು ನವಂಬರ 1 ರನಂತರ 3 ತಿಂಗಳು ಅನುಕೂಲನು. ಸಾಂಸಾರಿಕ ಹಾಗೂ ಕೌಟುಂಬಿಕ ಅಭಿವೃದ್ಧಿಯಿದೆ. ವಿದ್ಯಾವ್ಯವಹಾರಗಳಲ್ಲಿ ಇಷ್ಟಾರ್ಥಸಿದ್ದಿಸುವದು. ಶ್ರಮಸಾಧ್ಯ ವೃತ್ತಿಯವರಿಗೆ ಈ ವರ್ಷ ನಷ್ಟನೆಷ್ಟುರಗಳು ಅಧಿಕ, ಶನಿಶಾಂತಿ, ಬಡವರಿಗೆ ಅನ್ನದಾನ, ಗೋಸೇವೆ, ಶಿವ-ವಿಷ್ಣುಕ್ಷೇತ್ರಗಳಲ್ಲಿ ಯಥಾಶಕ್ತಿ ಸೇವೆಸಲ್ಲಿಸುವುದರಿಂದ ಶುಭ.
 ಅಗ್ನಿಭಯ, ಉದ್ಯೋಗ-ಗೃಹಕೃತ್ಯಗಳಲ್ಲಿ ಪಿತ್ತೋಷ್ಣ ಜಾಡ್ಯ, ಪ್ರಯಾಣದಲ್ಲಿ ಕಷ್ಟನಷ್ಟಗಳು, ಎದುರಾಗುವೆವು. ಮುಂದೆ ಜುಲಾಯಿ 16 ರ ಸಕೃತ್ಯಗಳಲ್ಲಿ ತೊಂದರೆ, ಔದ್ಯೋಗಿಕವಾಗಿಯೂ ಆರ್ಥಿಕವಾಗಿಯೂ ಅಭಿವೃದ್ಧಿಯಿದೆ. ಸಾಂಸಾರಿಕವಾಗಿ ಉತ್ತಮ ಕೆಲಸಗಳಾಗಲಿವೆ. ಮುಂದೆ ಸಪ್ಟೆಂಬರ 17 ರ ವರೆಗೆ ಆರೋಗ್ಯದ ಬಗ್ಗೆ ಅದರಲ್ಲೂ ಹೊಟ್ಟೆ ಹಾಗೂ ಕಣ್ಣಿಗೆ ಸಂಬಂಧಿಸಿ ಜಾಗ್ರತೆ ವಹಿಸಬೇಕು. ಕೌಟುಂಬಿಕ ಸಾಮರಸ್ಯದ ಕೊರತೆ, ಮಕ್ಕಳಿಂದ ಮತ್ತು ಅಧೀನ ನೌಕರರಿಂದ ಅಡಚಣೆ, ಆದಾಯವು ಉತ್ತಮವಿದ್ದರೂ ಖರ್ಚುವೆಚ್ಚ ಅಧಿಕ. ಆದರೂ ಈ ಅವಧಿಯಲ್ಲಿ ಕುಜನು ಅನುಕೂಲನಿದ್ದು ವ್ಯವಹಾರಗಳು ಉತ್ತಮಗೊಳ್ಳುವುದು. ಇತರರಿಂದ ಸಹಕಾರವನ್ನು ಪಡೆಯುವಿರಿ. ಆರೋಗ್ಯವು ವೃದ್ಧಿಸುವುದು. ಮುಂದೆ ಒಕ್ಟೋಬರ 27 ರ ವರೆಗೆ ಆರೋಗ್ಯ ಸುಧಾರಿಸುವುದು. ಗೃಹಸೌಕರ್ಯ, ಬಂಧುಸಹಕಾರ, ಆತ್ಮಸ್ಥೆರ್ಯ ವೃದ್ಧಿಸುವುದು,  ಕಷ್ಟ-ನಷ್ಟಗಳು ಅಧಿಕ. ಪಿತ್ತೋಷ್ಣಜಾಡ್ಯ, ರಕ್ತದೋಷ, ಉದರಸಂಬಂಧ ವ್ಯಾಧಿಗಳು, ದಾಂಪತ್ಯದಲ್ಲಿ ವಿರಸ, ಬಂಧುವಿಯೋಗ, ಆರ್ಥಿಕ ಅಡಚಣೆ, ಅಪಘಾತಭಯ, ಇತ್ಯಾದಿ ಸಂಭವ, ಬಂಧುವಿರೋಧ ಉಂಟಾದೀತು. ಕಣ್ಣಿನ ತೊಂದರೆ, ವಿಷಭಯ, ಅಪಘಾತಭಯ ಇತ್ಯಾದಿ ಕಾಣಿಸೀತು. ಉತ್ತಮಫಲವಿದ್ದು ವ್ಯವಹಾರದಲ್ಲಿ ಅಡಚಣೆಗಳು ಕಡಿಮೆಯಾಗುವುದು. ಹೊಸಯೋಜನೆಗಳ ಅನುಷ್ಠಾನ, ನಿರೀಕ್ಷಿತ ಜನಸಹಾಯ, ಅಧಿಕಾರಿವರ್ಗದವರಿಂದ ಪ್ರಯೋಜನ, ಸಾಂಸಾರಿಕತೃಪ್ತಿ, ಕಾರ್ಯಸಫಲತೆ, ಭೂಧನಾದಿ ಲಾಭ, ಆರೋಗ್ಯವೃದ್ಧಿ ಒದಗುವುದು. ಆತ್ಮಗೌರವ ವೃದ್ಧಿಸುವುದು, ಮುಂದೆ ವರ್ಷಾಂತ್ಯದವರೆಗೂ ಅನೇಕ ವಿಧದ ಖರ್ಚುವೆಚ್ಚಗಳು, ಕೌಟುಂಬಿಕ ಕಲಹ, ವೃತ್ತಿಯಲ್ಲಿ ಹಿಂಬಡ್ತಿ, ಕಾರ್ಯವೈಫಲ್ಯ, ಬಂಧುವಿರೋಧ ಇತ್ಯಾದಿ ಎದುರಾಗುವವು.

webdunia
ವೃಷಭರಾಶಿ:- ಗುರುವು ಜನ್ಮರಾಶಿಯಿಂದ ತೃತೀಯ-ಚತುರ್ಥದಲ್ಲಿ ಸಂಚರಿಸುವನಾಗಿ ದೈವಬಲ
ಕಡಿಮೆ. ರಾಹುವೂ ಪ್ರತಿಕೂಲನು, ಸುಖ-ಸಂತೋಷಗಳು ಮರೀಚಿಕೆಯಾದಾವು. ವೃತಿ-ಉದ್ಯೋಗಗಳಲ್ಲಿ ಸ್ಪರ್ಧೆ-ಬದಲಾವಣೆ, ಆರ್ಥಿಕ ಅಡಚಣೆಗಳು, ವಾಸಸ್ಥಳ ಬದಲಾವಣೆ, ಬಂಧುಜನರಿಂದ/ಸಹೋದ್ಯೋಗೊಗಳಿಂದ ಕ್ಷೇಶಗಳು, ಪ್ರೀತಿಪಾತ್ರರು ಅಥವಾ ಸಮೀಪದ ಬಂಧುವೊಬ್ಬರು ತೊಂದರೆಗೆ ಸಿಲುಕುವರು. ಕಾರ್ಯನಿಮಿತ್ತ ಸಂಚಾರ, ಕುಟುಂಬದಲ್ಲಿ ದುಃಖಕರ ಪ್ರಸಂಗಗಳು, ಆರೋಗ್ಯಕ್ಕೂ ಉತ್ತಮವಲ್ಲ. ವಾಹನಗಳಿಂದ ತೊಂದರೆಗಳುಂಟಾಗುವ ಸಂಭವ. ಶನಿಯು ಲಾಭಸ್ಥಾನದಲ್ಲಿ ಅನುಕೂಲನು. ಕೃಷಿಕಾರ್ಯಗಳಲ್ಲಿ ಅಭಿವೃದ್ಧಿಯಿದೆ. ಗ್ರಹಿಸಿದ ಕಾರ್ಯಗಳು ಅನಿರೀಕ್ಷಿತವಾಗಿ ಒದಗಿಬರುವುದು. ಉದ್ಯೋಗ ವ್ಯವಹಾರದ ಬಗ್ಗೆಯೂ ಕಾರ್ಯಾನುಕೂಲವಿದೆ. ಹಿರಿಯ ಸಹೋದರ ಸಮಾನ ವ್ಯಕ್ತಿಯಿಂದ ಹಾಗೂ ಬಂಧುಗಳಿಂದ ವಿಶೇಷ ಸಹಕಾರ, ಪ್ರಯೋಜನವನ್ನು ಹೊಂದುವಿರಿ. ವರ್ಷದ ಉತ್ತರಾರ್ಧದಲ್ಲಿ ನವಮದ ರಾಹುವು ಕೆಲವೊಂದು ದರ್ಮಸಮ್ಮತವಲ್ಲದ ಕಾರ್ಯಗಳಿಗೆ ಪ್ರಚೋದಿಸುವನು. ಗುರು-ರಾಹು-ಕೇತುಗಳ ಪ್ರೀತ್ಯರ್ಥ ಯಥಾಶಕ್ತಿ ವಿಷ್ಣು-ಸುಬ್ರಹ್ಮಣ್ಯ-ಗಣಪತಿ ದೇವತಾರಾಧನೆ ನಡೆಸುವುದರಿಂದ ಶುಭ.
ಕೆಲಸಕಾರ್ಯಗಳು ನಿಮ್ಮ ಯೋಜನೆಯಂತೆ ನಡೆಯುವವು. ಆರ್ಥಿಕವಾಗಿ ಲಾಭವಿದೆ. ಅಧಿಕಾರಿವರ್ಗದವರಿಂದ ಪ್ರಯೋಜನವನ್ನು ಪಡೆಯುವಿರಿ. ಸಾಂಸಾರಿಕವಾಗಿ ತೃಪ್ತಿಯಿದೆ. ಮುಂದೆ ಜುಲಾಯಿ 16 ರವರೆಗೆ ಪ್ರತಿಕೂಲಫಲಗಳು ಅಧಿಕ. ಬೆಂಕಿ ಮತ್ತು ವಿದ್ಯುತ್ತುಗಳಲ್ಲಿ ವಿಶೇಷ ಜಾಗ್ರತೆ ವಹಿಸಿ. ಉದ್ಯೋಗ-ಗೃಹಕೃತ್ಯಗಳಲ್ಲಿ ತೊಂದರೆ, ಧನಹಾನಿ, ದೈಹಿಕ ಆಘಾತ ಉಂಟಾಗಬಹುದು. ಮುಂದೆ ಅಗೋಸ್ತು 13ರವರೆಗೆ ಔದ್ಯೋಗಿಕ-ಆರ್ಥಿಕ ಅಭಿವೃದ್ಧಿಯಿದೆ. ಸಾಂಸಾರಿಕವಾಗಿ ಉತ್ತಮ ಕೆಲಸಗಳಾಗಲಿವೆ. ಕಲಹ-ಶತ್ರುಕೃತ ದೋಷದಿಂದ ರಾಜೋಪದ್ರವ ಎದುರಾದೀತು. ಮಕ್ಕಳವಿಷಯದಲ್ಲಿ ಎಚ್ಚರಿಕೆಯಿರಲಿ. ಮನೆ ಮತ್ತು ವೃತ್ತಿಯಲ್ಲಿ ಕೆಲವೊಂದು ಸುಖ-ಸೌಕರ್ಯಗಳು ಪ್ರಾಪ್ತವಾಗುವವು. ಆರೋಗ್ಯ ಸುಧಾರಿಸುವುದು. ಮುಂದೆ ಒಕ್ಟೋಬರ 27 ರ ವರೆಗೆ ಗೃಹ-ವಾಹನಾದಿ ಸುಖಗಳಲ್ಲಿ ಕೊರತೆ, ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಕಾಣಿಸೀತು. ಮಕ್ಕಳಿಂದ ಮತ್ತು ಅಧೀನ ನೌಕರರಿಂದ ಅಡಚಣೆಗಳು ಎದುರಾದೀತು. ಮುಂದೆ ನವಂಬರ 6 ರ ವರೆಗೆ ಆರೋಗ್ಯದಲ್ಲಿ ಸುಧಾರಣೆ. ಶತ್ರುನಾಶ, ಗೃಹಸೌಕರ್ಯವೃದ್ಧಿ, ಬಂಧುಸಹಕಾರ ಸಿಗುವುದು. ಆತ್ಮಸ್ಥೆರ್ಯವೃದ್ಧಿ ಇತ್ಯಾದಿ ಪ್ರಾಪ್ತವಾಗುವವು. ಮಾರ್ಗ ಸಂಚಾರ, ಉದರಸಂಬಂಧ ಹಾಗೂ ಉಸಿರಾಟದ ತೊಂದರೆಗಳು, ಕೌಟುಂಬಿಕ ಕಿರಿಕಿರಿ, ಕಲಹ, ಆರ್ಥಿಕವಾಗಿ ಕಷ್ಟ-ನಷ್ಟಗಳು, ಕಾರ್ಯವಿಘ್ನ, ಶ್ರಮ ಇತ್ಯಾದಿಗಳಿದ್ದರೂ ವಿವಿಧ ಮೂಲಗಳಿಂದ ಧನಪ್ರಾಪ್ತಿಯಿದೆ. ಈ ಮಧ್ಯೆ ಕಾರ್ಯಗಳಿಗೆ ಇತರರಿಂದ ಕೆಲವೊಂದು ಅಡ್ಡಿಗಳು ಉಂಟಾಗುವುದು. ಮನಸ್ಸಿನ ನೆಮ್ಮದಿ ಕಡಿಮೆಯಾಗುವುದು. ಮಕ್ಕಳ ವಿಚಾರವಾಗಿ ಮನಸ್ಸಿಗೆ ಸಮಾಧಾನ ಕಡಿಮೆಯಾಗಬಹುದು. ಮುಂದೆ ವರ್ಷಾಂತ್ಯದ ವರೆಗೂ ಸಕಲ ಕಾರ್ಯಸಿದ್ದಿ, ಸ್ಥಾನಮಾನಾದ್ಯುತ್ಕರ್ಷೆ, ಜನಪ್ರಿಯತೆ, ಜನನಾಯಕತ್ವ, ಭೂಧನಾದಿ ಲಾಭ, ಆರೋಗ್ಯವೃದ್ಧಿ ಇತ್ಯಾದಿ ಪ್ರಾಪ್ತವಾಗುವವು.

ಮಿಥುನರಾಶಿ:-ಈ ವರ್ಷ ದ್ವಿತೀಯದ ಗುರುವು ಉತ್ತಮ ದೈವಬಲವೊದಗಿಸುವನು. ಉದ್ಯೋಗ ವ್ಯವಹಾರದಲ್ಲಿ ಕೆಲವು ಅನುಕೂಲ ಉಂಟಾಗುವುದು, ಸಾರ್ವಜನಿಕ ಸೇವಾಕಾರ್ಯಗಳಿಗೆ ಪ್ರಶಂಸೆ ಗಳಿಸುವಿರಿ. ಮಕ್ಕಳಿಗೂ ಅನುಕೂಲವುಂಟಾಗುವುದು, ವಿವಿಧಮೂಲಗಳಿಂದ ಧನಲಾಭ, ಸಾಂಸಾರಿಕ ಸುಖಸಂತೋಷಗಳು, ಪತಿಪತ್ನಿಯರಲ್ಲಿ ಹೆಚ್ಚಿನ ಅನ್ನೋನ್ಯತೆ. ವಾಕ್ಸಿದ್ವಿ, ಮನೆಯಲ್ಲಿ ಶುಭಶೋಭನಾದಿ ಮಂಗಲಕಾರ್ಯಗಳು ನಡೆಯುವವು. “ವರ್ಷಪೂರ್ತಿ ದಶಮದಲ್ಲಿಯೂ ರಾಹುವು ನವಮ-ಅಷ್ಟಮಗಳಲ್ಲಿಯೂ ವರ್ಷಮಧ್ಯದಲ್ಲಿ ಮೂರುತಿಂಗಳು ಗುರುವು ತೃತೀಯದಲ್ಲಿಯೂ ಗೋಚರಿಸುವರು. ವೃತ್ತಿ-ಉದ್ಯೋಗಗಳಲ್ಲಿ ಸ್ಪರ್ಧೆ-ಬದಲಾವಣೆ. ಆರ್ಥಿಕ ಅಡಚಣೆಗಳು, ವಾಸಸ್ಥಳ ಬದಲಾವಣೆ, ಕಾರ್ಯಗಳಿಗೆ ವಿಘ್ನಗಳೂ ತೊಂದರೆಗಳೂ ಎದುರಾಗುವವು. ಸಹೋದ್ಯೋಗಿಗಳಿಂದ ಉಪಟಳ ಸಂಭವ, ದುಡುಕಿನ ಕೆಲಸಗಳಿಂದ ವೈವಾಹಿಕ ಜೀವನಕ್ಕೆ ಅಡ್ಡಿಯಾಗಬಹುದು. ವಿದ್ಯೆಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಪ್ರತಿಕೂಲ ಫಲ, ವಿಷಭಯ, ಅಪಘಾತಭಯ, ಹಿರಿಯರ ವಿಯೋಗ, ಧರ್ಮಸಮ್ಮತವಲ್ಲದ ಕೃತ್ಯಗಳಲ್ಲಿ ಆಸಕ್ತಿ, ಇತ್ಯಾದಿ ಸಂಭವ, ಸುಬ್ರಹ್ಮಣ್ಯ ಆರಾಧನೆ, ಮಹಾವಿಷ್ಣು ಕ್ಷೇತ್ರದಲ್ಲಿ ಜನ್ಮನಕ್ಷತ್ರದಿನಗಳಲ್ಲಿ ವಿಶೇಷ ಸೇವೆಗಳನ್ನು ನಡೆಸುತ್ತಾ ಬರುವುದು ಹಾಗೂ ಅನಾಥರಿಗೆ ಅಕ್ಕಿದಾನೆ ಮಾಡುವುದು ಉತ್ತಮ.
 ವ್ಯವಹಾರದಲ್ಲಿ ಹೆಚ್ಚಿನ ಅನುಕೂಲ, ಸಕಲ ಕಾರ್ಯಸಿದ್ದಿ, ಧನಾಭಿವೃದ್ಧಿ, ಸ್ಥಾನಮಾನಾದ್ಯುತ್ಕರ್ಷೆ ಪ್ರಾಪ್ತವಾಗುವವು.  ಜೂನ್ 20 ರವರೆಗೂ ಭೂಸಂಬಂಧವಾದ ವ್ಯವಹಾರಗಳಲ್ಲಿ ಅನುಕೂಲ, ಉತ್ತಮ ಸ್ಥಾನಮಾನಾದಿ ಪ್ರಾಪ್ತಿ, ಉತ್ಸಾಹ ಹಾಗೂ ಸಂತೋಷವು ಅಧಿಕಗೊಳ್ಳುವುದು. ಭೂಧನಾದಿ ಲಾಭ, ಆರೋಗ್ಯವೃದ್ಧಿ. ಮುಂದೆ ಅಗೋಸ್ತು 18 ರ ವರೆಗೆ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ಮನಸ್ಸಿಗೆ ನೆಮ್ಮದಿ ಕಡಿಮೆ, ಅಸಹನೆ ಹೆಚ್ಚುವುದು, ಕಾರ್ಯಗಳಿಗೆ ತಡೆ, ದೈಹಿಕ ಏಪದಾಪತ್ತುಗಳ ಸಂಭವ, ಹಣದ ಮುಗ್ಗಟ್ಟು ಕಾಣಬಹುದು. ಕೆಟ್ಟಜನರ ಸಂಸರ್ಗದಿಂದ ಅಶುಭಫಲ, ಸ್ಥಾನಭ್ರಂಶ, ಬಂಧುದುಃಖ, ಇತ್ಯಾದಿ ಸಂಭವ. ಮುಂದೆ ಸಪ್ಟೆಂಬರ 27 ರವರೆಗೆ ಶಾರೀರಿಕವಾಗಿ ಬಲಗೊಳ್ಳುವಿರಿ. ಗೃಹಸೌಕರ್ಯಗಳನ್ನು ಹೊಂದುವಿರಿ. ಆರೋಗ್ಯ ಸುಧಾರಣೆ, ಔದ್ಯೋಗಿಕ-ಆರ್ಥಿಕ ಅಭಿವೃದ್ಧಿಯಿದೆ. ಸಾಂಸಾರಿಕವಾಗಿಯೂ ಉತ್ತಮ ಕೆಲಸಗಳಾಗಲಿವೆ. ಮುಂದೆ ನವಂಬರ 16 ರವರೆಗೆ ಗೃಹವಾಹನಾದಿ ಸುಖಗಳಿಗೆ ಹಾನಿ, ಅಧೀನ ನೌಕರರಿಂದ ಅಡಚಣೆಗಳು. ಮುಂದೆ ದಶಂಬರ  ರವರೆಗೆ ಆತ್ಮಸ್ಥೆರ್ಯ ವೃದ್ಧಿ, ರೋಗನಿವೃತ್ತಿ, ಶತ್ರುನಾಶ, ಶೋಕಪರಿಹಾರ ಇತ್ಯಾದಿ ಪ್ರಾಪ್ತವಾಗುವವು. ಭೂಸಂಬಂಧವಾದ ವ್ಯವಹಾರಗಳು ಸುಲಭವಾಗಿ ನಡೆಯಬಹುದು. ಉತ್ತಮ ಸ್ಥಾನಮಾನ ದೊರಕುವುದು. ಸಹೋದರ ಸಮಾನರಿಂದ ಅಲ್ಪ ಅಸಮಾಧಾನ ತೋರಬಹುದು. ಗೃಹಸೌಕರ್ಯಪ್ರಾಪ್ತಿ, ಸಾಂಸಾರಿಕ-ಔದ್ಯೋಗಿಕ-ಆರ್ಥಿಕ ಅಭಿವೃದ್ಧಿಯಿದೆ. ಕಾರ್ಯಜಯ ಇತ್ಯಾದಿ ಫಲಗಳನ್ನು  ಕಾಣಬಹುದು ದಾಂಪತ್ಯದಲ್ಲಿ ವಿರಸ, ಕಲಹ, ರಾಜಭಯ, ದೇಹಾರೋಗ್ಯದಲ್ಲಿ ಏರುಪೇರು, ಆರ್ಥಿಕ ಸಂಕಷ್ಟ, ಖಿನ್ನತೆ, ಅಪಘಾತ-ದೈಹಿಕ ವಿಪದಾಪತ್ತುಗಳ ಸಂಭವ. ಮುಂದೆ ವರ್ಷಾಂತ್ಯದ ವರೆಗೂ ಮೇಲಿನ ಫಲಗಳೇ ಫಲಗಳೇ ಹೆಚ್ಚಾಗಿ ಅನುಭವಕ್ಕೆ ಬರುವವು. ಅಡಚಣೆಗಳ ನೆಡುವೆಯೂ ಕೌಟುಂಬಿಕವಾಗಿ, ಔದ್ಯೋಗಿಕವಾಗಿ ಅಭಿವೃದ್ಧಿಯಿದೆ.

ಕರ್ಕಟರಾಶಿ:-ಗುರುವು ಜನ್ಮ-ದ್ವಿತೀಯಗಳಲ್ಲೂ ಶನಿಯು ನವಮದಲ್ಲೂ, ರಾಹುವು
ಸಪ್ತಮಾಷ್ಟಮಗಳಲ್ಲೂ ಸಂಚರಿಸುವರಾಗಿ ಗುಣದೋಷಗಳಿಂದ ಕೂಡಿದ ಮಿಶ್ರಫಲಗಳನ್ನನುಭವಿಸುವಿರಿ. 'ಸ್ಥಾನಭ್ರಂಶಧನಕ್ಷಯೌಕಲಹಧೀಜಾಡ್ಯಗುರೌಜನ್ಮಗೇ' ಎಂಬಂತೆ ಧನವ್ಯಯ ಉಂಟಾಗಬಹುದು. ಸ್ಥಾನಮಾನಗಳಿಗೆ ಹಾನಿ, ಬುದ್ದಿಯ ಅಸ್ಥಿರತೆ, ಕಲಹ ಇತ್ಯಾದಿಗಳೊಂದಿಗೆ ಪರಸ್ಥಳ ಸಂಚಾರಾದಿ ಫಲಗಳೂ ಉಂಟಾಗುವುದು. ನವಮದ ಶನಿಯಿಂದ ಮನೆಸ್ಸಿಗೆ ನೆಮ್ಮದಿ ಕಡಿಮೆಯಾಗುವುದು. ಮಾನಸಿಕ ಅಶಾಂತಿ, ಶತ್ರುಪೀಡೆ, ಸ್ತ್ರೀಸುಖಗೃಹಸುಖಾದಿ ಹಾನಿ, ರೋಗಭಯ ಇತ್ಯಾದಿ ಕಾಣಿಸುವದು. ಶರೀರ ಹಾಗೂ ಮನಸ್ಸಿಗೆ ಬಗ್ಗೆ ಜಾಗ್ರತೆ ವಹಿಸಬೇಕು.  ಅನ್ಯರಿಂದ ಮನಕೇಶ ತೊಂದರೆಗಳು, ಗುಹ್ಯವ್ಯಾಧಿಯ ಬಗ್ಗೆ ವಾಹನ, ವಿದ್ಯುತ್ತಿನ ಉಪಕರಣಗಳಲ್ಲಿ ಎಚ್ಚರಿಕೆ ವಹಿಸಬೇಕು. ಆರ್ಥಿಕ ಸಂಕಷ್ಟ, ಮಿಥ್ಯಾಪವಾದ ಎದುರಾಗುವದು. ಪತ್ನಿಯ ಆರೋಗ್ಯದಲ್ಲೂ ವ್ಯತ್ಯಯ ತೋರುವುದು. ರಾತ್ರಿ ಸಂಚಾರ ಉತ್ತಮವಲ್ಲ. ನವಂಬರ 1 ರನಂತರ ಮೂರು ತಿಂಗಳು ದೈವಬಲವೊದಗಿ ಉದ್ಯೋಗ ವ್ಯವಹಾರದಲ್ಲಿ ಕೆಲವು ಅನುಕೂಲ ಉಂಟಾಗುವುದು. ಮಕ್ಕಳಿಗೂ ಅನುಕೂಲವುಂಟಾಗುವುದು. ಆದಾಯವು ಹೆಚ್ಚುವುದು. ಶುಭಶೋಭನಾದಿ ಮಂಗಲಕಾರ್ಯಗಳು, ಕುಟುಂಬಾಭಿವೃದ್ಧಿ ನಡೆಯುವವು. ಗುರು-ಶನಿ-ರಾಹು ಪ್ರೀತ್ಯರ್ಥ ಯಥಾಶಕ್ತಿ ದೇವತಾರಾಧನೆ ನಡೆಸುವುದರಿಂದೆ ಶುಭ.
ಆಪತ್ತು, ರೋಗಪೀಡೆ, ಕಾರ್ಯವಿಘ್ನ, ಹಣದ ವ್ಯವಹಾರದಲ್ಲಿ ವಿರೋಧ ಫಲ ಕಾಣಿಸೀತು. ಮುಂದೆ ಜೂನ್ 15 ರವರೆಗೆ ಸಕಲ ಕಾರ್ಯಸಿದ್ದಿ, ಸ್ಥಾನಮಾನಾದ್ಭುತ್ಕರ್ಷ, ಭೂಲಾಭ, ಆರೋಗ್ಯವೃದ್ಧಿ, ವಿವಿಧಮೂಲಗಳಿಂದ ಧನಪ್ರಾಪ್ತಿ ಇತ್ಯಾದಿ ಉತ್ತಮ ಫಲಗಳೆರುತ್ತವೆ. ಮುಂದೆ ಅಗೋಸ್ತು  ವರೆಗೂ ಈ ಶುಭಫಲಗಳೇ ಇದು ಇತರರಿಂದಲೂ ಅನುಕೂಲಗಳು ಉಂಟಾಗುವುದು. ಭೂಸಂಬಂಧವಾದ ವ್ಯವಹಾರಗಳು ಸುಲಭವಾಗಿ ನಡೆಯಬಹುದು. ಉತ್ತಮ ಸ್ಥಾನಮಾನಾದಿಗಳು ದೊರಕುವುದು. ಈ ಮಧ್ಯೆ ಕೆಲವೊಂದು ಕಾರ್ಯವೈಫಲ್ಯ, ಬಂಧುವಿರೋಧ, ಜ್ವರರೋಗಾದಿಗಳು, ದೇಹಾಯಾಸ, ಕೋಪವೃದ್ಧಿ, ಧನಹಾನಿ, ದೈಹಿಕ ಆಘಾತ, ಸ್ವಜನವಿರಹ, ಉಷ್ಣಪ್ರಕೋಪ ಇತ್ಯಾದಿಗಳು ಸಪ್ಟಂಬರ 17 ರವರೆಗೂ ಕಾಣಿಸಿಕೊಳ್ಳಬಹುದು. ಕಾಣಿಸಿಕೊಳ್ಳಬಹುದು. ಮುಂದೆ ಒಕ್ಟೋಬರ 17 ರವರೆಗೆ ಸ್ಥಾನಪ್ರಾಪ್ತಿ, ಗೃಹಲಾಭ, ಧನಲಾಭ, ಸಂತೋಷ, ಶತ್ರುನಾಶ ಇತ್ಯಾದಿ ಪ್ರಾಪ್ತವಾಗುವವು. ಮುಂದೆ ದಶಂಬರ  ರವರೆಗೆ ಕೌಟುಂಬಿಕ ಸಾಮರಸ್ಯದ ಕೊರತೆ ಕಾಣಿಸೀತು. ಮಕ್ಕಳಿಂದ ಮತ್ತು ಅಧೀನ ನೌಕರರಿಂದ ಅಡಚಣೆಗಳು ಎದುರಾದೀತು. ಮಕ್ಕಳಿಂದ ಶುಭಫಲವೂ ಇದೆ. ಆರೋಗ್ಯವು ವೃದ್ಧಿಸುವುದು.  ಆರೋಗ್ಯ ಸುಧಾರಿಸುವುದು. ಗೃಹಸೌಕರ್ಯಗಳು ಉಂಟಾಗುವವು. ಬಂಧುವೊಬ್ಬರಿಂದ ಸಹಕಾರ ಸಿಗುವುದು. ಆತ್ಮಸ್ಥೆರ್ಯ ವೃದ್ಧಿಸುವುದು. ಮುಂದೆ ವರ್ಷಾಂತ್ಯದ ವರೆಗೂ ಕಷ್ಟನಷ್ಟಗಳು ಅಧಿಕ. ಕೆಟ್ಟಜನರ ಸಂಸರ್ಗದಿಂದ ಅಶುಭಫಲ, ಭೂಗೃಹಾದಿ ವ್ಯವಹಾರಗಳಲ್ಲಿ ಹಾನಿ, ಉದರರೋಗ, ಉಬ್ಬಸ, ಉಸಿರಾಟದ ತೊಂದರೆಗಳು ಇತ್ಯಾದಿ ಪ್ರಾಪ್ತವಾಗುವವು.

 
ಸಿಂಹರಾಶಿ:- ವ್ಯಯಸ್ಥಾನ-ಜನ್ಮರಾಶಿಗಳ ಗುರು ಮತ್ತು ಅಷ್ಟಮದ ಶನಿಯಿಂದಾಗಿ ಈ ವರ್ಷ ದೈವಬಲವಿಲ್ಲ. ಕುಟುಂಬದಲ್ಲಿ ದುಃಖಕರ ಪ್ರಸಂಗಗಳನ್ನು ಎದುರಿಸಬೇಕಾಗುವುದು. ಸ್ವಲ್ಪ ಮಟ್ಟಿನ ಮನಸ್ತಾಪಗಳೂ ತೋರುವುದು. ಆರೋಗ್ಯಕ್ಕೂ ಉತ್ತಮವಲ್ಲ. ವಾಹನಾದಿಗಳಿಂದ
ತೊಂದರೆಗಳುಂಟಾಗುವ ಸಂದರ್ಭವಿರುವುದರಿಂದ ಜಾಗ್ರತೆ ವಹಿಸಬೇಕು. ಕೃಷಿಕಾರ್ಯಗಳಲ್ಲಿ ಸ ನಷವನ್ನು ವಿಘ್ನಗಳನ್ನೂ ನೀವು ಅನುಭವಿಸುವಿರಿ. ನಿಮ್ಮಿಂದ ಕೆಳಮಟ್ಟದ ಜನರಿಂದ ತೊಂದರೆಗಳಿಗೊಳಗಾಗುವಿರಿ. ಕುಲದ ಉತಮ ಆಚರಣೆಗಳಿಂದ ಹಿಂದೆಬರುವ ಸಾಧ್ಯತೆ ಇದೆ ಕೌಟುಂಬಿಕ ಸುಖಗಳು ಕಡಿಮೆಯಾಗುವುದು. ಯಾವುದೇ ಕಾರ್ಯಗಳನ್ನು ಮಾಡುವುದಾದರೂ  ಸಂಪತ್ತಿನ ನಷ್ಟ, ಕಾರ್ಯಗಳಿಗೆ ವಿಘ್ನ. ಅನಿರೀಕಿತ ಕಷಗಳು ಉಂಟಾಗುವ ಕಾಲವಾಗಿರುತ್ತದೆ. ಬಹಳ ಜಾಗ್ರತೆ ವಹಿಸಬೇಕು. ಉದ್ಯೋಗದಲ್ಲಿ ಬದಲಾವಣೆ. ಸೀ ವ್ಯವಹಾರ ಹಾ ಹಾಗೂ ಸಂಬಂಧಗಳಲ್ಲಿ ಸ್ಥಿರತೆ ಕೈಗೊಳ್ಳಲು ಬಂಧುಮಿತ್ರರಿಂದ ಒತ್ತಡ ಸ್ತ್ರೀ ಸಂಬಂಧವಾಗಿ ತೊಂದರೆಗಳು ಎದುರಿಸಬೇಕಾಗುವುದು. ಅನಗತ್ಯ ಖರ್ಚುವೆಚ್ಚಗಳೆದುರಾಗುವವು. ಕುಟುಂಬವರ್ಗದವರಿಂದ ದೂರವಿರಬೇಕಾದೀತು. ಸ್ಥಾನಮಾನಗಳಿಗೆ ಹಾನಿ, ಬುದ್ಧಿಯ ಅಸ್ಥಿರತೆ, ಕಲಹ ಪರಸ್ಥಳ ಸಂಚಾರಾದಿ ಫಲಗಳೂ ಉಂಟಾಗುವುದು. ಗುರು-ಶನಿ-ರಾಹು-ಕೇತುಗಳ ಪ್ರೀತ್ಯರ್ಥ ಯಥಾಶಕ್ತಿ ದೇವತಾರಾಧನೆಯಿಂದ ಶುಭ.
ಸಂತಾನಸಂಬಂಧ ದುಃಖ, ಅಸಹನೆ, ದುರಾಸೆಗೆ ಬಲಿಯಾಗುವಿರಿ, ರೋಗಪೀಡೆ,  ಸ್ಥಾನಮಾನಾದಿ ಹಾನಿ, ಧನಹಾನಿ, ಅಶುಭಗಳ ಅನುಭವ,  ಇತರರೊಂದಿಗೆ ಮನಸ್ತಾಪಗಳು ಉಂಟಾಗುವುದು. ಮುಂದೆ ಜುಲಾಯಿ 16 ರವರೆಗೆ ಸಕಲ ಗೃಹಸುಖಾದಿಗಳು, ಕೆಲವೊಮ್ಮೆ ಕಾರ್ಯವಿಘ್ನ, ಶ್ರಮ, ಆದರೂ ವಿವಿಧಮೂಲಗಳಿಂದ ಧನಪ್ರಾಪ್ತಿಯಿದೆ. ಮುಂದೆ ಸಪ್ಟೆಂಬರ 18 ರವರೆಗೂ ಇಚ್ಛಿತ ಕಾರ್ಯಗಳು ನಡೆಯುವುದಲ್ಲದೆ ಇತರರಿಂದಲೂ ಅನುಕೂಲಗಳು ಉಂಟಾಗುವುದು. ಭೂಸೆಂಬಂಧವಾದ ವ್ಯವಹಾರಗಳು ಆಗೆ ಸುಲಭವಾಗಿ ನಡೆಯಬಹುದು. ಉತ್ತಮ ತಮ ಸ್ಥಾನಮಾನಾದಿಗಳು ದೊರಕುವುದು. ಉತ್ಸಾಹ ಹಾಗೂ ಸಂತೋಷವು ಅಧಿಕಗೊಳ್ಳುವುದು.  ಒಕ್ಟೋಬರ 17 ರವರೆಗೆ ದೇಹಾಯಾಸ, ದುಃಖ, ಅಹಂಕಾರದಿಂದ ನಾನಾ ಅನರ್ಥಗಳು ಎದುರಾಗುವವು. ಮುಂದೆ ನವಂಬರ 16 ರವರೆಗೆ ದೇಹಕೃತಿ, ಪಿತ್ತೋಷ್ಣಪ್ರಕೋಪ, ರಕ್ತದೋಷ ಇತ್ಯಾದಿಗಳೊಂದಿಗೆ ಸ್ಥಾನಪ್ರಾಪ್ತಿ, ಗೃಹಲಾಭ, ಧನಲಾಭ, ಶತ್ರುನಾಶ ಇತ್ಯಾದಿ ಪ್ರಾಪ್ತವಾಗುವವು. ಮುಂದೆ  ಗೃಹಸುಖಹಾನಿ, ಮಕ್ಕಳ ಕುರಿತು ಚಿಂತೆ, ದೈಹಿಕ ಅನಾರೋಗ್ಯ, ಧನಹಾನಿ, ಕಲಹ, ಮಿಥ್ಯಾಪವಾದ ಇತ್ಯಾದಿಗಳಿರುತ್ತವೆ.  ರೋಗನಿವೃತ್ತಿ, ಶತ್ರುನಾಶ, ಶೋಕಪರಿಹಾರ, ಮಕ್ಕಳಿಂದ ಶುಭಫಲ, ಧನಸುವರ್ಣಾದಿಲಾಭ, ಆತ್ಮಸ್ಥೆರ್ಯ ವೃದ್ಧಿಸುವುದು. ಈ ಮಧ್ಯೆ ಶರೀರಕ್ಕೆ ಗಾಯಗಳು ಉಂಟಾಗಬಹುದು. ದೈಹಿಕ ಆಘಾತ, ಮನೋದುಃಖ, ಸ್ವಜನವಿರಹ, ರಕ್ತವ್ಯಾಧಿ, ಉಷ್ಣಪ್ರಕೋಪ, ಕೆಲಸಕಾರ್ಯಗಳಲ್ಲಿ ನಿಧಾನಗತಿಯೂ ಕೆಲವೊಂದು ಅಪಜಯಗಳೂ ಉಂಟಾಗಬಹುದಾದರೂ ದೀರ್ಘಕಾಲಕ್ಕೆ ಈ ತೊಂದರೆಗಳು ಇರಲಾರದು. ಮುಂದೆ ವರ್ಷಾಂತ್ಯದವರೆಗೆ ಗೃಹಸುಖಹಾನಿ, ಕೃಷಿಭೂಮ್ಯಾದಿ ನಷ್ಟ, ಗುರುಹಿರಿಯರ ವಿಯೋಗ, ಅಪಘಾತಭಯ ಉಂಟಾದೀತು. ಸಹೋದರರಿಂದ ಅನುಕೂಲವಿದೆ.

ಕನ್ಯಾರಾಶಿ:-ಲಾಭಸ್ಥಾನದ ಗುರುವು ದೈವಬಲವೊದಗಿಸುವನು. ರಾಹುಕೇತುಗಳೂ ಅನುಕೂಲರು. ಎಲ್ಲ ರೀತಿಯಲ್ಲಿ ಅನುಕೂಲಗಳು ಉಂಟಾಗುವುದು. ಗ್ರಹಿಸಿದ ಕೆಲವು ಕಾರ್ಯಗಳನ್ನು ಪ್ರಯತ್ನಿಸಿದಲ್ಲಿ ಸಿದ್ದಿಸುವುದು. ಕುಟುಂಬದಲ್ಲಿ ಹೊಸಬರ ಆಗಮನದ ಸಾಧ್ಯತೆಯಿದೆ. ಆರ್ಥಿಕವಾಗಿಯೂ ಅಭಿವೃದ್ಧಿಯು ಉಂಟಾಗುವುದು. ಉನ್ನತ ಸ್ಥಾನಮಾನಗಳು ಸಿಗುವ ಸಾಧ್ಯತೆಯಿದೆ. ಗೃಹದಲ್ಲಿ ಶುಭಸಮಾರಂಭಗಳು ನಡೆಯುವುದು. ವಿವಿಧಮೂಲಗಳಿಂದ ಧನಪ್ರಾಪ್ತಿಯಿದೆ. ಕೆಲಸಕಾರ್ಯಗಳಲ್ಲಿ  ಮೊದಲಿಗಿಂತ ದಲಿಗಿಂತ ಅಧಿಕ ಉತ್ಸಾಹಿಯಾಗಿರುವಿರಿ. ಸರಿಯಾದ ಸಮ ಆರೋಗ್ಯವೂ ಸಿದ್ಧಿಸುವುದು. ವ್ಯವಹಾರದಲ್ಲಿ ಪುದು. ವ್ಯವಹಾರದಲ್ಲಿ ಜಯಸಿಗುವುದು. ಕೌಟುಂಬಿಕ ಸುಖವನ್ನು ಅನುಭವಿಸುವಿರಿ. ವರ್ಷದ ಉತ್ತರಾರ್ಧದಲ್ಲಿ ರ್ಷದ ಉತ್ತರಾರ್ಧದಲ್ಲಿ ಮೂರು ತಿಂಗಳು ಗುರುವು ವ್ಯಯಸ್ಥಾನದಲ್ಲೂ ವರ್ಷವಿಡೀ ಶನಿಯು ಸಪ್ತಮದಲ್ಲಿಯೂ ಇದ್ದು ದೇಹಾರೋಗ್ಯದಲ್ಲಿ ಅಲ್ಪ ತೊಂದರೆಗಳು ತೋರಬಹುದು. ಪತ್ನಿಗೆ ಈ ಕಾಲವು ಅನುಕೂಲಕರವಲ್ಲ. ಗ್ರಹಿಸಿದೆ ಕೆಲವೊಂದು ಕಾರ್ಯಗಳು ಸಮಯಕ್ಕೆ ನಡೆಯದು. ಹೊಟ್ಟೆಯಿಂದ ಕೆಳಭಾಗದಲ್ಲಿ ಅನಾರೋಗ್ಯ ಕಾಣಿಸಿಕೊಳ್ಳಬಹುದು. ಈ ಸಮಯದಲ್ಲಿ ದೂರ ಸ್ಥಳವನ್ನು ಸಂದರ್ಶಿಸುವ ಸಂದರ್ಭಗಳು ಉಂಟಾಗುವುದು. ಉದ್ಯೋಗದಲ್ಲಿ ಬದಲಾವಣೆ, ಸೀ ಸಂಬಂಧವಾಗಿ ತೊಂದರೆಗಳು, ವ್ಯವಹಾರ ಹಾಗೂ ಸಂಬಂಧಗಳಲ್ಲಿ ಅಸ್ಥಿರತೆ, ಆರ್ಥಿಕ ಅಡಚಣೆ, ಚಿಂತೆ ಎದುರಾದೀತು ಆಂಜನೇಯನಿಗೆ ಪವಮಾನಸೇವೆ, ವಿಷ್ಣುಸೇವೆ, ಗಣಪತಿಸೇವೆ, ಸುಬ್ರಹ್ಮಣ್ಯ ಕ್ಷೇತ್ರದರ್ಶನ ನಡೆಸುವುದರಿಂದ ಶುಭ. ದೈಹಿಕ ಆಘಾತ, ಪಿತ್ತ ಅಥವಾ ಉಷ್ಣಸಂಬಂಧೀ ತೊಂದರೆಗಳು, ವೃತ್ತಿಯಲ್ಲಿ ಅಥವಾ ವಾಸಸ್ಥಳದಲ್ಲಿ ಬದಲಾವಣೆ ಕಂಡುಬರುವುದು. ಉದ್ಯೋಗವ್ಯವಹಾರದಲ್ಲಿ ಕೆಲವು ಅನುಕೂಲಗಳು ಅನುಭವಕ್ಕೆ ಬರುವುದು. ಮುಂದೆ ಅಗೋಸ್ತು 17 -ರವರೆಗೆ ಔದ್ಯೋಗಿಕವಾಗಿಯೂ ಆರ್ಥಿಕವಾಗಿಯೂ ಅಭಿವೃದ್ಧಿಯಿದೆ. ಸಾಂಸಾರಿಕವಾಗಿಯೂ ಉತ್ತಮ ಕೆಲಸಗಳಾಗಲಿವೆ. ಮುಂದೆ ಸಪ್ಟೆಂಬರ  ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ, ಮನಸ್ಸಿಗೆ ಕಿರಿಕಿರಿ, ಮಕ್ಕಳಿಂದ ಮತ್ತು ಅಧೀನ ನೌಕರರಿಂದ ಅಡಚಣೆಗಳು ಎದುರಾದೀತು. ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು. ಇತರರಿಂದ ಸಹಕಾರವನ್ನು ಪಡೆಯುವಿರಿ. ವ್ಯವಹಾರಗಳು ಉತ್ತಮಗೊಳ್ಳುವುದು. ಕೆಟ್ಟಜನರ ಸಂಸರ್ಗದಿಂದ ಕಷ್ಟನಷ್ಟಗಳಿವೆ. ಈ ಮಧ್ಯೆ ಅಗೋಸ್ತು 2 ರಿಂದ ಕೆಲವೊಂದು ಶುಭಫಲಗಳಿದ್ದು ಮನದಲ್ಲಿರುವ ಕಾರ್ಯಗಳು ನಡೆಯುವುದಲ್ಲದೆ ಇತರರಿಂದಲೂ ಅನುಕೂಲಗಳು ಉಂಟಾಗುವುದು. ಭೂಸಂಬಂಧವಾದ ವ್ಯವಹಾರಗಳು ಸುಲಭವಾಗಿ ನಡೆಯಬಹುದು. ಉತ್ತಮ ಸ್ಥಾನಮಾನಾದಿಗಳು ದೊರಕುವುದು. ಮುಂದೆ ನವಂಭರ  ರವರೆಗೆ ಪಿತ್ತ ಅಥವಾ ಉಷ್ಣಸಂಬಂಧೀ ತೊಂದರೆಗಳು ಕಂಡುಬರುವುದು. ಲೋಹ, ಬೆಂಕಿಯಲ್ಲಿ ಜಾಗ್ರತೆ ವಹಿಸಬೇಕು. ಮುಂದೆ ದಶಂಬರ  ರವರೆಗೆ ಆರೋಗ್ಯ ಅಪಘಾತಾದಿಗಳ ಬಗ್ಗೆ ಎಚ್ಚರ ಅಗತ್ಯ. ಔದ್ಯೋಗಿಕ-ಆರ್ಥಿಕ ಪ್ರಗತಿ, ಸ್ಥಾನಪ್ರಾಪ್ತಿ, ಗೃಹಲಾಭ, ಇತ್ಯಾದಿ ಪ್ರಾಪ್ತವಾಗುವವು.  ಕಲಹದಿಂದ-ಶತ್ರುಕೃತ ದೋಷದಿಂದ ರಾಜೋಪದ್ರವ, ಭಯ, ವಾಗೋಷ, ಧನಹಾನಿ ಇತ್ಯಾದಿಗಳಿರುತ್ತವೆ. ಮುಂದೆ ವರ್ಷಾಂತ್ಯದವರೆಗೂ ರೋಗನಿವೃತ್ತಿ, ಬಂಧುಸಹಾಯ, ಅದಾಯವೃದ್ಧಿ ಇತ್ಯಾದಿ ಶುಭಫಲಗಳಿದ್ದರೂ, ಕೊನೆಯ ಅವಧಿಯಲ್ಲಿ ಅನಾರೋಗ್ಯ, ದೈಹಿಕ ವಿಪದಾಪತ್ತುಗಳ ಸಂಭವವಿದೆ.

 
ತುಲಾರಾಶಿ:- ಈ ವರ್ಷ ದೈವಬಲ ಕಡಿಮೆ. ಜನ್ಮರಾಶಿಯಿಂದ ದಶಮದ ಗುರು, ಚತುರ್ಥ-ಪಂಚಮಗಳ ರಾಹು. ಆರ್ಥಿಕವಾಗಿಯೂ ವ್ಯಾವಹಾರಿಕವಾಗಿಯೂ ಕಷ್ಟನಷ್ಟಗಳು ಅಧಿಕ. ಸ್ಥಾನಮಾನಾದಿ ಹಾನಿ, ಧನಹಾನಿ, ಅಶುಭಗಳ ಅನುಭವ, ಸಂತಾನ ಸಂಬಂಧ ದುಃಖ, ಮಾತಿನಲ್ಲಿ ಹಾಗೂ ಚಟುವಟಿಕೆಯಲ್ಲಿ ವ್ಯತ್ಯಾಸಗಳು ತೋರುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ
ವಿಶೇಷ ಪ್ರಯತ್ನ ಅಗತ್ಯ ಭೂಮಿ ಗೃಹ ವಾಹನಾದಿ ವ್ಯವಹಾರಗಳಲ್ಲಿ ಪ್ರತಿಕೂಲಫಲ. ಕುಟುಂಬದ ಹಿರಿಯ ವ್ಯಕ್ತಿಗಳ ಕುರಿತು ವಿಶೇಷ ಎಚ್ಚರಿಕೆ ಅಗತ್ಯ ಋಣಾತ್ಮಕ ಭಾವನೆ ಹಾಗೂ ಚಿಂತೆಗಳು ಉಂಟಾಗುವುದು. ಪುಣ್ಯಕಾರ್ಯಗಳಲ್ಲಿ ವಿಘ್ನಗಳು ತೋರುವುದು. ಕಾರ್ಯವಿಘ್ನ, ಮನಸ್ಸಿಗೆ ಅಶಾಂತಿ ಹಾಗೂ ಜಾಡ್ಯತೆ ಉಂಟಾಗುವುದು. ಷಷ್ಯದ ಶನಿ, ಲಾಭಸ್ಥಾನದ ಕೇತು, ವರ್ಷದ ಉತ್ತರಾರ್ಧದಲ್ಲಿ ಮೂರು ತಿಂಗಳು ಲಾಭಸ್ಥಾನದ ಗುರುವೂ ಕೆಲವೊಂದು ಅನುಕೂಲಗಳನ್ನು ಉಂಟಮಾಡುವರು. ಕೌಟುಂಬಿಕ ಸುಖ ಅನುಭವಿಸುವಿರಿ. ಕಾರ್ಯಗಳು ಪ್ರಗತಿಯನ್ನು ಹೊಂದುವುದು. ವಿರೋಧಿಗಳನ್ನು ಸಮರ್ಥವಾಗಿ ಎದುರಿಸುವಿರಿ. ಮಕ್ಕಳಿಂದ ಹಾಗೂ ಕೆಲಸಗಾರರಿಂದ ಅನುಕೂಲ ಹಾಗೂ ಲಾಭ ಹೊಂದುವಿರಿ. ಸ್ಥಾನಮಾನಾದಿ ಪ್ರಾಪ್ತಿ, ಸಂತಾನಪ್ರಾಪ್ತಿ, ವಿವಿಧಮೂಲಗಳಿಂದ ಧನಪ್ರಾಪ್ತಿ, ಆರ್ಥಿಕವಾಗಿಯೂ ಉತ್ತಮ ಪ್ರಗತಿಯಾಗುವುದು. ವಿಷ್ಣುಸೇವೆ, ಸುಬ್ರಹ್ಮಣ್ಯಸೇವೆ ಯಥಾಶಕ್ತಿ ನಡೆಸುವುದರಿಂದ ಶುಭ.
 ಕಾರ್ಯಸಿದ್ದಿ, ಶಾರೀರಿಕ ಆರೋಗ್ಯವು ಈ ಸಮಯದಲ್ಲಿ ಸುಧಾರಿಸುವುದು. ಮನೆಯಲ್ಲಿ ಸೌಕರ್ಯಗಳು ಉಂಟಾಗುವುದು, ಶತ್ರುಭಯ ಕಲಹಾದಿಗಳಿಂದ ಮುಕ್ತಿ, ಆತ್ಮಸ್ಥೆರ್ಯ ಆತ್ಮಸ್ಥೆರ್ಯ ವೃದ್ಧಿಸುವುದು. ಮುಂದೆ ಜುಲಾಯಿ 16 ರವರೆಗಿನ ಎರಡು ತಿಂಗಳು ಕಷ್ಟ ಕ್ಷೇಶಗಳು ಬಹುತರವಾಗಿ ಕಾಣಿಸಿಕೊಳ್ಳುವವು. ಸ್ವಜನ ವಿರೋಧ, ಅಧಿಕಾರಿ ವರ್ಗದವರ ಪೀಡೆ, ಹಿರಿಯರಲ್ಲಿ ಮನಸ್ತಾಪ, ಧರ್ಮಬಾಹಿರ ಕಾರ್ಯಗಳಲ್ಲಿ ಆಸಕ್ತಿ ಇತ್ಯಾದಿ ಉಂಟಾಗುವವು. ಕೌಟುಂಬಿಕವಾಗಿಯೂ ಕಹಿ ಅನುಭವಗಳು, ದೈಹಿಕ ವಿಪದಾಪತ್ರುಗಳ ಸಂಭವವಿದೆ. ಮುಂದೆ ನವಂಬರ  ರವರೆಗೆ ವ್ಯವಹಾರಗಳಲ್ಲಿ ಜಯಲಾಭಗಳು, ಕಾರ್ಯಸಿದ್ದಿ, ಇಷ್ಟವಸ್ತುಪ್ರಾಪ್ತಿ, ಸ್ಥಾನಮಾನಾದ್ಯುತ್ಕರ್ಷೆ, ವಿವಿಧ ಮೂಲಗಳಿಂದ ಧನ ಪ್ರಾಪ್ತಿ, ಆರೋಗ್ಯವೃದ್ಧಿ. ಭೂವ್ಯವಹಾರಗಳಲ್ಲಿ ಜಯ ಇತ್ಯಾದಿ ಸಿದ್ಧಿಸುವವು. ಈ ಮಧ್ಯೆ ಕೆಲವೊಂದು ಕಾರ್ಯವಿಘ್ನಗಳೂ ಕಷ್ಟಗಳೂ ಎದುರಾಗುವವು. ಮುಂದೆ ದಶಂಬರ  ರವರೆಗೆ ಧನವ್ಯಯ, ಚೋರಾಗ್ನಿ ಬಾಧೆ, ಗೃಹಕಲಹ, ಕೃಷಿ ನಷ್ಟ ಇತ್ಯಾದಿ ಎದುರಾಗುವವು.  ವ್ಯವಹಾರಗಳಲ್ಲಿ ಜಯಲಾಭಗಳಿದ್ದರೂ ಶಾರೀರಿಕ ಮಾನಸಿಕ ಕ್ಷೇಶಗಳಿರುತ್ತವೆ. ಒಳ್ಳೆಯ ಜನರೊಡನೆ ನಿಷ್ಠುರ, ದುರ್ಜನರ ಬಲೆಗೆ ಸಿಕ್ಕಿ ತೊಂದರೆಗೊಳ್ಳುವುದು, ಗುರುಜನರ ವಿರೋಧ, ದುಷ್ಟ ಪ್ರವೃತ್ತಿ, ಸಕಲ ಕಾರ್ಯಗಳಲ್ಲಿ ವೈಫಲ್ಯ, ಜ್ವರರೋಗಾದಿಗಳು, ಕಲಹದಿಂದ-ಶತ್ರುಕೃತ ದೋಶದಿಂದ ರಾಜೋಪದ್ರವ, ದ್ರವ, ಬುದ್ದಿಯ ಅಸ್ಥಿರತೆ, ವಂಚನೆ, ನೇತ್ರಬಾಧೆ ಇತ್ಯಾದಿಕಾಣಿಸೀತು. ಆದರೂ ಈ ಮಧ್ಯೆ ಕೆಲವೊಂದು ನಿಶ್ಚಿತ ಕಾರ್ಯಗಳು ನಡೆಯುವುದಲ್ಲದೆ ಭೂಸೆಂಬಂಧವಾದ ವ್ಯವಹಾರಗಳು ಸುಲಭವಾಗಿ ನಡೆಯಬಹುದು. ಉತ್ತಮ ಸ್ಥಾನಮಾನಾದಿಗಳು ದೊರಕುವುದು. ಆರೋಗ್ಯ ವೃದ್ಧಿಸುವುದು.

 
ವೃಶ್ಚಿಕರಾಶಿ:- ಭಾಗ್ಯಸ್ಥಾನದ ಗುರುವಿನಿಂದ ದೈವಬಲವಿದ್ದು ಮನೋನಿಶ್ಚಿತ ಕೆಲಸಗಳು ನಿರ್ವಿಘ್ನವಾಗಿ ನಡೆಯುವುದು. ವಿವಾಹಾದಿ ಶುಭ ಸಮಾರಂಭಗಳು ನಡೆಯುವುದು. ಉದ್ಯೋಗ ವ್ಯವಹಾರದಲ್ಲಿ ಕೆಲವು ಅನುಕೂಲಗಳು ಉಂಟಾಗುವುದು. ಆರ್ಥಿಕವಾಗಿ ಉತ್ತಮ ಅಭಿವೃದ್ಧಿಯಿದೆ. ಮನೆಯಲ್ಲಿ ಶಾಂತಿ, ಸುಖಸಂತೋಷ ಲಭಿಸುವುದು. ಉಳಿದಂತೆ ಪಂಚಮಸ್ಥಾನದ ಶನಿ, ಅನಿಷ್ಟಸ್ಥಾನಸ್ಥಿತ ರಾಹುಕೇತುಗಳು, ವರ್ಷದ ಉತ್ತರಾರ್ಧದಲ್ಲಿ ಮೂರು ತಿಂಗಳು ಕರ್ಮಸ್ಥಾನದ ಗುರು, ಕೆಲಸ ಕಾರ್ಯಗಳಲ್ಲಿ ವಿವಿಧರೀತಿಯ ಅಡಚಣೆಗಳೆದುರಾಗಿ ನಿರೀಕ್ಷಿತ ಫಲ ಸಿಗದು. ಸ್ಥಾನಮಾನಾದಿ ಹಾನಿ, ಧನಹಾನಿ, ಅಶುಭಗಳ ಅನುಭವ,ಸಂತಾನಸಂಬಂಧ ದುಃಖ, ಸಹನೆ ಕಳೆದುಕೊಳ್ಳದೆ ಸ್ವಸಾಮರ್ಥ್ಯದಲ್ಲಿ ಭರವಸೆಯಿಡಿ. ಸ್ಥಾನಮಾನ ಹಾಗೂ ಉದ್ಯೋಗ ವಿಸ್ತಾರವು ಈ ಕಾಲದಲ್ಲಿ ಸಂಭವಿಸುವುದು. ಮಾತಾಪಿತರು, ಗುರುಹಿರಿಯರ ಕುರಿತು ವಿಶೇಷ ಜಾಗ್ರತೆ ವಹಿಸಿ. ವಹಿಸಿ. "ಸುತಧನಪರಿಹೀನಃ ಪಂಚಮಸ್ಥ ಪ್ರಚುರ ಕಲಹಯುಕ್ತಶ್ಚಾರ್ಕಪುತೇ" ಶನಿಯು ಜನ್ಮರಾಶಿಯಿಂದ ಐದನೇರಾಶಿಯಲ್ಲಿ ಸಂಚರಿಸುವೆಕಾಲದಲ್ಲಿ ಸ್ವಜನರಲ್ಲಿ ವೈಮನಸ್ಸುಂಟಾಗುವುದು. ಇದು ವಿದ್ಯಾಭ್ಯಾಸ ಕುಂಠಿತಗೊಳ್ಳುವುದು. ಮಕ್ಕಳಿಗೂ ಉತ್ತಮ ಕಾಲವಲ್ಲ. ವ್ಯವಹಾರಗಳಲ್ಲಿ ಕೆಲವೊಂದು ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ಮಕ್ಕಳ ವಿಚಾರವಾಗಿ ಸಮಸ್ಯೆಗಳು ತೋರುವುದು. ಶನಿಶಾಂತಿ, ಶನಿ-ರಾಹು-ಕೇತುಗಳ ಪ್ರೀತ್ಯರ್ಥ ಯಥಾಶಕ್ತಿ ದೇವತಾಸೇವೆಗಳಿಂದ ಶುಭ.
ಮನಃಕ್ಷೇಶ, ಶತ್ರುಬಾಧೆ, ಹೃದಯಸಂಬಂಧೀ ಜಾಡ್ಯಗಳು, ಕಾರ್ಯಭಂಗ, ಪಿತ್ತೋಷ್ಣಬಾಧೆ ಇತ್ಯಾದಿಗಳಿರುತ್ತವೆ. ಮೇ 15 ರವರೆಗೆ ಶಾರೀರಿಕ ಆರೋಗ್ಯವು ಸುಧಾರಿಸುವುದು. ಮನೆಯಲ್ಲಿ ಸೌಕರ್ಯಗಳು ಉಂಟಾಗುವುದು. ಬಂಧುವೊಬ್ಬರಿಂದ ಸಹಕಾರ ಸಿಗುವುದು. ಆತ್ಮಸ್ಥೆರ್ಯ ವೃದ್ಧಿಸುವುದು. ಮುಂದೆ ಜೂನ್ 20 ರವರೆಗೂ ದೇಹಾರೋಗ್ಯದಲ್ಲಿ ಸುಧಾರಣೆಯಾಗುವುದು. ಹಲವು ಸಮಯದಿಂದ ಇದ್ದ ಸಮಸ್ಯೆಗೆ ಪರಿಹಾರ ಸಿಗುವುದು. ಮಾತಿನಲ್ಲಿ ವಿವಾದಗಳು ಉಂಟಾದೀತು. ಶತ್ರುಭಯಕಲಹಾದಿಗಳಿಂದ ಮುಕ್ತಿ, ಧಾತುದ್ರವ್ಯಗಳ ವ್ಯವಹಾರದಿಂದ ಲಾಭ, ಗೃಹಸೌಕರ್ಯ ಪ್ರಾಪ್ತಿ, ಬಂಧುಸಹಾಯ, ಇತ್ಯಾದಿಫಲಗಳು ಪ್ರಾಪ್ತವಾಗುವವು. ಆದರೂ ಬೇರೊಂದೆಡೆಯಿಂದ ಕೌಟುಂಬಿಕ ಭಿನ್ನಾಭಿಪ್ರಾಯ-ವಿರಸ ಉಂಟಾದೀತು. ಅಸಹನೆ-ದುರಾಸೆ ಹೆಚ್ಚುವುದು. ಉಬ್ಬಸ ಇತ್ಯಾದಿ ಉಸಿರಾಟದ ತೊಂದರೆಗಳು, ರಾಜಭಯ, ದುಃಖ, ಹಣದ ವ್ಯವಹಾರದಲ್ಲಿ ವಿರೋಧ ಫಲ ಇತ್ಯಾದಿಗಳು ಅಗೋಸ್ತು 17 ರವರೆಗೂ ಅನುಭವಕ್ಕೆ ಬರುವವು. ಮುಂದೆ ಒಕ್ಟೋಬರವರೆಗೆ ಕೆಲವೊಂದು ಕಾರ್ಯಗಳಲ್ಲಿ ವಿಘ್ನಗಳೆದುರಾದರೂ ಮುಂದೆ ಉತ್ತಮವಿದ್ದು ಧನಮಾನಾದಿಲಾಭ, ಅಧಿಕಾರ ಪ್ರಾಪ್ತಿ, ಅಧಿಕಾರಿ ಜನರ ಸಹಕಾರ, ಸ್ಥರಾಸ್ತಿ ಸಂಬಂಧ ವ್ಯವಹಾರಗಳಲ್ಲಿ ಜಯಲಾಭಾದಿಗಳು ಪ್ರಾಪ್ತವಾಗುವವು. ಕಷ್ಟಫಲಗಳು ಬಹುತರವಾಗಿ ಬಂದೊದಗುವವು. ಕೈಯಿಕ್ಕಿದ ಕಾರ್ಯಗಳಾವುವೂ ಕೈಗೂಡವು. ಮುಂದೆ  ಪರಿಸ್ಥಿತಿ ಉತ್ತಮಗೊಂಡು ಮನಸ್ಸಿಗೆ ಉತ್ಸಾಹ, ಭೂಸಂಬಂಧ ಹಾಗೂ ರಾಜಕೀಯಸಂಬಂಧ ವ್ಯವಹಾರಗಳಲ್ಲಿ ಜಯಲಾಭಗಳು ಪ್ರಾಪ್ತವಾಗುವವು.  ವರ್ಷಾಂತ್ಯದವರೆಗೂ ಪಿತ್ತೋಷ್ಣ ಪ್ರಕೋಪ, ಧನಹಾನಿ, ಶತ್ರುಪೀಡೆ, ಕಾರ್ಯಭಂಗ, ಗೃಹಸುಖಹಾನಿ ಇತ್ಯಾದಿ ಪ್ರಾಪ್ತವಾಗುವವು.

ಧನುರಾಶಿ:-ಗುರುವು ಈ ಸಮಯದಲ್ಲಿ ನಿಮ್ಮ ಜನ್ಮಾಷ್ಟಮ ರಾಶಿಯಲ್ಲಿ ಸಂಚರಿಸುತ್ತಿರುವನು. ಈ ಕಾಲದಲ್ಲಿ ದೈವಬಲವಿರದು. ಚತುರ್ಥದ ಶನಿಯೂ 9-8 ರ ಕೇತುವೂ ಅಶುಭಫಲೆದಾಯಕರು. ಆರೋಗ್ಯದಲ್ಲಿ ತೊಂದರೆಗಳು ತೋರುವುದು. ವೃತ್ತಿಕ್ಷೇತ್ರದಲ್ಲಿ, ಉದ್ಯೋಗ-ವ್ವಹಾರಗಳಲ್ಲಿ ಸೋಲುಂಟಾಗಬಹುದು. ಯಾವುದೇ ಕಾರ್ಯಗಳನ್ನು ಗ್ರಹಿಸಿದರೂ ಪ್ರಥಮದಲ್ಲಿ ವಿಘ್ನಗಳು ತೋರಬಹುದು. ಆರ್ಥಿಕವಾಗಿ ಖರ್ಚು ಹಾಗೂ ನಷ್ಟಗಳು ಉಂಟಾಗಬಹುದು. ಮನಸ್ಸು ಹೆಚ್ಚು ಚಂಚಲವಾಗಿ ನೆಮ್ಮದಿ ಕಡಿಮೆಯಾಗಬಹುದು. ಬಂಧು ಮಿತ್ರರೊಂದಿಗೆ ಅಸಮಾಧಾನಗಳು ಉಂಟಾಗಬಹುದು. ಮನಸ್ಸಿನಲ್ಲಿ ಕುಟಿಲತೆಯುಂಟಾಗದಂತೆ(ಕೆಟ್ಟ ಚಿಂತನೆ ಸತ್ಕರ್ಮಗಳನ್ನು ನಡೆಸಬೇಕು. ನರದ ತೊಂದರೆ ಹಾಗೂ ಸೊಂಟದಿಂದ ಕೆಳಗಿನಭಾಗದಲ್ಲಿ ನೋವು ಕಾಣಬಹುದು. ಗೃಹ, ವಾಹನಾದಿಗಳಲ್ಲಿ ಕೆಲವೊಂದು ಲೋಪದೋಷಗಳು ನಿಮ್ಮ ಅನುಭವಕ್ಕೆ ಬರುವುದು. ವಸ್ತುನಷ್ಟ, ಧನನಷ್ಟಾದಿಗಳೂ ಆಗುತ್ತಿರುವುದು. ವರ್ಷದ ಆರಂಭದಲ್ಲಿ ರಾಹು ತೃತೀಯದಲ್ಲಿ, ವರ್ಷದ ಉತ್ತರಾರ್ಧದಲ್ಲಿ ಮೂರು ತಿಂಗಳು ಗುರುವು ಭಾಗ್ಯಸ್ಥಾನದಲ್ಲಿ ಶುಭರು. ವಿವಾಹಾದಿ ಶುಭ ಸಮಾರಂಭಗಳು ನಡೆಯುವುದು. ಉದ್ಯೋಗ ವ್ಯವಹಾರದಲ್ಲಿ ಕೆಲವು ಅನುಕೂಲಗಳು ಉಂಟಾಗುವುದು. ಆರ್ಥಿಕವಾಗಿ ಉತ್ತಮ ಅಭಿವೃದ್ಧಿಯಿದೆ. ಯಥಾಶಕ್ತಿ ಶಿವಾರಾಧನೆ, ವಿಷ್ಣುಸೇವೆ, ಗಣಪತಿಸೇವೆಗಳಿಂದ ದೋಷಫಲಗಳು ಕಡಿಮೆಯಾಗುವುದು. ಸಂಸಾರದಲ್ಲಿ ಸಾಮರಸ್ಯದ ಕೊರತೆ, ಮಕ್ಕಳ ವಿಷಯವಾಗಿ ಸಮಸ್ಯೆ, ಮನಸ್ಸಿಗೆ ಕಿರಿಕಿರಿ, ನೌಕರರಿಂದ ಅಡಚಣೆ, ಅನಾರೋಗ್ಯ, ಶತ್ರುಪೀಡೆ, ಇತ್ಯಾದಿ ಎದುರಾಗುವವು. ಆರೋಗ್ಯದಲ್ಲಿ ಸುಧಾರಣೆ, ಗೃಹಸೌಕರ್ಯಪ್ರಾಪ್ತಿ, ಬಂಧುಸಹಕಾರ, ಆತ್ಮಸ್ಥೆರ್ಯ ವೃದ್ಧಿ, ಕೈಗೊಂಡ ಕಾರ್ಯಗಳಲ್ಲಿ ಜಯ, ಶತ್ರುಭಯಕಲಹಾದಿಗಳಿಂದ ಮುಕ್ತಿ ಇತ್ಯಾದಿಗಳಿರುತ್ತವೆ. ಮುಂದೆ ಅಗೋಸ್ತು 2 ರವರೆಗೂ ದೇಹಾರೋಗ್ಯದಲ್ಲಿ ಸುಧಾರಣೆ, ಹಲವು ಸಮಯದಿಂದ ಇದ್ದ ಸಮಸ್ಯೆಗೆ ಪರಿಹಾರ ಲಭ್ಯ. ಮಾತಿನಲ್ಲಿ ವಿವಾದಗಳು ಉಂಟಾದೀತು. ಕ್ರಯ ವಿಕ್ರಯೆಗಳಲ್ಲಿ ಲಾಭ. ಶತ್ರುಭಯಕಲಹಾದಿಗಳಿಂದ ಮುಕ್ತಿ, ಇತ್ಯಾದಿ ಮುಕ್ತಿ, ಇತ್ಯಾದಿ ಫಲಗಳು ಇರುತ್ತವೆ. ಈ ಮಧ್ಯೆ ಆಹಾರ, ವ್ಯತ್ಯಾಸದಿಂದ ದೇಹಾರೋಗ್ಯದಲ್ಲಿ ಏರುಪೇರು, ಮೂತ್ರಾಶಯ, ಉದರ ಹಾಗೂ ಪಿತ್ತಸಂಬಂಧೀ ವ್ಯಾಧಿಗಳ ಬಗ್ಗೆ ಜಾಗ್ರತೆವಹಿಸಿ. ಸಣ್ಣಪುಟ್ಟ ಕಾರ್ಯಗಳಲ್ಲಿ ವಿಘ್ನಗಳುಂಟಾಗುವುದು. ಸಮೀಪದ ಸಂಬಂಧಿಕರ ಅಗಲುವಿಕೆಯು ಉಂಟಾಗಬಹುದು. ಹಣದ ವ್ಯವಹಾರದಲ್ಲಿ ವಿರೋಧ ಫಲ ಇತ್ಯಾದಿ ಸಪ್ಟೆಂಬರ  ರವರೆಗೂ ಇರುತ್ತವೆ. ಮುಂದೆ ನವಂಬರೆ 16 ರವರೆಗೆ ವ್ಯವಹಾರದಲ್ಲಿ ತೊಂದರೆಗಳು ಕಡಿಮೆಯಾಗುವುದು. ಹೊಸತಾದ ಯೋಜನೆಗಳ ಅನುಷ್ಠಾನಕ್ಕೆ ಕಾಲವು ಪಕ್ವವಾಗಿರುವಂತಿದೆ. ಆರ್ಥಿಕ ಉನ್ನತಿ. ಆರೋಗ್ಯವೃದ್ಧಿ, ಸ್ಥಾನಮಾನಾದ್ಯುತ್ಕರ್ಷೆ, ಅಧಿಕಾರಿವರ್ಗದವರಿಂದ ಪ್ರಯೋಜನ ಪಡೆಯುವಿರಿ.  ಉದ್ಯೋಗ, ಗೃಹಕೃತ್ಯಗಳಲ್ಲಿ ತೊಂದರೆ, ಕಾರ್ಯವೈಫಲ್ಯ, ಧನಹಾನಿ, ಬುದ್ದಿಯ ಅಸ್ಥಿರತೆ ಇತ್ಯಾದಿ ಎದುರಾಗುವವು. ಮುಂದೆ ವರ್ಷಾಂತ್ಯದವರೆಗೂ ಇತರರ ಸಹಕಾರದಿಂದ ವ್ಯವಹಾರಗಳು ಉತ್ತಮಗೊಳ್ಳುವುದು. ಧನಸುವರ್ಣಾದಿಲಾಭ, ಮಕ್ಕಳಿಂದ ಶುಭಫಲ ಪ್ರಾಪ್ತವಾಗುವದು. ಆರೋಗ್ಯ ಸುಧಾರಿಸುವದು. ರಕ್ತದೋಷ, ದುರ್ಜನರ ಸಂಸರ್ಗದಿಂದ ಅಶುಭಫಲ, ಬಂಧುದುಃಖ ಎದುರಾಗುವದು.

ಮಕರರಾಶಿ:- ಗುರುವು ಸಪ್ತಮದಲ್ಲಿದ್ದು ಉತ್ತಮ ದೈವಬಲವಿದೆ. ಶನಿಯೂ ವರ್ಷವಿಡೀ ತೃತೀಯಸ್ಥಾನದಲ್ಲಿ ಸಂಚರಿಸುತ್ತಾ ಕೆಲವೊಂದು ಅನುಕೂಲಗಳು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ವಿವಾಹ ಶುಭಶೋಭನಾದಿ ಕೌಟುಂಬಿಕ ಕಾರ್ಯಗಳು ನಡೆಯಲು ಉತ್ತಮ ಕಾಲವಾಗಿರುತ್ತದೆ. ಭೂಮಿ, ವಾಹನಾದಿ ಸುಖಗಳು ಉಂಟಾಗುವುದು. ಪತ್ನಿಗೂ ಅನುಕೂಲ ಕಾಲವಾಗಿರುತ್ತದೆ. ದಾಂಪತ್ಯದಲ್ಲಿ ಸುಖಸಂತೋಷಗಳು, ಸಂತಾನಲಾಭ, ಧನಲಾಭ, ಶುಭಯಾತ್ರೆ, ಉತ್ತಮ ಬುದ್ಧಿಶಕ್ತಿ ಪ್ರಾಪ್ತವಾಗುವುದು. ವಿಶೇಷ ಆರೋಗ್ಯ ಹಾಗೂ ಸೌಲಭ್ಯವನ್ನು ಹೊಂದುವಿರಿ. ಉತ್ತಮ ನಿರ್ಧಾರಗಳು ನಿಮ್ಮಿಂದ ಉಂಟಾಗುವುದು. ಸಹೋದರ ಸಮಾನರಿಂದ ಸುಖ ಹಾಗೂ ಅನುಕೂಲಗಳು ಕಂಡುಬರುವುದು. ಒಡನಾಡಿಗಳಿಗೆ ಕೆಲವೊಂದು ತೊಂದರೆಗಳೂ ಉಂಟಾಗುವುದು. ಸಾಂಪತ್ತಿಕ ಅಭಿವೃದ್ಧಿಗೆ ಇದು ಅನುಕೂಲ ಕಾಲ, ಕೌಟುಂಬಿಕ  ಅಭಿವೃದ್ಧಿಯಾಗುವುದು. ಆದರೂ ವರ್ಷದ ಉತ್ತರಾರ್ಧದಲ್ಲಿ ಮೂರು ತಿಂಗಳು ಗುರುವು ಅಷ್ಟಮದಲ್ಲಿ ಸಂಚರಿಸುತ್ತಾ ರಾಹುಕೇತುಗಳೂ ವರ್ಷಪೂರ್ತಿ ಅನಿಷ್ಟಸ್ಥಾನಸ್ಥಿತರಾಗಿ ಕೆಲವೋಂದು ಕಷ್ಟನಷ್ಟಗಳು ಎದುರಾಗುವವು. ಆರೋಗ್ಯದಲ್ಲಿ ಗುರುತರದ ತೊಂದೆರೆಗಳು ತೋರುವುದು. ವೃತ್ತಿಕ್ಷೇತ್ರದಲ್ಲಿ, ಉದ್ಯೋಗ-ವ್ವಹಾರಗಳಲ್ಲಿ ಸೋಲುಂಟಾಗಬಹುದು. ಯಾವುದೇ ಕಾರ್ಯಗಳನ್ನು ಗ್ರಹಿಸಿದರೂ ಪ್ರಥಮದಲ್ಲಿ ವಿಘ್ನಗಳು ತೋರಬಹುದು. ಆರ್ಥಿಕವಾಗಿ ಖರ್ಚು ಹಾಗೂ ನಷ್ಟಗಳು ಉಂಟಾಗಬಹುದು. ಅನೇಕ ರೀತಿಯ ಚಿಂತೆಗಳು ಕಾಡಬಹುದು. ಗಣಪತಿ-ಸುಬ್ರಹ್ಮಣ್ಯ-ವಿಷ್ಣುಕ್ಷೇತ್ರಗಳಲ್ಲಿ ಯಥಾಶಕ್ತಿ ಸೇವೆ ಸಲ್ಲಿಸುವುದರಿಂದ ಶುಭ.
 ಔದ್ಯೋಗಿಕವಾಗಿಯೂ ಆರ್ಥಿಕವಾಗಿಯೂ ಅಭಿವೃದ್ಧಿಯಿದೆ. ಸಾಂಸಾರಿಕವಾಗಿಯೂ ಉತ್ತಮ ಕೆಲಸಗಳಾಗಲಿವೆ. ವ್ಯವಹಾರಗಳು ಉತ್ತಮಗೊಳ್ಳುವುದು. ಆರೋಗ್ಯವು ವೃದ್ಧಿಸುವುದು. ಕಂಬಳಿ, ಧಾತುದ್ರವ್ಯಗಳು ಇತ್ಯಾದಿಗೆಳಿಂದ ಲಾಭ, ಧನಸುವರ್ಣಾದಿಲಾಭ, ಮಕ್ಕಳಿಂದ ಶುಭಫಲ, ಆದರೂ ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಕಾಣಿಸೀತು. ಗೃಹಸುಖವಿರದು. ಮುಂದೆ ಜುನ್ 15 ರವರೆಗೆ ಗೃಹಸೌಕರ್ಯಕ್ಕೆ ಖರ್ಚು, ಕೌಟುಂಬಿಕ ಸಾಮರಸ್ಯದ ಕೊರತೆ, ಮಕ್ಕಳಿಂದ ಮತ್ತು ಅಧೀನ ನೌಕರರಿಂದ ಅಡಚೆಣೆಗಳು -ಸಮಸ್ಯೆಗಳು, ಶತ್ರುಪೀಡೆ, ಅನಾರೋಗ್ಯ, ಕಲಹ ಎದುರಾದೀತು. ಮುಂದೆ ಜುಲಾಯಿ 16 ರವರೆಗೆ ದೇಹಾರೋಗ್ಯದಲ್ಲಿ ಸುಧಾರಣೆ,
ಗೃಹಸೌಕರ್ಯಗಳು ಹೆಚ್ಚುವುದು. ಆತ್ಮಸ್ಥೆರ್ಯ ವೃದ್ಧಿಸುವುದು. ಮುಂದೆ ಒಕ್ಟೋಬರ 17 ರವರೆಗೆ ಧನವ್ಯಯ, ಕಳ್ಳರ ಹಾಗೂ ಶತ್ರುಗಳ ಹಾವಳಿ, ಕೃಷಿಪಶ್ಚಾದಿ ಹಾನಿ ಇತ್ಯಾದಿ ಅನಿಷ್ಟಫಲಗಳೇ ಒಂದರಮೇಲೊಂದು ಬಂದೊದಗುವವು. ಆದರೂ ಈ  ಮಧ್ಯೆ ಪ್ರಾರಂಭದಲ್ಲಿ ದೀರ್ಘಕಾಲದ ಸಮಸ್ಯೆಗೆ ಪರಿಹಾರ, ಕಾರ್ಯಜಯ, ಬಂಧುಸಹಕಾರ ಇತ್ಯಾದಿ ಅನುಭವಕ್ಕೆ ಬರುವವು, ಮುಂದೆ ದಶಂಬರ 16 ರವರೆಗೂ ಕೆಲವೊಂದು ಶುಭಫಲಗಳಿದ್ದು ರಾಜಪ್ರೀತಿ, ತೊಡಗಿದ ಕಾರ್ಯಗಳಲ್ಲಿ ಜಯಲಾಭಾದಿಗಳಿದ್ದು ಅನಂತರ ಒಂದೆಡೆಯಿಂದ ಧನವ್ಯಯ, ತಿರುಗಾಟ, ಕಾರ್ಯವಿಘ್ನ, ಮನಃಕ್ಷೇಶ ಕಾಣಿಸೀತು. ಹೊಟ್ಟೆ ಹಾಗೂ ಕಣ್ಣಿಗೆ ಸಂಬಂಧಿಸಿ ಹೆಚ್ಚು  ಎಚ್ಚರಿಕೆ ವಹಿಸಿ. ಪೈತ್ತಿಕ ತೊಂದರೆಗಳಿವೆ. ಪತ್ನಿಗೂ ಈ ಸಮಯ ಅನುಕೂಲಕರವಲ್ಲ. ಮನಸ್ಸಿಗೆ ವ ನೆಮ್ಮದಿ ಕಡಿಮೆಯಾಗುವುದು. ಅಸಹನೆ ಹೆಚ್ಚಿತು. ಶಾರೀರಿಕ ಅಪಾಯಗಳು ಉಂಟಾಗಬಹುದಾದುದರಿಂದ ಜಾಗ್ರತೆ ವಹಿಸಿರಿ. ಬೇರೊಂದೆಡೆಯಿಂದ ವಿವಿಧ ಮೂಲಗಳಿಂದ ಧನಾಗಮ, ಮಿತ್ರಜನರ ಸಹಾಯ, ಆರೋಗ್ಯವೃದ್ಧಿ, ಹೊಸಕಾರ್ಯಪ್ರವೃತ್ತಿ ಇತ್ಯಾದಿ  ಇರುತ್ತವೆ. ಮುಂದೆ ವರ್ಷಾಖೈರಿವರೆಗೂ ಕೈಗೊಂಡ ಕಾರ್ಯಗಳಲ್ಲಿ ಜಯಲಾಭಾದಿಗಳು, ಜನಪ್ರಿಯತೆ, ಜನನಾಯಕತ್ವ, ಭೂಧನಾದಿ ಲಾಭ ಇತ್ಯಾದಿಗಳಿರುತ್ತವೆ.

ಕುಂಭರಾಶಿ:- ದ್ವಿತೀಯಸ್ಥಾನದ ಶನಿ, ಜನ್ಮ-ವ್ಯಯಸ್ಥಾನದ ರಾಹು, ಸಪ್ತಮದ ಕೇತು, ಶತ್ರುಸ್ಥಾನದ ಗುರು-ದೈವಕೃಪೆಯ ಅಭಾವ ತೋರುವುದು. ಮಾನಸಿಕ ಖಿನ್ನತೆಯಿಂದ ಬಳಲುವಿರಿ. ಸಾಮಾಜೆಕ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಇಷ್ಟಪಡುವಿರಿ. ಆರೋಗ್ಯದ ವಿಚಾರವಾಗಿ ಜಾಗ್ರತೆ ವಹಿಸಬೇಕು. ಕೆಲವು ವಿಚಾರಗಳಲ್ಲಿ ಅನ್ಯರೊಂದಿಗೆ ಮನಸ್ತಾಪ ಉಂಟಾಗಬಹುದು. ಸ್ತ್ರೀಸುಖಗೃಹಸುಖಾದಿ ಹಾನಿ, ಮಾನಸಿಕ ಅಶಾಂತಿ, ಶತ್ರುಪೀಡೆ, ರೋಗಭಯ ಕಾಣಿಸೀತು.ಶಾರೀರಿಕ ತೊಂದರೆ ಹಾಗೂ ಜಾಡ್ಯತೆ ಕಾಣಿಸೀತು. ಅಲ್ಲದೆ ಶಾರೀರಿಕ ಶ್ರಮವನ್ನೂ ಅನುಭವಿಸುವಿರಿ, ಸ್ಫೂರ್ತಿ ಕಳಕೊಂಡು ಕೆಲಸದಲ್ಲಿ ಅನಾಸಕ್ತಿ ತೋರುವಿರಿ. ಮನೆಯವರೊಂದಿಗೆ ಹೊಂದಾಣಿಕೆ ಕಡಿಮೆಯಾದಂತೆ ತೋರುವುದು. ಮನಸ್ಸನ್ನು ಏಕಾಗ್ರಗೊಳಿಸಲು ಪ್ರಯತ್ನಿಸುವುದರಿಂದ ವಿಶಾಲಭಾವನೆಯು ನಿಮ್ಮಲ್ಲಿ ಉಂಟಾಗುವುದು ಹಾಗೂ ಹಲವು ಸಮಸ್ಯೆಗಳಿಗೆ ಪರಿಹಾರವೂ ದೊರಕುವುದು. ಮೋಸ-ವಂಚನೆ, ಕಳ್ಳತನ, ಕಲಹ ಇತ್ಯಾದಿ ಅನುಭವವಾಗುವುದು. ಶಾರೀರಿಕ ಸುಖ ಕಡಿಮೆಯಾಗುವುದು. ವ್ಯವಹಾರಾದಿಗಳಲ್ಲಿ ಅನುಕೂಲ ಕಡಿಮೆಯಾಗುವುದು. ಧನಾದಾಯವಾಗಲು ವಿಶೇಷ ಪ್ರಯತ್ನ ಕಷ್ಟ ಪಡಬೇಕಾಗುವುದು. ಧನಾದಾಯವಾದರೂ ಹೆಚ್ಚು ಖರ್ಚುಗಳು ಉಂಟಾಗಬಹುದು. ವರ್ಷದ ಉತ್ತರಾರ್ಧದಲ್ಲಿ ಮೂರುತಿಂಗಳು ಗುರುವು ಅನುಕೂಲವಾಗಿ ವಿವಾಹ ಶುಭಶೋಭನಾದಿ ಕೌಟುಂಬಿಕ ಕಾರ್ಯಗಳು ನಡೆಯಲು ಉತ್ತಮಕಾಲವಾಗಿರುತ್ತದೆ. ಭೂಮಿ, ವಾಹನಾದಿ ಸುಖಗಳು ಉಂಟಾಗುವುದು. ಶನಿಶಾಂತಿ, ಗುರು-ಶನಿ-ರಾಹು ಪ್ರೀತ್ಯರ್ಥ ಯಥಾಶಕ್ತಿ ದೇವತಾರಾಧನೆ ನಡೆಸುವುದರಿಂದ ಶುಭ.
 ವಿಷಯಸುಖಾನುಭವಗಳಿಗೆ ಕೊರತೆಯಿಲ್ಲವಾದರೂ ಆರ್ಥಿಕ ಅಡಚಣೆ, ಅಧಿಕಾರಿ ಜನರ ಕಿರುಕುಳ ಮುಂತಾದವು ತಪ್ಪದು. ಮುಂದೆ ಮೇ 15 ರವರೆಗೆ ಇಷ್ಟವಸ್ತು ಪ್ರಾಪ್ತಿ, ಸ್ವಜನರಿಂದ ಸುಖ, ಪ್ರಭುಜನರ ಪ್ರೀತಿ ಇತ್ಯಾದಿಗಳಿದ್ದು ವ್ಯವಹಾರಗಳು ಉತ್ತಮಗೊಳ್ಳುವುದು. ಇತರರಿಂದ ಸಹಕಾರವನ್ನು ಪಡೆಯುವಿರಿ. ಆರೋಗ್ಯವು ವೃದ್ಧಿಸುವುದು. ಮಕ್ಕಳಿಂದ ಶುಭಫಲ, ಕಂಬಳಿ, ಧಾತುದ್ರವ್ಯಗಳು ಇತ್ಯಾದಿಗಳಿಂದ ಲಾಭವಿದೆ. ಮುಂದೆ ಜುಲಾಯಿ 16 ರವರೆಗೆ ಅನಿರೀಕ್ಷಿತ ಕಷ್ಟ ತೊಂದರೆಗಳು ಬಂದೊದಗಿ ಮನಸ್ಸಿಗೆ ನೆಮ್ಮದಿಯಿರದು. ಗೃಹಸುಖವು ಸಾಕಷ್ಟಿರುವುದಾದರೂ ಆರೋಗ್ಯವು ಚೆನ್ನಾಗಿರದು. ನಂತರ ಅಗೋಸ್ತು 17 ರವರೆಗೆ ಆರ್ಥಿಕ ಪ್ರಗತಿ, ಸ್ಥಾನಾಂತರ ಲಾಭ, ಕಾರ್ಯಸಿದ್ಧಿ, ಸತ್ಸಹವಾಸ ಇತ್ಯಾದಿ ಇಷ್ಟಫಲಗಳು ಅಧಿಕ. ಮುಂದೆ ನವಂಬರ 16 ರವರೆಗೆ ವ್ಯವಹಾರದಲ್ಲಿ ಕಷ್ಟನಷ್ಟಗಳು, ಸಾಂಸಾರಿಕ ಅಡಚಣೆ ಮೊದಲಾದ ಅನಿಷ್ಟಫಲಗಳು ಒಂದಿಲ್ಲೊಂದು ರೀತಿಯಿಂದ ಬಂದೊದಗುತ್ತವೆ. ಆದರೂ ಇನ್ನೊಂದೆಡೆ ಹಲವು ಸಮಯದಿಂದ ಇದ್ದ ಸಮಸ್ಯೆಗೆ ಪರಿಹಾರ ಸಿಗುವುದು. ಮನಸ್ಸಿನಲ್ಲಿ ನಡೆಸಲು ಉದ್ದೇಶಿಸಿದ ಕಾರ್ಯವು ನಡೆಯುವುದು. ಮಾತಿನಲ್ಲಿ ನೀವು ವಿವಾದಗಳು ಉಂಟಾದೀತೆಂದು ಜಾಗ್ರತೆ ವಹಿಸುವಿರಿ. ಹಿಂದಿನ ಪ್ರತಿಕೂಲ ಪರಿಸ್ಥಿತಿಯು ಸುಧಾರಿಸತೊಡಗಿ ಆತಂಕ ಕಡಿಮೆಯಾದೀತು. ಜನರ ಗೆಳೆತನ, ಶತ್ರುಗಳ ಪರಾಭವ, ಕಾರ್ಯಸಿದ್ದಿ, ಅಧಿಕಾರಿ ಜನರ ಸಹಕಾರ ಮುಂತಾದವು  ಇರುತ್ತವೆ. ಈ ಅವಧಿಯಲ್ಲಿ ಇಚ್ಛಿತ ಕಾರ್ಯಗಳೆಲ್ಲವೂ ಪ್ರಾಯಃ ಈಡೇರುವವು. ನಂತರ ವರ್ಷಾಪೈರಿಯ ದಿನಗಳಲ್ಲಿ ಹಿಂದಿನ ಅನಿಷ್ಟ ಫಲಗಳೆಲ್ಲವೂ ಪುನಃ ಕಾಣಿಸತೊಡಗುವವು. ಬೇರೊಂದೆಡೆಯಿಂದ ಸತ್ಕಾರ್ಯಪ್ರವೃತ್ತಿ, ಸತ್ಸಹವಾಸ, ಗುರುಜನಾನುಗ್ರಹ, ವಿವಿಧ ಮೂಲಗಳಿಂದ ಧನಾಗಮ, ಹೀಗೆ ಇಷ್ಟಾನಿಷ್ಟ ಫಲಗಳು ಒಟ್ಟಿಗೆ ಪ್ರಾಪ್ತವಾಗುವವು.

 
ಮೀನರಾಶಿ:- ಗುರುವು ಈ ವರ್ಷ ಪಂಚಮದಲ್ಲಿ ಸಂಚರಿಸುತ್ತಿರುವುದರಿಂದ ದೈವಬಲವಿದೆ. ಗೃಹದಲ್ಲಿ ಶುಭಕಾರ್ಯಗಳು ನಡೆಯುವುದು. ಸಾಂಸಾರಿಕ ಹಾಗೂ ಕೌಟುಂಬಿಕ ಅಭಿವೃದ್ಧಿಯಿದೆ.ನೂತನ ವೃತ್ತಿ ಕೈಗೊಳ್ಳಬಹುದು. ಹೊಸ ಮನೆ ಅಥವಾ ಹೊಸ ಪರಿಸರಕ್ಕೆ ಹೋಗಬೇಕಾಗಬಹುದು. ಆರ್ಥಿಕವಾಗಿ ಅಭಿವೃದ್ಧಿ ಕಾಣಬಹುದು. ಮಕ್ಕಳ ಕಾರಣ ಸಂತೋಷದಾಯಕ ವಾರ್ತೆ ಬರುವುದು. ಕೆಲವು ಸಮಯದಿಂದ ನಡೆಯದೆ ಬಾಕಿಯಾಗಿರುವ ಕಾರ್ಯವು ನಡೆಯಲು ಅನುಕೂಲ. ವಿದ್ಯಾಭ್ಯಾಸ ಹಾಗೂ ವಿದ್ಯೆ-ಬುದ್ದಿಮತ್ತೆಗೆ ಸಂಬಂಧಿಸಿದ ವ್ಯವಹಾರ/ಚಟುವಟಿಕೆಗಳಲ್ಲಿ ತೊಡಗಿದವರು ಉತ್ತಮ ಸಾಧನೆ ತೋರುವಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಬುಧವಾರ ಗಣೇಶನ ಅನುಗ್ರಹಕ್ಕೆ ಈ ಸ್ತೋತ್ರ ಓದಿ