ಬೆಂಗಳೂರು: ದಿನಕ್ಕನುಗುಣವಾಗಿ ಕೆಲಸ ಮಾಡಿದ್ದಲ್ಲಿ ದೇವಾನು ದೇವತೆಗಳು ನಮ್ಮ ಬೇಡಿಕೆಗಳನ್ನು ಈಡೇರಿಸಿ, ಅವರ ಕೃಪೆ ನಮ್ಮ ಮೇಲೆ ನಿರಂತರ ಉಳಿಯುತ್ತದೆ ಎಂಬ ನಂಬಿಕೆಯಿದೆ.
ಮಂಗಳವಾರದ ದಿನವನ್ನು ಹನುಮಂತನ ದಿನವೆಂದು ಪರಿಗಣಿಸಲಾಗುತ್ತದೆ. ಅದಲ್ಲದೆ ಮಂಗಳವಾರ ಮಂಗಳ ಗ್ರಹದ ಅಂಶವೆಂದು ಪರಿಗಣಿಸಿದ್ದು, ಈ ದಿನದಂದು ಹನುಮಂತ ಆರಾಧನೆಯನ್ನು ಮಾಡಿದ್ದಲ್ಲಿ ಎಲ್ಲ ತೊಂದರೆಗಳು ದೂರವಾಗುತ್ತದೆ ಎಂಬ ನಂಬಿಕೆಯಿದೆ.
ಹಾಗೆಯೇ ಈ ದಿನದಂದು ಗೊತ್ತಿಲ್ಲದೆ ಮಾಡುವ ಕೆಲ ತಪ್ಪಿನಿಂದ ನಷ್ಟ, ತೊಂದರೆಯನ್ನು ಎದುರಿಸಬಹುದು.
ಅನೇಕ ಸಂಸ್ಕೃತಿಗಳು ಮತ್ತು ಧರ್ಮಗಳಲ್ಲಿ ಮಂಗಳವಾರವನ್ನು ದುರದೃಷ್ಟಕರ ದಿನವೆಂದು ಪರಿಗಣಿಸಲಾಗುತ್ತದೆ. ಮಂಗಳವಾರದಂದು ಯಾರಿಂದಲೂ ಎರವಲು ಪಡೆದದ್ದಲ್ಲಿ ದುರದೃಷ್ಟದ ಸೂಚನೆ ಎನ್ನುತ್ತಾರೆ. ಇದಕ್ಕೆ ಕಾರಣ ಮಂಗಳವಾರವನ್ನು ಯುದ್ಧ ಮತ್ತು ಸಂಘರ್ಷದ ದಿನ ಎಂದು ಕರೆಯಲಾಗುತ್ತದೆ. ಇದಲ್ಲದೆ, ಏನನ್ನಾದರೂ ಎರವಲು ಪಡೆಯುವುದು ನಿಮ್ಮ ಜೀವನದಲ್ಲಿ ದುರದೃಷ್ಟವನ್ನು ತರುತ್ತದೆ ಎಂದು ಜನರು ನಂಬುತ್ತಾರೆ. ಈ ದಿನದಂದು ಯಾರಿಗೂ ವಸ್ತುವನ್ನು ನೀಡುವುದಾಗಿ ಅಥವಾ ಯಾರಿಂದಲು ವಸ್ತುವನ್ನು ಸಾಲವನ್ನಾಗಿ ಪಡೆಯುವುದಾಗಿ ಮಾಡಬಾರದು ಎನ್ನುತ್ತಾರೆ.
ಮಂಗಳವಾರ ಯಾಕೆ ಈ ಕೆಲಸಗಳನ್ನು ಮಾಡಬಾರದು ಎಂದರೆ, ಮಂಗಳವಾರ ಯುದ್ಧದ ದೇವರು ಮಂಗಳನೊಂದಿಗೆ ಸಂಬಂಧಿಸಿದೆ. ಈ ದಿನದಂದು ಏನನ್ನಾದರೂ ಎರವಲು ಪಡೆಯುವುದು ನಿಮ್ಮ ಜೀವನದಲ್ಲಿ ಅವ್ಯವಸ್ಥೆ ಮತ್ತು ವಿನಾಶವನ್ನು ತರಬಹುದು ಎಂಬುದು ನಂಬಿಕೆಯಿದೆ.