ಇಂದು ಗೌರಿ ಹಬ್ಬವನ್ನು ದೇಶದಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ನಾಳೆಯಿಂದ ಗಣೇಶ ಹಬ್ಬ ಆಚರಿಸಲಾಗುತ್ತದೆ. ದೇಶದಾದ್ಯಂತ ಗಣೇಶ ಹಬ್ಬವನ್ನು ಅತ್ಯಂತ ಸಂಭ್ರಮ ಹಾಗಗೂ ಸಡಗರದಿಂದ ಆಚರಿಸಲಾಗುತ್ತದೆ.
ಭಾದ್ರಪದ ಶುಕ್ಲದ ಚತುರ್ಥಿಯಂದು ಗಣಪತಿಯ ಜನನವಾಯಿತು. ಈ ವಿಶೇಷ ದಿನದಂದು ಗಣಪತಿ ವಿಗ್ರಹವನ್ನು ಮನೆಗೆ ತಂದು ಪ್ರತಿಷ್ಠಾಪಿಸಿ, ಹತ್ತು ದಿನ ವಿಶೇಷ ಪೂಜೆ ಮಾಡುತ್ತಾರೆ.
ಆದರೆ ಈ ವಿಶೇಷ ದಿನದಂದು ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ, ಪೂಜೆ ಮಾಡುವಾಗ ಯಾವುದೇ ಕಾರಣಕ್ಕೂ ಕೆಲ ತಪ್ಪುಗಳನ್ನು ಮಾಡಬಾರದು. ಇದರಿಂದ ಮನೆಗೆ ಶ್ರೇಯಸ್ಸಲ್ಲ ಎಂದು ಹೇಳಲಾಗುತ್ತದೆ.
ಗಣೇಶ ಮೂರ್ತಿಯನ್ನು ತರುವಾಗ ಮಧ್ಯಮ ಗಾತ್ರದ ಮೂರ್ತಿಯನ್ನು ತರಬೇಕು. ಇಂತಹ ಮೂರ್ತಿಗಳು ಶುಭವಾಗಿದ್ದು, ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಬೀರುತ್ತದೆ.
ಸೊಂಡಿಲಿನ ದಿಕ್ಕನ್ನು ಗಮನಿಸಿ, ಮನೆಯಲ್ಲಿ ಪೂಜಿಸಲು ವಾಮಾವರ್ತಿ ಅಥವಾ ಎಡಕ್ಕೆ ಬಾಗಿದ ಸೊಂಡಿಲಿನ ಮೂರ್ತಿಯನ್ನು ತರುವುದು ಅತ್ಯಂತ ಶುಭಕರ. ಇದು ಮನೆಗೆ ಯಶಸ್ಸು ಮತ್ತು ಸಮೃದ್ಧಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ.
ಿನ್ನೂ ಮನೆಯಲ್ಲಿ ಪೂಜಿಸಲು ಕುಳಿತಿರುವ ಭಂಗಿಯ ಮೂರ್ತಿ ಅತ್ಯಂತ ಶ್ರೇಷ್ಠ. ಈ ಮೂರ್ತಿಯನ್ನು ಪೂಜಿಸುವುದು ಸುಲಭ. ದಕ್ಷಿಣಮುಖಿ ಅಥವಾ ಬಲಕ್ಕೆ ಬಾಗಿದ ಸೊಂಡಿಲಿನ ಮೂರ್ತಿಯ ಪೂಜಾ ನಿಯಮಗಳು ಕಠಿಣವಾಗಿರುತ್ತವೆ.